ಸಾಮಾನ್ಯವಾಗಿ ನೀವೆಲ್ಲರೂ ನೋಡಿರುತ್ತೀರಿ ಮನೆಯಲ್ಲಿ ಮಕ್ಕಳು ಹುಟ್ಟಿದರೆ ಅವುಗಳಿಗೆ ಕಪ್ಪು ಚುಕ್ಕೆ ಇಟ್ಟು ಕಪ್ಪು ದಾರವನ್ನು ಕಟ್ಟುತ್ತಾರೆ ಜೊತೆಗೆ ದೃಷ್ಟಿ ತೆಗೆಯುವಂತಹ ಕಾರ್ಯಗಳನ್ನು ಕೂಡ ಮಾಡುತ್ತಾರೆ ಆದರೆ ತುಂಬಾ ಜನರಿಗೆ ಇದರ ಹಿಂದಿರುವ ರಹಸ್ಯ ಗೊತ್ತಿಲ್ಲ. ಸಮಯಕ್ಕೆ ತಕ್ಕಂತೆ ಕಾಲವು ಕೂಡ ಬದಲಾಗುತ್ತಾ ಹೋಗುತ್ತಿದೆ ಪ್ರಾಚೀನ ಕಾಲದ ಪೂಜಾ ಕಾರ್ಯಗಳನ್ನು ಧರ್ಮಾಚರಣೆಗಳನ್ನು ಜನರು ಮರೆಯುತ್ತ ಹೋಗುತ್ತಿದ್ದಾರೆ
ಇವುಗಳ ಪ್ರಭಾವ ಇಂದು ನಮ್ಮ ಸಂಸ್ಕೃತಿಯ ಮೇಲೆ ನೋಡಲು ಸಿಗುತ್ತದೆ. ಇಂದು ನಾವು ಯಾವ ಸಮಾಜದತ್ತ ಹೋಗುತ್ತಿದ್ದೇವೆ ಅದರಲ್ಲಿ ಮೋಸ ಕಳ್ಳತನ ಕಪಟ ವಂಚನೆ ಸ್ವಾರ್ಥದ ಅಂತಹ ಕೆಟ್ಟ ಗುಣಗಳು ಜನರಲ್ಲಿ ತುಂಬಿಕೊಂಡು ಕಾಣುತ್ತಿವೆ. ಇಂತಹ ಸಮಯದಲ್ಲಿ ಮನೆಯರು ಹಿರಿಯರು ತಿಳಿಸಿರುವಂತಹ ಕೆಲವು ಉಪಾಯಗಳು ನಮಗೆ ಉಪಯೋಗಕ್ಕೆ ಬರುತ್ತವೆ.
ಹಾಗಾಗಿ ಅವುಗಳನ್ನು ಅನುಸರಿಸಿದರೆ ಖಂಡಿತವಾಗಿಯೂ ನೀವು ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ಕಾಣುತ್ತಿರಿ. ನಿಮ್ಮ ಜೀವನದಲ್ಲಿರುವ ನಕಾರಾತ್ಮಕತೆಯನ್ನಾಗಲಿ ಅಥವಾ ಶತ್ರುಗಳನ್ನು ಸಹ ನೀವು ದೂರಮಾಡಬಹುದು. ಒಂದು ವೇಳೆ ನಿಮ್ಮ ಜೀವನದಲ್ಲಿ ನಿಮಗೆ ಕೆಟ್ಟಶಕ್ತಿಗಳ ಅನುಭವ ಆಗುತ್ತಿದ್ದರೆ ಯಾವುದಾದರೂ ಕೆಟ್ಟಶಕ್ತಿಗಳು ನಿಮ್ಮನ್ನು ತಡೆಯುತ್ತಿದ್ದರೆ ಒಂದು ವೇಳೆ ನಿಮ್ಮ ಕುಟುಂಬದಲ್ಲಿ ಅಶಾಂತಿಯ ವಾತಾವರಣ ಇದ್ದರೆ ನಾವು ತಿಳಿಸುವ ವಿಧಾನವನ್ನು ಅನುಸರಿಸಿ. ನಾವಿಂದು ಕಪ್ಪು ದಾರಕ್ಕೆ ಸಂಬಂಧಿಸಿದಂತಹ ವಿಶೇಷವಾದ ಉಪಯೋಗಗಳ ಬಗ್ಗೆ ತಿಳಿದುಕೊಳ್ಳೋಣ. ಕಪ್ಪುಬಣ್ಣವು ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವಂತಹ ಗುಣವನ್ನು ಹೊಂದಿರುತ್ತದೆ. ಹಾಗಾಗಿ ನಕಾರತ್ಮಕ ಶಕ್ತಿಗಳಿಂದ ದೂರವಿರಲು ಕಪ್ಪು ಬಣ್ಣದ ದಾರವನ್ನು ಕಪ್ಪು ಬಣ್ಣದ ಬಟ್ಟೆಯನ್ನು ಉಪಯೋಗಿಸುತ್ತಾರೆ.
