ಆಹಾರ ಇಲಾಖೆಯು ಉದ್ಯೋಗಕ್ಕಾಗಿ ಹೊಸ ನೇಮಕಾತಿ ಅರ್ಜಿ ಆಹ್ವಾನ ಮಾಡಿದೆ. ಇದಕ್ಕೆ ಯಾರು ಯಾರು ಅರ್ಜಿ ಸಲ್ಲಿಸಬಹುದು ಹಾಗೂ ಏನೇನು ವಿದ್ಯಾಭ್ಯಾಸವನ್ನು ಕೇಳಿದ್ದಾರೆ ಸ್ಥಳದಲ್ಲಿ ಅರ್ಜಿ ಆಹ್ವಾನಿಸಿದ್ದಾರೆ ಹಾಗೂ ಸಂಬಳದ ಮಿತಿ ಏನು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ಎಫ್ಎಸ್ಎಸ್ಏಐ ಇಲಾಖೆಯು, ಇದು ಕೇಂದ್ರದ ಇಲಾಖೆಯಾಗಿದ್ದು, ಇದರಿಂದ ಆಹಾರ ಸುರಕ್ಷತಾ ಪ್ರಾಧಿಕಾರದಿಂದ ಒಂದು ಹೊಸ ನೇಮಕಾತಿ ಅರ್ಜಿ ಆಹ್ವಾನಿಸಿದ್ದಾರೆ. ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ ಅಂದರೆ ೧೫ ಮೇ ೨೦೨೧ ರೊಳಗೆ ಸಲ್ಲಿಸಬೇಕು. ಹುದ್ದೆಗಳು ವಿವರ ಈ ರೀತಿಯಾಗಿದೆ ಪ್ರಿನ್ಸಿಪಾಲ್ ಮ್ಯಾನೇಜರ್ ೧ಹುದ್ದೆ, ಜಾಯಿಂಟ್ ಡೈರೆಕ್ಟರ್ ೧೨ ಹುದ್ದೆ. ಸೀನಿಯರ್ ಮೆನೇಜರ್ ೧ ಹುದ್ದೆ, ಸೀನಿಯರ್ ಮ್ಯಾನೇಜರ್ ಐಟಿ ೧ ಹುದ್ದೆ, ಡೆಪ್ಯುಟಿ ಡೈರೆಕ್ಟರ್ ೧೭ ಹುದ್ದೆ, ಮ್ಯಾನೇಜರ್ ೬ ಹುದ್ದೆ.
ಒಟ್ಟು ಹುದ್ದೆಗಳು 38. ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ಪದವಿ, ಸ್ನಾತಕೋತ್ತರ ವಿದ್ಯಾರ್ಹತೆಯನ್ನು ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪಡೆದಿರಬೇಕು. ಡಿಪ್ಯೂಟಿ ಮ್ಯಾನೇಜರ್ ಹಾಗು ಮ್ಯಾನೇಜರ್ ಹುದ್ದೆಗೆ 40ವರ್ಷ ವಯಮಿತಿ ಇರಬೇಕು ಮತ್ತು ಇತರ ಎಲ್ಲ ಹುದ್ದೆಗಳಿಗೆ ಗರಿಷ್ಠ 50 ವರ್ಷ ವಯೋಮಿತಿ ಇರಬೇಕು . ವೇತನ ಶ್ರೇಣಿಯು ನಲವತ್ತು ಸಾವಿರದಿಂದ 80 ಸಾವಿರದವರೆಗೆ ಪಡೆಯಬಹುದು. ಅರ್ಜಿ ಸಲ್ಲಿಸಲು ಆರಂಭ ದಿನಾಂಕ ಏಪ್ರಿಲ್ 16 2021 ಹಾಗೂ ಕೊನೆಯ ದಿನಾಂಕ ಮೇ 15 2021. ಲಿಂಕ್ ಅನ್ನು ಒತ್ತಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು fci.in.net.