Gemini Horoscope: ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಮಿಥುನ ರಾಶಿಯವರ ಜುಲೈ ತಿಂಗಳಿನ ಮಾಸ ಭವಿಷ್ಯವನ್ನು ತಿಳಿಯೋಣ.
ಮಿಥುನ ರಾಶಿಯ ಜನರಿಗೆ ಈ ತಿಂಗಳು ಮಿಶ್ರ ಮತ್ತು ಉತ್ತಮ ಫಲಗಳು ಲಭಿಸುತ್ತದೆ. ಮೊದಲ ಅರ್ಧ ತಿಂಗಳು ಮಿಶ್ರ ಫಲಗಳು ಲಭಿಸುತ್ತವೆ ನಂತರದ ಅರ್ಧ ತಿಂಗಳು ಉತ್ತಮ ಫಲಗಳು ದೊರಕುತ್ತದೆ. ರವಿ ಗ್ರಹ ಮತ್ತು ಶುಕ್ರ ಗ್ರಹ ಮಿಥುನ ರಾಶಿಯಲ್ಲಿ ಸಂಚಾರ ಮಾಡುತ್ತಿರುವ ಕಾರಣ ತುಂಬಾ ಸ್ವಾಭಿಮಾನ ಮತ್ತು ಉತ್ತಮವಾದ ಗುಣ ಹೊಂದಿರುವರು. ವಿಷಯಗಳು ಮತ್ತು ವಿಚಾರಗಳನ್ನು ವಿಮರ್ಶೆ ಮಾಡಿ ಮುಂದುವರೆಯಬೇಕು.
ಸಂಬಂಧಗಳ ಕುರಿತು ಅರಿವು ಮೂಡುತ್ತದೆ ಜುಲೈ ತಿಂಗಳಿನಲ್ಲಿ ಮಿಥುನ ರಾಶಿಯವರಿಗೆ. ಈ ರಾಶಿಯವರು ಹೆಚ್ಚಾಗಿ ಮುಜುಗರ ಮತ್ತು ಸಂಕೋಚ ಸ್ವಭಾವದವರು. ಕೆಲಸ ಕಾರ್ಯಗಳಲ್ಲಿ ಮಧ್ಯಸ್ಥಿಕೆ ವಹಿಸುವುದರಿಂದ ದೂರ ಉಳಿಯುವುದು ಒಳ್ಳೆಯದು. ಈ ತಿಂಗಳಿನಲ್ಲಿ ಸಂಬಂಧಗಳಲ್ಲಿ ಅಥವಾ ಪರಿವಾರದಲ್ಲಿ ಕೆಲವು ಮನಸ್ತಾಪಗಳು ಎದುರಿಸಬೇಕಾಗುತ್ತದೆ ಈ ರಾಶಿಯವರು. ಜುಲೈ ತಿಂಗಳಿನಲ್ಲಿ ಮಿಥುನ ರಾಶಿಯ ಜನರಿಗೆ ಯೋಗ ಚೆನ್ನಾಗಿರುತ್ತೆ ಆದರೆ, ಯೋಗ್ಯತೆ ಪರೀಕ್ಷೆ ಆಗುವ ಸಂದರ್ಭಗಳು ಬರಬಹುದು ಅದನ್ನು, ಧೈರ್ಯವಾಗಿ ಈ ರಾಶಿಯವರು ಎದುರಿಸಬೇಕು.
ಈ ತಿಂಗಳಿನಲ್ಲಿ ಮಿಥುನ ರಾಶಿಯವರು ಹಣಕಾಸಿನ ವಿಚಾರವಾಗಿ ಎಚ್ಚರಿಕೆ ವಹಿಸುವುದು ಉತ್ತಮ. ದುಡ್ಡಿನ ವಿಷಯವಾಗಿ ಏರು-ಪೇರನ್ನು ಕಾಣಬಹುದು. ಮಿಥುನ ರಾಶಿಯ ಜನರಿಗೆ ಈ ತಿಂಗಳಿನಲ್ಲಿ ಆದಾಯಕ್ಕಿಂತ ಖರ್ಚು ವೆಚ್ಚ ಹೆಚ್ಚಾಗಿ ಬಾಧಿಸಬಹುದು. ಬ್ಯಾಂಕ್’ಗೆ ಸಂಬಂಧಪಟ್ಟ ವಿಚಾರಗಳು, ಕೋರ್ಟ್ಗೆ ಸಂಬಂಧಪಟ್ಟ ವ್ಯಾಜ್ಯಗಳು, ಯಾವುದೇ ರೀತಿಯ ಅಗ್ರಿಮೆಂಟ್’ಗಳ ಸಹಿ ಹಾಕುವ ವಿಚಾರ ಮತ್ತು ಸಾಲ ತೀರಿಸುವುದು ಈ ವಿಚಾರವಾಗಿ ಹೆಚ್ಚಿನ ಖರ್ಚು ವೆಚ್ಚ ಆಗುತ್ತದೆ.
