ಈಗಿನ ಕಾಲದಲ್ಲಿ ಚಿನ್ನಕ್ಕೆ ಅತಿಯಾದ ಮಹತ್ವವಿದೆ ಪ್ರತಿಯೊಬ್ಬರೂ ಚಿನ್ನವನ್ನು ಇಷ್ಟಪಡುತ್ತಾರೆ ಚಿನ್ನವನ್ನು ಹಿಂದಿನ ಕಾಲದಿಂದಲೂ ಹಣವಾಗಿ ಆಭರಣವಾಗಿ ಅತ್ಯಮೂಲ್ಯ ವಸ್ತುವಾಗಿ ಮಾನವನು ಬಳಸುತ್ತಿದ್ದಾನೆ. ಚಿನ್ನ ಭೂಮಿಯಲ್ಲಿ ತುಣುಕುಗಳಾಗಿ ಅಥವಾ ಕಾಳುಗಳಾಗಿ ಶಿಲೆಗಳಲ್ಲಿ ಹುದುಗಿರುತ್ತದೆ ಚಿನ್ನು ಮೃದು ಸಾಂದ್ರ ಮತ್ತು ಹೊಳೆಯುವ ಲೋಹವಾಗಿದೆ. ಹಿಂದೆ ಕರ್ನಾಟಕ ರಾಜ್ಯದಲ್ಲಿ ಚಿನ್ನದ ಗಣಿ ಎಂದು ಪ್ರಸಿದ್ಧವಾಗಿರುವುದು ಕೋಲಾರ ಜಿಲ್ಲೆ. ಕೋಲಾರ ಜಿಲ್ಲೆಯಲ್ಲಿ ಮಾತ್ರ ಹೆಚ್ಚಿನ ಚಿನ್ನದ ಗಣಿ ಲಭಿಸುತ್ತಿದ್ದು ಹಾಗಾಗಿ ಕೋಲಾರ ಚಿನ್ನದ ಗಣಿ ಎಂದು ಕರೆಯಲಾಯಿತು. ಸದ್ಯ ಭೂ ಸರ್ವೇಕ್ಷಣಾ ಸಂಸ್ಥೆಯಿಂದ ಯಾವುದೇ ರೀತಿಯ ಸಮೀಕ್ಷೆ ನಡೆಯದೇ ಹೋದರೂ ಜಿ ನಾಲ್ಕು ಹಂತದ ಪರಿಶೀಲನೆಯಲ್ಲಿ ಚಿನ್ನದ ನಿಕ್ಷೇಪ ಇರುವ ಮಾಹಿತಿ ಹೊರಬಿದ್ದಿದೆ.
ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಕರ್ನಾಟಕ ರಾಜ್ಯದ ಹತ್ತು ಕಡೆಗಳಲ್ಲಿ ಚಿನ್ನದ ನಿಕ್ಷೇಪ ಇರುವುದನ್ನು ಪತ್ತೆ ಹೆಚ್ಚಿದೆ. ಈ ಕುರಿತು ಎಂಟು ಕಡೆಗಳಲ್ಲಿ ಗಣಿ ಪ್ರಾರಂಭ ಮಾಡಲು ಖಾಸಗಿ ಕಂಪನಿಗಳಿಗೆ ಹರಾಜು ಪ್ರಕ್ರಿಯೆಗೆ ಆಹ್ವಾನ ನೀಡಿದೆ. ಕೇಂದ್ರ ಸರ್ಕಾರದಿಂದ ಈಗಾಗಲೇ ಹರಾಜು ಪ್ರಕ್ರಿಯೆಗೆ ಅಧಿಕೃತವಾಗಿ ಅನುಮತಿ ಸಿಕ್ಕಿದ್ದು ಅರ್ಜಿ ಸಲ್ಲಿಸುವವರು ಫೆಬ್ರುವರಿ ಇಪ್ಪತ್ನಾಲ್ಕರ ಒಳಗಾಗಿ ಆನ್ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಲು ತಿಳಿಸಲಾಗಿದೆ. ಇದಾದ ಬಳಿಕ ಎಷ್ಟು ಪ್ರಮಾಣದಲ್ಲಿ ಚಿನ್ನ ದೊರೆಯಲಿದೆ ಎಂಬ ಮಾಹಿತಿ ದೊರೆಯುತ್ತದೆ. ಎಲ್ಲಿ ಮತ್ತು ಹೇಗೆ ಹರಾಜು ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂಬುದನ್ನು ನಾವು ತಿಳಿದುಕೊಳ್ಳೋಣ.
