ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕೂಡಾ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಕೆ ಮಾಡುತ್ತಾರೆ ಎಂದರೆ ಅದು ತಪ್ಪಾಗಲಿಕ್ಕಿಲ್ಲ. ಟೀ , ಕಾಫಿ ಮತ್ತು ಇತರೆ ಪದಾರ್ಥಗಳನ್ನ ಮಾಡಲು ಅವಶ್ಯಕವಾಗಿ ಬೇಕಾದ ಕಾರಣ ಜನರು ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನ ಬಳಕೆ ಮಾಡುತ್ತಾರೆ. ಇನ್ನು ಹಾಲನ್ನ ಬಳಕೆ ಮಾಡದ ಮನೆಯನ್ನ ಹುಡುಕುವುದೂ ಬಹಳ ಕಷ್ಟವೆಂದು ಹೇಳಬಹುದು. ವಿಷಯಕ್ಕೆ ಬರುವುದಾದರೆ ದೇಶದಲ್ಲಿ ಅತೀ ದೊಡ್ಡ ಹಾಲು ಉತ್ಪಾದನಾ ಘಟಕವೆಂದರೆ ಅದೂ ನಂದಿನಿ ಹಾಲು ಉತ್ಪಾದನಾ ಘಟಕ ಎನ್ನಬಹುದು. ದೇಶದ ಮೂಲೆ ಮೂಲೆಯಲ್ಲಿಯು ಜನರು ನಂದಿನಿ ಹಾಲನ್ನ ಬಳಕೆ ಮಾಡುತ್ತಾರೆ ಎಂದು ಹೇಳಬಹುದು. ಕರ್ನಾಟಕ ಸಹಕಾರಿ ಹಾಲು ಮಾರಾಟ ಮಹಾ ಮಂಡಳಿ ಹೈದರಾಬಾದ್‌ ಕರ್ನಾಟಕ ಭಾಗದ ಕಲಬುರಗಿ, ಬೀದರ್‌ ಮತ್ತು ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಂದಿನಿ ಹಾಲನ್ನು ಮನೆ ಬಾಗಿಲಿಗೆ ತಲುಪಿಸಲು ನಿರ್ಧರಿಸಿದೆ. ಇಂತಹದೊಂದು ಪ್ರಯತ್ನದ ಮೂಲಕ ಜನರಲ್ಲಿ ನಂದಿನಿ ಉತ್ಪನ್ನಗಳ ಬಗ್ಗೆ ಇರುವ ಭರವಸೆಯನ್ನು ಉಳಿಸಿಕೊಳ್ಳುವುದು ಸೇರಿದಂತೆ ಮಾರುಕಟ್ಟೆಯಲ್ಲಿ ಇನ್ನಷ್ಟು ಸ್ಥಿತಿ ಸುಧಾರಿಸಿಕೊಳ್ಳುವ ಹಾಗೂ ವಿಸ್ತರಣೆ ಮಾಡುವ ಮೂಲಕ ನಮ್ಮ ರೈತರಿಗೆ ನೆರವಾಗಲು ಸಜ್ಜಾಗಿದೆ. ಇದರ ಕುರಿತಾಗಿ ನಾವು ಈ ಲೇಖನದ ಮೂಲಕ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಜನರು ಬೆಳಿಗ್ಗೆ ಬೇಗನೆ ಎದ್ದು ಹಾಲಿನ ಅಂಗಡಿಗೆ ಹೋಗಿ ಸಾಲಿನಲ್ಲಿ ನಿಂತು ಹಾಲನ್ನ ತರುತ್ತಾರೆ. ಆದರೆ ಈಗ ಪ್ರತಿನಿತ್ಯ ನಂದಿನಿ ಹಾಲನ್ನ ಬಳಕೆ ಮಾಡುವವರಿಗೆ ದೊಡ್ಡ ಸಿಹಿ ಸುದ್ದಿ ಬಂದಿದ್ದು ಜನರು ಇನ್ನುಮುಂದೆ ಅಂಗಡಿಗೆ ಅಲೆಯುವ ಅವಶ್ಯಕತೆ ಇಲ್ಲವಾಗಿದೆ. ನಂದಿನಿ ಹಾಲು ಬಳಸುವವರಿಗೆ ಕೆಎಂಎಫ್‌ ಸಿಹಿ ಸುದ್ದಿ ನೀಡಿದ್ದು, ಇನ್ನುಮುಂದೆ ಮಿನಿ ಟ್ರಕ್‌ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಹಾಲು ಬರಲಿದೆ ಎಂದು ತಿಳಿಸಿದೆ. ಕೆಎಂಎಫ್ ಜನರ ಮನೆಯ ಬಾಗಿಲಿಗೆ ಹಾಲಿನ ಪ್ಯಾಕೆಟ್ ಗಳನ್ನ ಸರಬರಾಜು ಮಾಡಲು ಮದರ್ ಡೈರಿಯ ಜೊತೆ ಪಾಲುಗಾರಿಕೆ ಮಾಡಿಕೊಂಡಿದ್ದು ನಂದಿನಿ ಆನ್ ವ್ಹೀಲ್ಸ್ ಸೇವೆಯನ್ನ ಪ್ರಾರಂಭಿಸಿದೆ. ಇನ್ನು ಈ ಯೋಜನೆಯಿಂದ ಜನರು ಇನ್ನುಮುಂದೆ ಮಿಲ್ಕ್ ಬೂತ್ ಗಳಿಂದ ಹಾಲನ್ನ ತರುವ ಅವಶ್ಯಕತೆ ಇರುವುದಿಲ್ಲ ಮತ್ತು ನಿಮ್ಮ ಮನೆಗೆ ನಂದಿನಿ ಹಾಲು ಬರಲಿದೆ. ಗ್ರಾಹಕರ ಅರಿವು ಕಾರ್ಯಕ್ರಮದ ಅಡಿಯಲ್ಲಿ ಪ್ರಾಯೋಗಿಕವಾಗಿ ಕಲಬುರಗಿ ನಗರದ ದೇವಿನಗರ, ಆಳಂದ ನಾಕಾ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಾರ್ಕೆಟಿಂಗ್‌ ವಿಭಾಗದ ಸದಸ್ಯರು ಮನೆ ಮನೆಗೆ ಬರಲಿದ್ದಾರೆ. ನಂದಿನಿಯ ಉತ್ಪನ್ನಗಳು ಮತ್ತು ಅದರ ಗುಣಮಟ್ಟ ಹಾಗೂ ಖಾತರಿ ತಿಳಿಸುವುದಲ್ಲದೆ, ಇತರೆ ಹಾಲಿನಲ್ಲಿ ಇರುವ ಹೆಚ್ಚುಗಾರಿಕೆ ತಿಳಿಯಲು ಕೆಎಂಎಫ್‌ ಇಂತಹದೊಂದು ಹೆಜ್ಜೆ ಇಟ್ಟಿದೆ.

