ಈಗ ಎಲ್ಲರ ಮನೆಯಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಇದ್ದೇ ಇರುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಇದ್ದರೆ ಸರ್ಕಾರ ಇದೀಗ ಸಿಲಿಂಡರ್ ಹೊಂದಿರುವ ಎಲ್ಲರಿಗೂ ಹೊಸದೊಂದು ವಿಚಾರ ತಿಳಿಸಿದೆ ಸರ್ಕಾರ. ಕೇಂದ್ರ ಸರ್ಕಾರವು ಕಷ್ಟದಲ್ಲಿರುವ ಜನರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ, ಅದು ಪಿಎಮ್ ಉಜ್ವಲಾ ಯೋಜನೆ ಆಗಿದೆ.
ದೇಶದ 1 ಕೋಟಿಗಿಂತ ಹೆಚ್ಚು ಅರ್ಹ ಫಲಾನುಭವಿಗಳು ಈ ಯೋಜನೆಯ ಮೂಲಕ ಉಚಿತ ಗ್ಯಾಸ್ ಸಿಲಿಂಡರ್ ಗಳನ್ನು ಪಡೆದಿದ್ದಾರೆ. ಇತ್ತೀಚೆಗೆ ಗ್ಯಾಸ್ ಸಿಲಿಂಡರ್ ಬಳಕೆದಾರರು ಡಿಸೆಂಬರ್ 31ರ ಒಳಗೆ ಇಕೆವೈಸಿ ಮಾಡಿಸಬೇಕು, ಇಲ್ಲದೆ ಹೋದರೆ ಅವರಿಗೆ ಜನವರಿ ಇಂದ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಸಿಗುವುದಿಲ್ಲ ಎನ್ನುವ ಸುದ್ದಿ ವೈರಲ್ ಆಗಿತ್ತು. ಪ್ರಸ್ತುತ ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಸಿಲಿಂಡರ್ ಬೆಲೆ 901 ರೂಪಾಯಿ, ಸಬ್ಸಿಡಿ ಕಳೆದರೆ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಸಿಗುತ್ತದೆ..
ಇದು ಆಗುವುದು ಇಕೆವೈಸಿ ಮಾಡಿಸಿದರೆ ಮಾತ್ರ, 2023ರ ಡಿಸೆಂಬರ್ 31ರ ಒಳಗೆ ಇಕೆವೈಸಿ ಮಾಡಿಸಿಲ್ಲ ಎಂದರೆ ಅಂಥವರಿಗೆ ಸರ್ಕಾರದಿಂದ ಸಬ್ಸಿಡಿ ಸಿಗುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಈ ಸುದ್ದಿ ಸುಳ್ಳು ಎಂದು ಸರ್ಕಾರ ತಿಳಿಸಿದೆ. ಅಧಿಕೃತವಾಗಿ ಪ್ರಕಟಣೆ ಮಾಡಲಾಗಿದ್ದು, ಇಕೆವೈಸಿ ಎಲ್ಲರಿಗೂ ಕಡ್ಡಾಯ ಅಲ್ಲ, ಉಜ್ವಲಾ ಯೋಜನೆಯ ಮೂಲಕ ಗ್ಯಾಸ್ ಸಿಲಿಂಡರ್ ಪಡೆದಿರುವವರಿಗೆ ಮಾತ್ರ ಕಡ್ಡಾಯ, ಆದರೆ ಅವರಿಗು ಕೂಡ ಡಿಸೆಂಬರ್ 31 ಕೊನೆಯ ದಿನಾಂಕ ಅಲ್ಲ ಎಂದು ಸರ್ಕಾರ ತಿಳಿಸಿದೆ.
ಇಕೆವೈಸಿ ಕಡ್ಡಾಯ ಮಾಡಿರುವುದು ಸರ್ಕಾರಕ್ಕೆ ಪ್ರತಿ ಫಲಾನುಭವಿಯ ಮಾಹಿತಿ ಸಿಗಲಿ, ಯಾರಿಗೂ ಯಾವ ತೊಂದರೆಯು ಆಗದೆ ಇರಲಿ ಎನ್ನುವ ಕಾರಣಕ್ಕೆ. ಆದರೆ ಉಜ್ವಲಾ ಯೋಜನೆಯಲ್ಲಿ ಗ್ಯಾಸ್ ಸಿಲಿಂಡರ್ ಪಡೆಯದೇ ಇರುವವರಿಗೆ ಈ ನಿಯಮ ಜಾರಿಗೆ ಬಂದಿಲ್ಲ. ಇಂಥ ಸುಳ್ಳು ಸುದ್ದಿಗಳಿಗೆ ಕಿವಿ ಕೊಡಬಾರದು ಎಂದು ಸರ್ಕಾರ ತಿಳಿಸಿದೆ.