ಭಾರತ ದೇಶದಲ್ಲಿ ಅರವತ್ತು ಶೇಕಡಾದಷ್ಟು ಜನ ರೈತಾಪಿ ವರ್ಗಕ್ಕೆ ಸೇರಿದವರಾಗಿದ್ದಾರೆ. ಕೃಷಿ ಬೆಳೆಯನ್ನು ಆಶ್ರಯಿಸಿ ಜೀವನ ನಡೆಸುತ್ತಿದ್ದಾರೆ. ಕೊರೋನಾ ಎರಡನೆಯ ಅಲೆಯಿಂದ ರೈತರ ಜೀವನ ತುಂಬಾ ಸಂಕಷ್ಟಕ್ಕೀಡಾಗಿದೆ. ರೈತರು ಬೆಳೆದ ಬೆಳೆಗಳು ಅಂದರೆ ಹೂವು, ಹಣ್ಣು, ತರಕಾರಿಗಳಂತ ಬೆಳೆಗಳ ಸರಿಯಾದ ಮಾರಾಟವಿಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ರಾಜ್ಯ ಸರ್ಕಾರ ಅರ್ಜಿಯಿಲ್ಲದೆ ರೈತರ ಖಾತೆಗೆ ಪರಿಹಾರ ಧನವನ್ನು ಜಮಾ ಮಾಡುವ ಯೋಜನೆಯನ್ನು ಮಾಡಿದೆ. ಆದ್ದರಿಂದ ಇದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಕೊರೋನಾ ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟಕ್ಕೀಡಾಗಿರುವ ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದೆ. ಕಟ್ಟಡ ಕಾರ್ಮಿಕರಿಗೆ ತಲಾ ಮೂರು ಸಾವಿರದಂತೆ ಕರ್ನಾಟಕ ಕಟ್ಟಡ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸಿದವರಿಗೆ ನೀಡಲಾಗುತ್ತದೆ. ಅಸಂಘಟಿತ ಕಾರ್ಮಿಕರಾದ ಕ್ಷೌರಿಕರು, ಕುಂಬಾರರು, ಕಮ್ಮಾರಿಗಳು ಸೇರಿದಂತೆ 3.5 ಲಕ್ಷ ಜನರಿಗೆ ತಲಾ 2 ಸಾವಿರ ನೀಡಲಾಗುತ್ತದೆ. 2.20 ಲಕ್ಷ ಜನ ರಸ್ತೆ ಬದಿ ವ್ಯಾಪಾರಿಗಳಿಗೆ 2 ಸಾವಿರ ರೂ ನೀಡಲಾಗುತ್ತದೆ.
ಕಲಾವಿದರು, ಕಲಾತಂಡಗಳಿಗೆ ತಲಾ 3 ಸಾವಿರ ನೀಡಲಾಗುತ್ತದೆ. ರೈತರು ಮತ್ತು ಸ್ವಸಹಾಯ ಸಂಘಗಳ ಸಹಕಾರದಿಂದ ಮೇ 1 2021 ರಿಂದ ಮರು ಪಾವತಿಸಬೇಕಾದ ಸಾಲದ ಮೊತ್ತವನ್ನು ಜುಲೈ 31-2021 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ತಿಳಿಸಿದ್ದಾರೆ. ಬಿಬಿಎಂಪಿ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಊಟದ ವ್ಯವಸ್ಥೆ ಮಾಡಿದ್ದಾರೆ. ಇದರಿಂದ 6 ಲಕ್ಷ ಜನರಿಗೆ ಉಪಯೋಗವಾಗುತ್ತಿದೆ.
ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 10 ಸಾವಿರ ಸಹಾಯ ಧನ ನೀಡಲಾಗುತ್ತದೆ. ಹಣ್ಣು, ತರಕಾರಿ ಬೆಳಗಾರರಿಗೆ 1 ಹೆಕ್ಟೇರ್ ಗೆ ಪ್ರತಿ ಹೆಕ್ಟೇರ್ ಗೆ 10 ಸಾವಿರ ನೀಡಲಾಗುತ್ತದೆ. ಆಟೋ ಟ್ಯಾಕ್ಸಿ ಚಾಲಕರಿಗೆ ಪ್ರತಿಯೊಬ್ಬರಿಗೂ 3 ಸಾವಿರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಆಟೋ, ಟ್ಯಾಕ್ಸಿ, ಮ್ಯಾಕ್ಸ್ ಕ್ಯಾಬ್ ಚಾಲಕರು ಹಾಗೂ ಕಲಾವಿದರು ಆನ್ಲೈನ್ ಮೂಲಕ ಅರ್ಜಿ ಯನ್ನು ಸಲ್ಲಿಸಬೇಕಾಗುತ್ತದೆ. ರೈತರ ಖಾತೆಗೆ ನೇರವಾಗಿ 10,000 ರೂ ಜಮಾ ಮಾಡಲಾಗುತ್ತದೆ. ಭೂ ಕಂದಾಯ ಇಲಾಖೆಯ ರೈತರ ವಿವರ ಪಡೆದು ಜಮಾ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.