ಇವುಗಳಲ್ಲಿ ಕಪ್ಪು ದಾರವು ಎಲ್ಲಕ್ಕಿಂತ ಪ್ರಭಾವಶಾಲಿ ಮತ್ತು ಲಾಭದಾಯಕವೂ ಹೌದು. ಒಂದು ವೇಳೆ ನಿಮ್ಮ ಮನೆಯಲ್ಲಿ ವಾದವಿವಾದಗಳು ನಡೆಯುತ್ತಿದ್ದರೆ ಮನಸ್ತಾಪಗಳು ಇದ್ದರೆ ಅವುಗಳನ್ನು ತಡೆಯುವುದಕ್ಕೆ ನೀವು ಶನಿವಾರ ಶನಿದೇವರ ದೇವಾಲಯಕ್ಕೆ ಹೋಗಿ ಒಂದು ಮೀಟರ್ ಕಪ್ಪು ದಾರವನ್ನು ತೆಗೆದುಕೊಂಡು ಅದರಲ್ಲಿ ನೂರಾ ಎಂಟು ಗಂಟುಗಳನ್ನು ಕಟ್ಟುತ್ತಾ ಹೋಗಬೇಕು ಹಾಗೆ ಗಂಟನ್ನು ಹಾಕುವಾಗ ಓಂ ಶನೇಶ್ವರಾಯ ನಮಃ ಎಂದು ಹೇಳಬೇಕು ಒಂದು ವೇಳೆ ನಿಮ್ಮ ಮನೆ ಹತ್ತಿರ ಶನಿದೇವರ ದೇವಸ್ಥಾನ ಇಲ್ಲ ಎಂದರೆ ನೀವು ಮನೆಯಲ್ಲಿಯೇ ಕುಳಿತು ಇದನ್ನು ಮಾಡಬಹುದು. ಆದಾರವನ್ನು ನೀವು ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು
ಈ ರೀತಿ ಮಾಡಿದರೆ ಮನೆಯ ಮೇಲೆ ಕೆಟ್ಟ ದೃಷ್ಟಿ ಗಳಾಗಲಿ ಮನೆಯಒಳಗೆ ನಕಾರಾತ್ಮಕ ಶಕ್ತಿ ಗಳಾಗಲಿ ಪ್ರವೇಶ ಮಾಡುವುದಿಲ್ಲ. ಎರಡನೆಯದಾಗಿ ನಿಮ್ಮ ಮನೆಯ ಸದಸ್ಯರ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ಪದೇ ಪದೇ ಅವರು ಯಾವುದಾದರೂ ತೊಂದರೆಗಳನ್ನು ಎದುರಿಸುವ ಸ್ಥಿತಿ ಬರುತ್ತಿದ್ದರೆ ಒಂದು ದಿನ ನೀವು ಕಪ್ಪು ದಾರವನ್ನು ದೇವಾಲಯಕ್ಕೆ ತೆಗೆದುಕೊಂಡು ಹೋಗಬೇಕು.
