Ganga Kalyana 2023: ನಮ್ಮ ಸರ್ಕಾರವು ರೈತರಿಗೆ ಸಹಾಯ ಆಗಲಿ ಎಂದು ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇದೀಗ ಸರ್ಕಾರವು ಅಂಥದ್ದೇ ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜೆನೆಯ ಮೂಲಕ ಸಣ್ಣ ರೈತರು ಮತ್ತು ಅತಿಸಣ್ಣ ರೈತರು ಇಬ್ಬರು ಕೂಡ ತಮ್ಮ ಕೃಷಿ ನೆಲದಲ್ಲಿ ಉಚಿತವಾಗಿ ಬೋರ್ ವೆಲ್ ಹಾಕಿಸಿಕೊಳ್ಳಬಹುದು. ಈ ಯೋಜನೆಯ ಹೆಸರು ಗಂಗಾ ಕಲ್ಯಾಣ ಯೋಜನೆ. (Ganga Kalyana) ಸಣ್ಣ ರೈತರು ಮತ್ತು ವಿವಿಧ ಸಮುದಾಯಕ್ಕೆ ಸೇರಿದ ರೈತರು ಈ ಯೋಜನೆಯ ಸೌಲಭ್ಯ ಪಡೆಯಬಹುದು.

ಈ ಯೋಜನೆಗೆ ವರ್ಷಕ್ಕೆ ಒಂದು ಸಾರಿ ಅರ್ಜಿ ಸಲ್ಲಿಸಲು ಆಹ್ವಾನ ನೀಡಲಾಗುತ್ತದೆ. ಈ ವರ್ಷ ಕೂಡ ಅವಕಾಶ ನೀಡಲಾಗಿತ್ತು, ಆದರೆ ಈ ವರ್ಷ ಇನ್ನು ಯಾರಿಗೆ ಅರ್ಜಿ ಸಲ್ಲಿಸಲು ಸಾಧ್ಯ ಆಗಿಲ್ಲವೋ, ಅವರಿಗೆಲ್ಲಾ ಈ ಯೋಜನೆಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ನೀಡಲಾಗಿದೆ. ಆಕ್ಟೊಬರ್ 30 ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿತ್ತು, ಆದರೆ ಈಗ ನವೆಂಬರ್ 10ರವರೆಗೂ ದಿನಾಂಕವನ್ನು ವಿಸ್ತರಿಸಲಾಗಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಲು ಬೇಕಿರುವ ಮಾನದಂಡಗಳು, ಅರ್ಹತೆ, ಬೇಕಾಗುವ ದಾಖಲೆಗಳು ಎಲ್ಲದರ ಬಗ್ಗೆ ಇಂದು ಮಾಹಿತಿ ತಿಳಿಸುತ್ತೇವೆ ನೋಡಿ. ಈ ಯೋಜನೆಗೆ ಹಿಂದುಳಿದ ವರ್ಗದ ರೈತರು ಅರ್ಜಿ ಸಲ್ಲಿಸಬಹುದು, ಈ ಕೆಲವು ದಾಖಲೆಗಳು ಇದ್ದರೆ ಸಾಕು, ಅರ್ಜಿ ಸಲ್ಲಿಸುವ ಮೂಲಕ ನಿಮ್ಮ ಜಮೀನಿನಲ್ಲಿ ಸರ್ಕಾರದಿಂದ ಬೋರ್ ವೆಲ್ ಕೊರೆಸಲು ಅಥವಾ ಪಂಪ್ ಸೆಟ್ ಹಾಕಿಸಲು ವ್ಯವಸ್ಥೆ ಮಾಡಿಕೊಡಲಾಗುತ್ತದ.

ಪರಿಶಿಷ್ಟಜಾತಿ ಮತ್ತು ಪಂಗಡಕ್ಕೆ ಸೇರಿದವರ ಜಾತಿ ಪ್ರಮಾಣಪತ್ರ ಕಡ್ಡಾಯವಾಗಿ ಇರಬೇಕು.
ವಾರ್ಷಿಕ ಆದಾಯದ ಮಿತಿ ಗ್ರಾಮೀಣ ಪ್ರದೇಶದಕ್ಕೆ 1.5 ಲಕ್ಷ ರೂಪಾಯಿಗಳು, ನಗರ ಪ್ರದೇಶಕ್ಕೆ 2 ಲಕ್ಷ ರೂಪಾಯಿ
ಯೋಜನೆಗೆ ಅರ್ಜಿ ಸಲ್ಲಿಸುವವರ ವಯಸ್ಸು ಮಿನಿಮಮ್ 21 ವರ್ಷ ಆಗಿರಬೇಕು
ಸಣ್ಣಹಿಳುವಳಿದಾರರಾಗಿದ್ದಲಿ ಪ್ರಮಾಣಪತ್ರ ಮತ್ತು ಇತ್ತೀಚಿನ ಪಹಣಿ ಆದಾಯ ಪ್ರಮಾಣ ಪತ್ರ, ಕುಟುಂಬದ ಪಡಿತರ ಚೀಟಿ ಬೇಕಾಗುತ್ತದೆ.

ಬ್ಯಾಂಕ್ ಪಾಸ್ ಬುಕ್
ಆಧಾರ್ ಕಾರ್ಡ್.. ಇದಿಷ್ಟು ದಾಖಲೆಗೆಳನ್ನು ಹೊಂದಿರಬೇಕು.
ಅರ್ಜಿ ಸಲ್ಲಿಕೆಯನ್ನು ಆನ್ಲೈನ್ ಅಥವಾ ಆಫ್ಲೈನ್ ಎರಡರ ಮೂಲಕ ಕೂಡ ಅಪ್ಲೈ ಮಾಡಬಹುದು. ನಿಮಗೆ ಹತ್ತಿರ ಇರುವ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಕೇಂದ್ರಕ್ಕೆ ಹೋಗಿ ಅಪ್ಲೈ ಮಾಡಬಹುದು. ಅಥವಾ ಸೇವಾಸಿಂಧು ಪೋರ್ಟಲ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!