ಬ್ಯಾಂಕ್ ಮುಖಾಂತರ ಸಾಲ ಪಡೆಯುವುದು, ಬೇರೆಯವರ ಸಹಾಯದಿಂದ ಹೂಡಿಕೆ ಮಾಡುವುದು ಈ ಯೋಗಗಳು ಕೂಡ ಇದೆ. ಮಿಥುನ ರಾಶಿಯ ಜನರು ಒಪ್ಪಂದಗಳು ಮತ್ತು ಪೇಮೆಂಟ್ ಮಾಡುವ ಕೆಲಸಗಳಲ್ಲಿ ಹೆಚ್ಚಿನ ಗಮನ ಕೊಡುವುದು ಉತ್ತಮ. ಯೋಚನೆಗಳು ಮತ್ತು ಯೋಜನೆಗಳಿಂದ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಜವಾಬ್ದಾರಿಗಳಿಂದ ದೂರ ಉಳಿಯುವುದು ಕಷ್ಟ ಅದನ್ನು, ಎದುರಿಸುವ ಧೈರ್ಯ ತೋರಬೇಕು. ಕೆಲವೊಂದು ಸಂದರ್ಭಗಳಲ್ಲಿ ಗುರಿ ಇಲ್ಲದ ಪ್ರಯಾಣ ಮಾಡುವ ಯೋಗ ಕೂಡ ಇರುತ್ತದೆ.
ಇನ್ನು ಮಿಥುನ ರಾಶಿಯ ಜನರಿಗೆ ಈ ತಿಂಗಳು ಸುಮಾರು ಕೆಲಸಗಳಲ್ಲಿ ಶಾರ್ಟ್ಕಟ್ ರೂಟ್ ಅಥವಾ ಫಾಲ್ಸ್ ಕಮ್ಯುನಿಕೇಶನ್ ಆಗುವ ಸಾಧ್ಯತೆ ಕೂಡ ಇದೆ. ಬೇರೆಯವರಿಗೆ ಸಹಾಯ ಮಾಡುವುದಕ್ಕಾಗಿ ಕೋರ್ಟ್ ಕಚೇರಿ, ಪೊಲೀಸ್ ಸ್ಟೇಷನ್, ವಕೀಲರನ್ನು ಭೇಟಿಯಾಗುವುದು, ವೈದ್ಯರನ್ನು ಭೇಟಿ ಆಗುವುದಕ್ಕೆ ಸುತ್ತಾಡುವ ಸಂದರ್ಭ ಸೃಷ್ಟಿಯಾಗಬಹುದು.
ಮಿಥುನ ರಾಶಿಯ ಜನರಿಗೆ ಪೈಪೋಟಿ ಮತ್ತು ವೈರತ್ವ ಇದರಿಂದ, ಕೆಲಸ ಕಾರ್ಯಗಳಿಂದ ವಿಳಂಬ ಮತ್ತು ತೊಂದರೆ ಉಂಟಾಗುವ ಸಾಧ್ಯತೆ ಇದೆ. ಅದರಿಂದ, ಎಚ್ಚರಿಕೆ ವಹಿಸುವುದು ಅತ್ಯಗತ್ಯ. ವಾಹನ ಖರೀದಿ ಭೂಮಿ ಖರೀದಿಯಲ್ಲಿ ಮೋಸ ಆಗುವ ಸಾಧ್ಯತೆ ಇದೆ ಅದರಿಂದ, ತಿಂಗಳಿನಲ್ಲಿ ಯಾವ ವಾಹನ ಅಥವಾ ಭೂಮಿಯನ್ನು ಖರೀದಿ ಮಾಡದೇ ಇರುವುದು ಒಳ್ಳೆಯದು. ಭೂಮಿ ಖರೀದಿ ವಿಚಾರಕ್ಕೆ ಒಂದು ವೇಳೆ ಕೈ ಹಾಕಿದರೆ ಅದರಿಂದ, ಅಮೂಲ್ಯವಾದ ವಸ್ತುಗಳನ್ನು ಅಡ ಇಡುವ ಅಥವಾ ಕಳೆದುಕೊಳ್ಳುವ ಸಾಧ್ಯತೆ ಕೂಡ ಇದೆ. ಹೆಚ್ಚು ತಾಳ್ಮೆಯಿಂದ ಇದ್ದರೇ ಕೆಲಸ ಕಾರ್ಯಗಳು ಸುಗಮವಾಗಿ ಹಾಗೂ ಸರಾಗವಾಗಿ ನೆರವೇರುತ್ತದೆ.
