ರಾಜ್ಯ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಗಂಗಾ ಕಲ್ಯಾಣ ಯೋಜನೆ ಕೂಡ ಒಂದಾಗಿದೆ.ಈ ಯೋಜನೆಯನ್ನು ಈಗಾಗಲೇ ಬಹುತೇಕ ಮಂದಿ ಇದರ ಉಪಯೋಗವನ್ನು ಪಡೆದುಕೊಂಡಿದ್ದಾರೆ, ಅಷ್ಟೇ ಅಲ್ಲದೆ ಈ ಯೋಜನೆಯಡಿ ಸೌಲಭ್ಯ ಪಡೆಯಲು ಕಾಯುತ್ತಿದ್ದಾರೆ, ಅಂತವರಿಗೆ ಈ ವಿಚಾರವನ್ನು ತಲುಪಿಸಿ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲಿ.
ಈ ಯೋಜನೆಯನ್ನು ಪಡೆಯಲು ಯಾರೆಲ್ಲ ಅರ್ಹರು ಹಾಗೂ ಈ ಯೋಜನೆಯ ಸಹಾಯಧನ ಎಷ್ಟಿರತ್ತೆ? ಇದಕ್ಕೆ ಬೇಕಾಗುವ ದಾಖಲೆಗಳು ಯಾವುವು ಅನ್ನೋದನ್ನ ಈ ಕೆಳಗೆ ಸಂಪೂರ್ಣವಾಗಿ ತಿಳಿಸಲಾಗಿದೆ, ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದು ಕೊಳ್ಳಲಿ. ಪ್ರತಿದಿನ ಸರ್ಕಾರದ ಯೋಜನೆ, ಸೇರಿದಂತೆ ಹಲವು ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಸೇರಿ
ಗಂಗಾ ಕಲ್ಯಾಣ ನೀರಾವರಿ ಯೋಜನೆ 2024 -25:
ಯಾರೆಲ್ಲ ಅರ್ಜಿಸಲ್ಲಿಸಲು ಅರ್ಹರು: ಹಿಂದುಳಿದ ವರ್ಗ ಪ್ರ-1, 2ಎ,3ಎ,ಮತ್ತು 3ಬಿ,
ಸಣ್ಣ ರೈತರು ಅಥವಾ ಅತಿ ಸಣ್ಣ ರೈತರು ಮಾತ್ರ ಅರ್ಜಿಸಲ್ಲಿಸಲು ಅರ್ಹರು
ಸಾಲದ ವಿವರ:
ಘಟಕ ವೆಚ್ಚ 3,75,000 ರಿಂದ 4.75,೦೦೦
ಸಹಾಯಧನ: 3,25,000 ರಿಂದ 4, 25,000
ಸಾಲದ ಮೊತ್ತ: 75,000 -50,000 ರೊ.ಗಳು
ಅರ್ಜಿಸಲ್ಲಿಸಲು ಬೇಕಾಗುವ ದಾಖಲಾತಿಗಳು:
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ
- ಸಣ್ಣ ಮತ್ತು ಅತಿಸಣ್ಣ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ
- ಪಹಣಿ ಹಾಗೂ FID
- ರೇಷನ್ ಕಾರ್ಡ್
ಯಾವೆಲ್ಲ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಹಾಕಬಹುದು?
- ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
- ಉಪ್ಪಾರ ಅಭಿವೃದ್ಧಿ ನಿಗಮ
- ಮರಾಠ ಅಭಿವೃದ್ಧಿ ನಿಗಮ
- ವಿಶ್ವಕರ್ಮ ಅಭಿವೃದ್ಧಿ ನಿಗಮ
- ವಿಶ್ವಕರ್ಮಾ ಅಭಿವೃದ್ಧಿ ನಿಗಮ
- ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
- ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
- ಸವಿತಾ ಸಮಾಜ ಅಭಿವೃದ್ಧಿ ನಿಗಮ
- ಅಲೆಮಾರಿ ಅರೆ- ಅಲೆಮಾರಿ ಅಭಿವೃದ್ಧಿ ನಿಗಮ
- ಒಕ್ಕಲಿಗ ಅಭಿವೃದ್ಧಿ ನಿಗಮ (ಅರ್ಜಿಸಲ್ಲಿಸಲು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಅಥವಾ ಗ್ರಾಮ ಒನ್, ಕರ್ನಾಟಕ ಒನ್, ಭೇಟಿ ನೀಡಿ ಅರ್ಜಿಸಲ್ಲಿಸಬಹುದು)