ಇನ್ನು ಸದ್ಯ ಈ ಯೋಜನೆಯನ್ನ ಪ್ರಾಯೋಗಿಕವಾಗಿ ಯಲಹಂಕದಲ್ಲಿ ಜಾರಿಗೆ ತರಲಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲ ಕಡೆ ಜಾರಿಗೆ ಬರಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಕೆಎಂಎಫ್ ನ ಹಾಲನ್ನ ತುಂಬಿದ ವಾಹನಗಳು ಬೆಳಿಗ್ಗೆ 9 ಘಂಟೆಯಿಂದ ರಾತ್ರಿ 8 ಘಂಟೆಯ ತನಕ ಹಾಲನ್ನ ಹೊತ್ತು ರಸ್ತೆ ರಸ್ತೆಯಲ್ಲಿ ಸಂಚಾರ ಮಾಡಲಿದೆ ಮತ್ತು ಜನರು ತಮ್ಮ ಮನೆಯ ಬಳಿ ಹಾಲಿನ ವಾಹನ ಬಂದಾಗ ಹಾಲನ್ನ ಅಲ್ಲೇ ಖರೀದಿ ಮಾಡಬಹುದಾಗಿದೆ. ಇನ್ನು ವಾಹನದಲ್ಲಿ ಹಾಲಿನ ದಾಸ್ತಾನು ಖಾಲಿಯಾದರೆ ಹತ್ತಿರ ನಂದಿನಿ ಶಾಪ್ ನಲ್ಲಿ ಮತ್ತೆ ಹಾಲನ್ನ ತುಂಬಿಸಿಕೊಂಡು ವಾಹನಗಳು ಹಾಲನ್ನ ಸರಬರಾಜು ಮಾಡಲಿದೆ ಎಂದು ಕೆಎಂಎಫ್ ತಿಳಿಸಿದೆ. ಇನ್ನು ಪ್ರಾಯೋಗಿಕವಾಗಿ ಕೊಡಲ ಮೂರೂ ತಿಂಗಳು ಯಲಹಂಕದಲ್ಲಿ ಈ ವಾಹನಗಳು ಸಂಚಾರ ಮಾಡಲಿದ್ದು ಯೋಜನೆಯ ಯಶಸ್ಸಿನ ನಂತರ ಪ್ರತಿ ಜಿಲ್ಲೆಯಲ್ಲಿ ಈ ವಾಹನ ಸಂಚಾರ ಮಾಡಲಿದೆ ಎಂದು ತಿಳಿದು ಎಂದು ಕೆಎಂಎಫ್ ತಿಳಿಸಿದೆ.

ಇನ್ನು ಹಾಲಿನ ದರ ಅಷ್ಟೇ ಇರಲಿದ್ದು ಜನರು ಹೆಚ್ಚಿನ ಹಣ ಕೊಡುವ ಅವಶ್ಯಕತೆ ಇರುವುದಿಲ್ಲ. ಇನ್ನು ಈ ಯೋಜನೆ ಜನರಿಗೆ ಬಹಳ ಅನುಕೂಲ ಆಗಲಿದ್ದು ಜನರು ತಮ್ಮ ಮನೆಯ ಬಳಿ ಹಾಲಿನ ವಾಹನ ಬಂದ ಸಮಯದಲ್ಲಿ ತಮಗೆ ಎಷ್ಟು ಬೇಕೋ ಅಷ್ಟು ಹಾಲನ್ನ ಖರೀದಿ ಮಾಡಬಹುದಾಗಿದೆ. ಕಲಬುರಗಿ ಸೇರಿದಂತೆ ಬೀದರ್‌, ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಖಾಸಗಿ ಹಾಲು ಮಾರಾಟ ಮಾಡುವ ಸಂಸ್ಥೆಗಳು ಹಾಗೂ ವ್ಯಕ್ತಿಗಳ ದರ್ಬಾರು ಹೆಚ್ಚಾಗಿದೆ. ಇದಕ್ಕೆ ಸೆಡ್ಡು ಹೊಡೆಯಲು ಮತ್ತು ಜನರಿಗೆ ಉತ್ತಮ ಹಾಗೂ ಕಲಬೆರಕೆ ಇಲ್ಲದ ಹಾಲು ನೀಡುವುದು ಕೆಎಂಎಫ್‌ ಗುರಿಯಾಗಿದೆ. ಈ ನಿಟ್ಟಿನಲ್ಲಿ ನೇರವಾಗಿ ಗ್ರಾಹಕರ ಮನೆಗಳಿಗೆ ಹೋಗಿ ಅವರಿಗೆ ನಂದಿನಿ ಹಾಲಿನ ಗುಣ ವಿಶೇಷತೆಗಳನ್ನು ತಿಳಿ ಹೇಳಲಾಗುವುದು. ಅವರು ಖರೀದಿ ಮಾಡುವಂತೆ ಮನವೊಲಿಸಲಾಗುವುದು. ಅಲ್ಲದೆ, ಬೇರೆ ಹಾಲಿಗಿಂತ ನಂದಿನಿ ಎಷ್ಟು ವಿಶಿಷ್ಟವಾಗಿದೆ ಎಂದು ಜಾಗೃತಿ ಮೂಡಿಸಲಾಗುವುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!