ಅದಕ್ಕೆ ಸ್ವಲ್ಪ ಸಿಂಧೂರವನ್ನು ಹಚ್ಚಿ ನಿಮ್ಮ ಬಳಿ ಇಟ್ಟುಕೊಳ್ಳಬೇಕು ಎರಡನೇ ದಿನ ಸ್ವಚ್ಛವಾಗಿ ಇದನ್ನು ಸದಸ್ಯರ ಕಾಲಿಗೆ ಕಟ್ಟಬೇಕು ಈ ರೀತಿ ಮಾಡುವುದರಿಂದ ಅವರ ಅಕ್ಕಪಕ್ಕದಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಇನ್ನೊಬ್ಬರ ಕೆಟ್ಟದೃಷ್ಟಿ ಇವರ ಮೇಲೆ ಬೀಳುವುದಿಲ್ಲ. ಮೂರನೇದಾಗಿ ಸಾಮಾನ್ಯವಾಗಿ ಗರ್ಭಿಣಿ ಸ್ತ್ರೀಯರಿಗೆ ದೃಷ್ಟಿ ಬೇಗ ಅಂಟಿಕೊಳ್ಳುತ್ತದೆ ಹಲವಾರು ಬಾರಿ ಅದರ ಕೆಟ್ಟ ಪ್ರಭಾವ ಇವರ ಮೇಲೆ ಬೀಳುತ್ತದೆ
ಹಾಗಾಗಿ ನೀವು ಕಪ್ಪು ದಾರವನ್ನು ತೆಗೆದುಕೊಂಡು ಗರ್ಭಿಣಿಯರಷ್ಟು ನೀವು ಅದನ್ನ ಅಳತೆ ಮಾಡಬೇಕು ಅದನ್ನು ತೆಗೆದುಕೊಂಡು ಅವರ ತಲೆಯ ಮೇಲಿಂದ ಅದನ್ನು ಮೂರು ಸಾರಿ ತಿರುಗಿಸಬೇಕು ನಂತರ ನೀವು ಆದಾರವನ್ನು ಅರಳಿಮರದ ಕೆಳಗೆ ಅಥವಾ ಯಾವುದಾದರೂ ನದಿಯಲ್ಲಿ ವಿಸರ್ಜನೆ ಮಾಡಬೇಕು. ಈ ಉಪಾಯವನ್ನು ನೀವು ಮಗು ಹುಟ್ಟುವ ತನಕ ಮಾಡಬಹುದಾಗಿದೆ ಈ ರೀತಿ ಮಾಡುವುದರಿಂದ ಗರ್ಭಿಣಿಯರ ಅಕ್ಕಪಕ್ಕದಲ್ಲಿ ಯಾವುದೇ ನಕಾರಾತ್ಮಕ ಶಕ್ತಿಗಳು ಓಡಾಡುವುದಿಲ್ಲ.
ಒಂದು ವೇಳೆ ನೀವು ರುದ್ರಾಕ್ಷಿಯನ್ನು ಕಪ್ಪು ದಾರದಲ್ಲಿ ಹಾಕಿ ಬುಜದಲ್ಲಿ ಕಟ್ಟಿಕೊಂಡರೆ ಅದರಿಂದ ನಿಮಗೆ ಅಧಿಕವಾದ ಲಾಭಗಳು ಸಿಗುತ್ತವೆ. ಹಳೆಯದಾಗಿರುವ ಕಪ್ಪು ದಾರವನ್ನು ಅರಳಿಮರದಡಿ ಹುತುಹಾಕಬೇಕು ಅಥವಾ ನದಿಯಲ್ಲಿ ವಿಸರ್ಜನೆ ಮಾಡಬೇಕು ಇಲ್ಲವಾದರೆ ಕೆಲವರು ಅದನ್ನ ಕೆಟ್ಟ ಕಾರ್ಯಗಳಿಗೆ ಬಳಸಬಹುದು. ಕಪ್ಪು ದಾರವನ್ನು ದೇವಾಲಯದಲ್ಲಿ ಅರ್ಚಕರಿಂದ ಪಡೆದುಕೊಳ್ಳಬೇಕು ಅಥವಾ ನೀವೇ ಖರೀದಿಸಿ ಕಟ್ಟಿಕೊಳ್ಳಬೇಕು ಬೇರೆಯಾರೊ ಕೊಟ್ಟ ಕಪ್ಪು ದಾರವನ್ನು ನೀವು ತೆಗೆದುಕೊಳ್ಳಬಾರದು. ನಿಮಗೂ ಕೂಡ ನಕಾರಾತ್ಮಕ ಶಕ್ತಿಯ ಅನುಭವ ಆಗುತ್ತಿದ್ದರೆ ಈ ಕೂಡಲೇ ಕಪ್ಪು ದಾರವನ್ನು ಬಳಸಿ ನೀವು ಅದರ ಪರಿಣಾಮವನ್ನು ಕಂಡುಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರೊಂದಿಗೆ ಹಂಚಿಕೊಳ್ಳಿ.