Gas Cylinder Subsidy: ಗ್ಯಾಸ್ ಸಿಲಿಂಡರ್ ಎನ್ನುವುದು ಪ್ರತಿಯೊಬ್ಬರ ಮನೆಯಲ್ಲಿ ದಿನನಿತ್ಯ ಬಳಸುವ ವಸ್ತು. ವಿಶ್ವದಲ್ಲಿ ಮತ್ತು ದೇಶದಲ್ಲಿ ಹಣದುಬ್ಬರ ಜಾಸ್ತಿ ಆಗುತ್ತಿದೆ. ಇದರಿಂದ ಸಾಮಾನ್ಯ ಜನರಿಗೆ ಹೆಚ್ಚು ಹೊರೆ ಮತ್ತು ತೊಂದರೆ ಆಗುತ್ತಿದೆ. ಗ್ಯಾಸ್ ಸಿಲಿಂಡರ್ ನ ಬೆಲೆ ಹೆಚ್ಚಾಗುತ್ತಿದೆ. ಆದರೆ ಸಬ್ಸಿಡಿ ಹಣ ಕಡಿಮೆಯೇ ಇತ್ತು. ಇದರಿಂದ ಜನರಿಗೆ ಗ್ಯಾಸ್ ಸಿಲಿಂಡರ್ ಖರೀದಿಗೂ ಕಷ್ಟವಾಗುತ್ತಿತ್ತು. ಆದರೆ ಈಗ ಸರ್ಕಾರವೇ ಜನರಿಗೆ ಒಂದು ಗುಡ್ ನ್ಯೂಸ್ ನೀಡಿದ್ದು, ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸಲು ಮುಂದಾಗಿದೆ…
ನಮ್ಮ ರಾಜ್ಯದಲ್ಲಿ ಈಗ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಭಾರಿ ಸದ್ದು ಮಾಡುತ್ತಿದೆ. ಜನರ ಆರ್ಥಿಕ ಹೊರೆ ಕಡಿಮೆ ಮಾಡುವುದಕ್ಕಾಗಿಯೇ ಈ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಲಾಗಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಜನರ ಹೊರೆಯನ್ನು ಕಡಿಮೆ ಮಾಡಲು ಮುಂದಾಗಿದೆ. ದೇಶದಲ್ಲಿ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆ ಇಂದ ಜನರಿಗೆ ಸಮಸ್ಯೆ ಆಗುತ್ತಿರುವ ಕಾರಣ, LPG ಸಿಲಿಂಡರ್ ಗಳ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.
ಮಂಗಳವಾದ ಕ್ಯಾಬಿನೆಟ್ ಸಭೆ ನಡೆದಿದ್ದು, ಅದರಲ್ಲಿ ನರೇಂದ್ರ ಮೋದಿ ಅವರು ಮತ್ತು ಸಂಪುಟ ಸಚಿವರು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಸಿಲಿಂಡರ್ ಬೆಲೆ ಕಡಿಮೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. 2024ರ ಲೋಕಸಭಾ ಎಲೆಕ್ಷನ್ ಗಾಗಿ ಬಿಜೆಪಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳುತ್ತಿದ್ದಾರೆ. ಆದರೆ ಅನುರಾಗ್ ಅವರು ಈ ಮಾತನ್ನು ಒಪ್ಪದೆ, ರಕ್ಷಾಬಂಧನ ಮತ್ತು ಓಣಂ ಹಬ್ಬ ಆಚರಣೆ ಮಾಡುತ್ತಿರುವ ಮಹಿಳೆಯರಿಗೆ ಸರ್ಕಾರ ಗಿಫ್ಟ್ ಕೊಟ್ಟಿದೆ ಎಂದು ತಿಳಿಸಿದ್ದಾರೆ.