ಮಿಥುನ ರಾಶಿಯ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಸಲುವಾಗಿ ದೂರ ಪ್ರಯಾಣ ಮಾಡುವ ಯೋಗವಿದೆ. ಓದಿನ ವಿಚಾರವಾಗಿ ಮಿಶ್ರ ಫಲ ಲಭಿಸುತ್ತದೆ. ಆಲಸ್ಯ ಕಾಡುವ ಸಾಧ್ಯತೆ ಕೂಡ ಇದೆ. ಓದಿನಲ್ಲಿ ಕಠಿಣ ಪರಿಶ್ರಮ ಮತ್ತು ಆಸಕ್ತಿ ತೋರುವುದರಿಂದ ಯಶಸ್ಸು ಗಳಿಕೆ ಮಾಡಬಹುದು. ಉದ್ಯೋಗ ಮಾಡುವ ಮಿಥುನ ರಾಶಿಯ ಜನರಿಗೆ ಈ ತಿಂಗಳಿನಲ್ಲಿ ಸ್ಥಳ ಬದಲಾವಣೆ ಮಾಡುವ ಯೋಗ ಇದೆ. ಕೆಲಸದ ಒತ್ತಡ ಮತ್ತು ಮೇಲಿನ ಅಧಿಕಾರಿಗಳ ಒತ್ತಡ ಹೆಚ್ಚಾಗುವ ಸಾಧ್ಯತೆ ಸಹ ಇದೆ. ವಿದೇಶಕ್ಕೆ ಹೋಗಿ ಕೆಲಸ ಮಾಡಲು ಇಚ್ಛೆ ಪಡುವ ಜನರಿಗೆ ಉತ್ತಮ ಅವಕಾಶಗಳು ಹುಡುಕಿ ಬರುವ ಸಾಧ್ಯತೆ ಇದೆ.
ಈ ತಿಂಗಳಿನಲ್ಲಿ ಮಿಥುನ ರಾಶಿಯ ಜನರಿಗೆ ಅನಿರೀಕ್ಷಿತ ಓಡಾಟಗಳು ಹೆಚ್ಚಾಗುವ ಸಾಧ್ಯತೆ ಇದೆ. ಒಪ್ಪಂದ ಅಥವಾ ಮದುವೆ ವಿಚಾರವಾಗಿ ಹೆಚ್ಚಿನ ಗಮನವನ್ನು ಕೊಡಬೇಕು. ಈ ತಿಂಗಳಿನಲ್ಲಿ ಪತಿ ಪತ್ನಿಯರ ಬಾಂಧವ್ಯದಲ್ಲಿ ಮತ್ತು ಜಂಟಿ ವ್ಯವಹಾರದಲ್ಲಿ ಮನಸ್ತಾಪಗಳು ಎದುರಾಗುವ ಸಾಧ್ಯತೆ ಇದೆ. ಶುಭ ಕಾರ್ಯ ವಿಳಂಬ ಅಥವಾ ಮುಂದೆ ಹೋಗುವ ಸಾಧ್ಯತೆ ಇದೆ. ಶತ್ರುಗಳಿಂದ ದೂರ ಇರುವುದು ಉತ್ತಮ ಇಲ್ಲದೆ ಹೋದರೆ ಮನಸ್ತಾಪಗಳು ಎದುರಿಸಬೇಕಾಗುತ್ತದೆ. ಮಾಡುವ ಕೆಲಸ ಮತ್ತು ಮಾತನಾಡುವ ನುಡಿಗಳು ಬೇರೆಯವರನ್ನು ಪ್ರಚೋದನೆ ಮಾಡುವ ಸಾಧ್ಯತೆ ಇದೆ ಮಿಥುನ ರಾಶಿಯವರಿಗೆ.
ಶಾಂತಿಯಿಂದ ವಿಚಾರಗಳನ್ನು ಯೋಚನೆ ಮಾಡಿ ಮುಂದುವರೆಯುವುದು ಒಳ್ಳೆಯದು. ಹಿರಿಯರು ಮತ್ತು ಕೆಲಸ ಮಾಡುವ ಸ್ಥಳದಲ್ಲಿರುವ ಜನರು ಅವರ ಮಾತನ್ನು ಕೇಳುವುದು ಒಳ್ಳೆಯದು. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು ಜೊತೆಗೆ ಎಚ್ಚರಿಕೆ ವಹಿಸಬೇಕು.
ಪರಿಹಾರಗಳು :-ಪ್ರತಿ ಶುಕ್ರವಾರ ಶುಕ್ರನಿಗೆ, ಬಿಳಿ ವಸ್ತ್ರದಲ್ಲಿ ಅವರೆಕಾಳು ದಾನ ಮಾಡಬೇಕು. ಶುಕ್ರ ದೇವನಿಗೆ ಶುಕ್ರ ಬೀಜ ಮಂತ್ರ ಪಾರಾಯಣ ಮಾಡಬೇಕು. ಇದರಿಂದ, ಅದೃಷ್ಟ ಮತ್ತು ಆರೋಗ್ಯ ವೃದ್ಧಿ ಆಗುತ್ತದೆ.ಬುಧವಾರ ಬುಧ ಗ್ರಹಕ್ಕೆ ಹಸಿರು ಬಟ್ಟೆಯಲ್ಲಿ ಹೆಸರು ಕಾಳು ದಾನ ಮಾಡಿ. ವಿಷ್ಣು ದೇವರ ಆರಾಧನೆ ಮಾಡಬೇಕು ಜೊತೆಗೆ ವಿಷ್ಣು ದೇವರ ಸಹಸ್ರನಾಮ ಪಾರಾಯಣ ಮಾಡಬೇಕು. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.