Govt Free Housing Schemes: ನಮ್ಮ ರಾಜ್ಯದಲ್ಲಿ ಬಹಳಷ್ಟು ಜನರಿಗೆ ಸ್ವಂತ ಮನೆ ಇಲ್ಲ, ಆರ್ಥಿಕವಾಗಿ ಒಳ್ಳೆಯ ಸ್ಥಿತಿಯಲ್ಲಿ ಇರದ ಕಾರಣ ಇವರಿಗೆ ಸ್ವಂತ ಮನೆ ಮಾಡಿಕೊಳ್ಳಲು ಸಾಧ್ಯ ಆಗಿರುವುದಿಲ್ಲ. ಅಂಥವರಿಗೆ ಈಗ ಸರ್ಕಾರ ಒಂದು ಹೊಸ ಯೋಜನೆ ತಂದಿದೆ. ಈ ಯೋಜನೆಯ ಮೂಲಕ ಮನೆ ಇಲ್ಲದೇ ಇರುವ ಜನರಿಗೆ ಸ್ವಂತ ಮನೆ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಈ ಯೋಜನೆಯನ್ನು ವಿಶೇಷವಾಗಿ ಹಿಂದುಳಿದ ಜನರಿಗಾಗಿ ತರಲಾಗಿದೆ.
ಜನರು ಸರ್ಕಾರದ ಸಹಾಯ ಪಡೆದು ಈ ಯೋಜನೆಯ ಮೂಲಕ ಹೊಸ ಮನೆ ಮಾಡಿಕೊಳ್ಳಬಹುದು. ಈ ಯೋಜನೆಯ ಮೂಲಕ ಸರ್ಕಾರದ ಸಹಾಯ ಪಡೆಯಲು, ಕೆಲವು ಅರ್ಹತೆಗಳು ದಾಖಲೆಗಳು ಬೇಕಾಗುತ್ತದೆ. ಅವುಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..
ಈ ಯೋಜನೆಯ ಮೂಲಕ ಸ್ವಂತ ಮನೆ ಪಡೆಯಲು ಬೇಕಾಗುವ ದಾಖಲೆಗಳು ಹೀಗಿವೆ..
ಆಧಾರ್ ಕಾರ್ಡ್
ರೇಷನ್ ಕಾರ್ಡ್
ಕ್ಯಾಸ್ಟ್ ಸರ್ಟಿಫಿಕೇಟ್
ಬೆಂಗಳೂರಿನಲ್ಲೇ ಕನಿಷ್ಠ ಒಂದು ವರ್ಷ ನೆಲೆಸಿದ್ದಾರೆ ಎನ್ನುವುದಕ್ಕೆ ಸಾಕ್ಷಿ ವಾಸಸ್ಥಳ ದೃಢೀಕರಣ ಪತ್ರ
ಬ್ಯಾಂಕ್ ಅಕೌಂಟ್ ಡೀಟೇಲ್ಸ್
ದಿವ್ಯಂಗ ವ್ಯಕ್ತಿಗಳ ಪ್ರಮಾಣ ಪತ್ರ.
ವಸತಿ ಯೋಜನೆಗಾಗಿ ಅರ್ಜಿ ಸಲ್ಲಿಸುವ ವಿಧಾನ ಹೀಗೆ..
*ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲಿಗೆ ನೀವು https://ashraya.karnataka.gov.in/nannamane/index.aspx ಈ ಲಿಂಕ್ ಓಪನ್ ಮಾಡಬೇಕು.
ಹೊಸ ಪೇಜ್ ಓಪನ್ ಆದಾಗ, ಅದಲ್ಲಿ ಅಪ್ಲೈ ಆನ್ಲೈನ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಈಗ ನೀವು ನಿಮ್ಮ ಜಾಗದ ವಿಧಾನಸಭಾ ಕ್ಷೇತ್ರ, ಹಾಗೂ ನಿಮ್ಮ ವಲಯವನ್ನು ಆಯ್ಕೆ ಮಾಡಬೇಕು ನಂತರ ನಿಮ್ಮ ಊರು, ತಾಲ್ಲೂಕು, ಇನ್ನಿತರ ವಿವರಗಳನ್ನು ಆಯ್ಕೆ ಮಾಡಿ
ನಂತರ ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ವಿವರಗಳನ್ನು ಹಾಕಿ
ಅವಶ್ಯಕತೆ ಇರುವ ದಾಖಲೆಗಳನ್ನು ಕೂಡ ಅಪ್ಲೋಡ್ ಮಾಡಿ, ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಕೆಯಾದ ನಂತರ, ನಿಮ್ಮ ಅರ್ಜಿಯನ್ನು ಪರಿಶೀಲಿಸಿ, ಎಲ್ಲವೂ ಸರಿ ಇದ್ದರೆ ವಸತಿ ಯೋಜನೆಯಲ್ಲಿ ನಿಮಗೆ ಮನೆ ಕೊಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಅಡ್ರೆಸ್ ನಲ್ಲಿರುವ ಆಫೀಸ್ ಗೆ ಭೇಟಿ ನೀಡಬಹುದು…
ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ
8/9ನೇ ಮಹಡಿ, ಇ ಬ್ಲಾಕ್, ಕ.ಮಂ, ಕಟ್ಟಡ, ಕೆಂಪೇಗೌಡ ರಸ್ತೆ, ಬೆಂಗಳೂರು- 560 009.
ಈ ನಂಬರ್ ಗೆ 91-080-23118888 ಕರೆ ಮಾಡಬಹುದು.