Gas Cylinder Subsidy
ಇದು ಮಾತ್ರವಲ್ಲದೆ ಮತ್ತೊಂದು ಗುಡ್ ನ್ಯೂಸ್ ಸಹ ಇದ್ದು, ಈ ಹಿಂದಿನ ವರ್ಷಗಳ ಹಾಗೆ ಈ ವರ್ಷ ಕೂಡ ಉಜ್ವಲ ಯೋಜನೆಯ ಅಡಿಯಲ್ಲಿ ಸುಮಾರು 75 ಲಕ್ಷ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಕನೆಕ್ಷನ್ ಸಿಗಲಿದೆ. ಇದನ್ನು ಕೂಡ ಸಚಿವರೇ ತಿಳಿಸಿದ್ದಾರೆ. ಉಜ್ವಲ ಯೋಜನೆಯಲ್ಲಿ ಗ್ಯಾಸ್ ಸಿಲಿಂಡರ್ ಪಡೆಯುತ್ತಿರುವ ಎಲ್ಲರಿಗೂ ಸಿಲಿಂಡರ್ ಮೇಲೆ 200 ರೂಪಾಯಿ ಸಬ್ಸಿಡಿ ಬರುತ್ತಿದೆ. ಆದರೆ ಈಗ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯನ್ನು 200 ರೂಪಾಯಿವರೆಗು ಇಳಿಸಿದ್ದು, ಉಜ್ವಲ ಯೋಜನೆಯ ಬಳಕೆದಾರರಿಗೆ 400 ರೂಪಾಯಿವರೆಗು ಸಬ್ಸಿಡಿ ಸಿಗುತ್ತದೆ.
ಇನ್ನುಳಿದ ಗ್ರಾಹಕರಿಗೆ 200 ರೂಪಾಯಿವರೆಗು ಸಬ್ಸಿಡಿ ಸಿಗುತ್ತದೆ. ಈ ವರ್ಷ 75 ಲಕ್ಷ ಕುಟುಂಬಗಳಿಗೆ ಈ ಯೋಜನೆಯ ಫಲ ಸಿಗಲಿದ್ದು, ಆಗ ಒಟ್ಟಾರೆಯಾಗಿ, 10.32 ಕೋಟಿ ಉಜ್ವಲ ಯೋಜನೆಯ ಫಲಾನುಭವಿಗಳಾಗುತ್ತಾರೆ ಎಂದು ಸಹ ಮಾಹಿತಿ ನೀಡಿದ್ದಾರೆ. ಯಾವ ಕುಟುಂಬ ಒಂದು ವರ್ಷಕ್ಕೆ 12 Bharat, Indane ಅಥವಾ Hp ಸಿಲಿಂಡರ್ ಪಡೆಯುತ್ತಾರೋ ಆ ಕುಟುಂಬ ಈ ಸೌಲಭ್ಯವನ್ನು ಪಡೆಯಬಹುದು. ನರೇಂದ್ರ ಮೋದಿ ಅವರ ಸರ್ಕಾರವು ಈ ಮೊದಲು LPG ಸಿಲಿಂಡರ್ ಗಳ ಬೆಲೆಯಿಂದ ಆಗುವ ಹೊರೆಯನ್ನು ಕಡಿಮೆ ಮಾಡಲು, ಗ್ರಾಹಕರ ಬ್ಯಾಂಕ್ ಅಕೌಂಟ್ ಗೆ ನೇರವಾಗಿ ಕ್ರೆಡಿಟ್ ಮಾಡಲಾಗುತ್ತಿತ್ತು.
ಆದರೆ ಕೋವಿಡ್ ಸಮಯದಿಂದ ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ನಿಲ್ಲಿಸಲಾಗಿತ್ತು. ಆದರೆ ಗ್ಯಾಸ್ ಸಿಲಿಂಡರ್ ನ ಬೆಲೆ ಆಗಾಗ ಜಾಸ್ತಿ ಆಗುತ್ತಲೇ ಇರುವಾಗ ಜನರಿಗು ಇದು ಆರ್ಥಿಕವಾಗಿ ಹೊರೆ ಆಗಿತ್ತು. ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಲೇ ಇದ್ದರು. ಇದೀಗ ಕೊನೆಗೂ ಸರ್ಕಾರ ಜನರ ಮನವಿಯನ್ನು ಸ್ವೀಕರಿಸಿದೆ.