ರಾಜ್ಯದ ಒಟ್ಟು ಎಂಟು ಸ್ಥಳಗಳಲ್ಲಿ ಎರಡು ನೂರಾ ಐವತ್ತು ಟನ್ ಗಿಂತ ಹೆಚ್ಚಿನ ಚಿನ್ನ ಸಿಗಬಹುದು ಎಂಬ ಅಂದಾಜನ್ನು ಖಾಸಗಿ ಕಂಪನಿಗಳು ಮುಂದಿಟ್ಟಿವೆ. ಇದರಿಂದ ರಾಜ್ಯಕ್ಕೆ ಅಥವಾ ರಾಜ್ಯ ಸರ್ಕಾರಕ್ಕೆ ಯಾವ ರೀತಿಯಾಗಿ ಅನುಕೂಲವುಂಟಾಗುತ್ತದೆ ಎಂಬುದನ್ನು ನೋಡುವುದಾದರೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೆ ರಾಜಧನ ಸೃಷ್ಟಿಯಾಗುವುದಕ್ಕೆ ನೆರವಾಗುತ್ತದೆ. ಚಿನ್ನದ ನಿಕ್ಷೇಪಗಳು ಗುರುತಾಗಿರುವ ಪ್ರದೇಶಗಳಾದ ತುಮಕೂರು ಬಳ್ಳಾರಿ ಹಾವೇರಿ ಧಾರವಾಡ ಚಿತ್ರದುರ್ಗ ಮತ್ತು ಹಾಸನ ಜಿಲ್ಲೆಗಳ ಸುತ್ತಮುತ್ತ ಉದ್ಯೋಗ ಸೃಷ್ಟಿಯಾಗುತ್ತದೆ.
ಎಲ್ಲೆಲ್ಲಿ ಎಷ್ಟೆಷ್ಟು ಚದರ ಕಿಲೋಮೀಟರ್ ಪ್ರದೇಶ ವಿಸ್ತೀರ್ಣ ಎಂಬ ಮಾಹಿತಿಯನ್ನು ನೋಡುವುದಾದರೆ ತುಮಕೂರಿನ ಅಜ್ಜಗೊಂಡನಹಳ್ಳಿ ಪ್ರದೇಶದಲ್ಲಿ ಒಂಬತ್ತು.ನಾಲ್ಕು ಒಂಬತ್ತು ಚದರ ಕಿಲೋಮೀಟರ್ ಚಿತ್ರದುರ್ಗದ ಬೆಳಗಟ್ಟ ಪ್ರದೇಶ ಇಪ್ಪತ್ತೈದು ಚದರ ಕಿಲೋಮೀಟರ್ ಧಾರವಾಡದ ಮಾರುತಿಪುರ ಇಪ್ಪತ್ತೆಂಟು.ತೊಂಬತ್ತೆರಡು ಚದರ ಕಿಲೋಮೀಟರ್ ಹಾಸನದ ಮುದುಡಿ ನಲವತ್ತು ಚದರ ಕಿಲೋಮೀಟರ್.
ಚಿತ್ರದುರ್ಗದ ಕಟ್ಟನಹಳ್ಳಿ ಇಪ್ಪತ್ತೈದು.ಇಪ್ಪತ್ತೆರಡು ಚದರ ಕಿಲೋಮೀಟರ್ ದಾವಣಗೆರೆಯ ಕಣಿವೆಹಳ್ಳಿ ಮುವತ್ತು.ಎಂಟು ಚದರ ಕಿಲೋಮೀಟರ್ ಹಾವೇರಿ ಸೇವಾನಗರ ಮುವತ್ತು. ನಲವತ್ತಾರು ಹಾವೇರಿ ಕಾಕೋಳ ಇಪ್ಪತೊಂಬತ್ತು.ಐದು ಚದುರ ಕಿಲೋಮೀಟರ್ ಈ ರೀತಿಯಾಗಿ ದೇಶದಲ್ಲಿಯೇ ಅತಿಹೆಚ್ಚು ಚಿನ್ನದ ನಿಕ್ಷೇಪಗಳನ್ನು ಈ ಬಾರಿ ರಾಜ್ಯದಲ್ಲಿ ಗುರುತಿಸಲಾಗಿದೆ. ಇದಿಷ್ಟು ನಾವು ನಿಮಗೆ ತಿಳಿಸುತ್ತಿರುವ ಹೊಸದಾಗಿ ಗುರುತಿಸುವ ಚಿನ್ನದ ನಿಕ್ಷೇಪಗಳ ಕುರಿತಾದ ಮಾಹಿತಿ ಆಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.