Free Sewing machine scheme: ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ. ಇದರ ಪ್ರಕಾರ ಮಹಿಳೆಯರು ಮನೆಯನ್ನು ನಡೆಸಲು ಆರ್ಥಿಕವಾಗಿ ಸಹಾಯ ಆಗುವ ಹಾಗೆ, ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದೇ ರೀತಿ ಈಗ 2023ನೇ ವರ್ಷದಲ್ಲಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು (Free Sewing machine) ನೀಡುವ ನಿರ್ಧಾರಕ್ಕೆ ಬಂದಿದೆ ಸರ್ಕಾರ. ಮಹಿಳೆಯರಿಗೆ ಸರ್ಕಾರದಿಂದ ಹೊಲಿಗೆ ಯಂತ್ರ ಪಡೆದು, ಕಡಿಮೆ ಬಂಡವಾಳದಲ್ಲಿ ಹಣ ಗಳಿಸಲು ಸುಲಭವಾಗುತ್ತದೆ. ಮಹಿಳೆಯರು ಸ್ವಾತಂತ್ರರಾಗಿರಲು ಸರ್ಕಾರದಿಂದ ಸಿಗುವ ಈ ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು.
ಈ ವರ್ಷ 2023ರಲ್ಲಿ ರಾಟಿ ಉದ್ಯಮ ಮಾಡುತ್ತಿರುವ ಮಹಿಳೆಯರು ಮತ್ತು ಗ್ರಾಮೀಣ ಕುಶಲಕರ್ಮಿ, ಗುಡಿ ಕೈಗಾರಿಕೆಗೆ ಪ್ರೋತ್ಸಾಹ ನೀಡಲು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಉಚಿತ ಹೊಲಿಗೆ ಯಂತ್ರ ಪಡೆಯುವುದಕ್ಕೆ ಅರ್ಜಿ ಸಲ್ಲಿಸುವುದಕ್ಕೆ ಸರ್ಕಾರ ಅರ್ಜಿ ಆಹ್ವಾನಿಸಿದೆ, ಹೊಲಿಗೆ ಯಂತ್ರ ಕೊಂಡುಕೊಳ್ಳಲು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವವರಿಗೆ ಇದು ಸರಿಯಾದ ಯೋಜನೆ ಆಗಿದೆ. ಮಹಿಳೆಯರು ಈ ಯೋಜನೆಯ ಸೌಲಭ್ಯ ಪಡೆಯಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು, ಬೇಕಾಗುವ ಅರ್ಹತೆಗಳನ್ನು ಪಡೆಯಬಹುದು.
ಮಹಿಳೆಯರು ಕರ್ನಾಟಕ ರಾಜ್ಯದವರೇ ಆಗಿರಬೇಕು. ಹಾಗೆಯೇ ಅಪ್ಲೈ ಮಾಡುವ ಮಹಿಳೆಯ ಕುಟುಂಬದ ವಾರ್ಷಿಕ ಆದಾಯ 12,000ಕ್ಕಿಂತ ಕಡಿಮೆ ಇರಬೇಕು. ಕೆಲಸ ಮಾಡಲು ಆಸಕ್ತಿ ಇರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು, ಇದಕ್ಕೆ ವಯೋಮಿತಿ ಇದ್ದು 20 ರಿಂದ 49 ವರ್ಷಗಳ ಒಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಹಾಗೆಯೇ ಮಹಿಳೆಯರಿಗೆ ಟೈಲರಿಂಗ್ ಬರಬೇಕು, ಈ ಎಲ್ಲಾ ಅರ್ಹತೆಗಳು ಇರುವ ಮಹಿಳೆಯರು ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಈ ಯೋಜನೆಗೆ ಮಹಿಳೆಯರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅದಕ್ಕೆ ಬೇಕಾಗಿರುವ ದಾಖಲೆಗಳು ಯಾವುವು ಎಂದು ನೋಡುವುದಾದರೆ, *ಕ್ಯಾಸ್ಟ್ ಸರ್ಟಿಫಿಕೇಟ್, ಇನ್ಕಮ್ ಸರ್ಟಿಫಿಕೇಟ್, ಪಾಸ್ ಪೋರ್ಟ್ ಸೈಜ್ ಫೋಟೋ, ಟೈಲರಿಂಗ್ ಮಾಡಿರುವ ಸರ್ಟಿಫಿಕೇಟ್, ರೇಷನ್ ಕಾರ್ಡ್, ಕುಶಲಕರ್ಮಿ ಐಡೆಂಟಿಟಿ ಕಾರ್ಡ್, ಅಂಗವಿಕಲಾರಗಿದ್ದರೆ ಅದಕ್ಕೆ ಸಂಬಂಧಿಸಿದ ಸರ್ಟಿಫಿಕೇಟ್, ಮೊಬೈಲ್ ನಂಬರ್. ಈ ಎಲ್ಲಾ ದಾಖಲೆಗಳು ಇದ್ದರೆ, ಉಚಿತವಾಗಿ ಅರ್ಜಿ ಸಲ್ಲಿಸಬಹುದು.
https://www.india.gov.in/ ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ನಿಮಗೆ ಈ ಯೋಜನೆಗೆ ಅರ್ಜಿ ಸಲ್ಲಿಸುವ ಫಾರ್ಮ್ ಸಿಗುತ್ತದೆ. ಇದನ್ನು ಭರ್ತಿ ಮಾಡಿ, ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು. ಪ್ರಸ್ತುತ ಚಿಕ್ಕಮಗಳೂರು, ಮೈಸೂರು, ಮಂಡ್ಯ, ತುಮಕೂರು ಜಿಲ್ಲೆಯ ಜನರು ಅರ್ಜಿ ಸಲ್ಲಿಸಬಹುದು.