Free Sewing Machine Scheme 2023: ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸಲು ಸರ್ಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಕಾಂಗ್ರೆಸ್ ಸರ್ಕಾರದಿಂದ ಗ್ರಹಲಕ್ಷ್ಮಿ ಯೋಜನೆಯ ಮೂಲಕ 2000 ರೂಪಾಯಿ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ತಲುಪಿಸುತ್ತಿದೆ. ಅದರಂತೆ ಹೊಲಿಗೆ ವೃತ್ತಿಯ ಬಗ್ಗೆ ಆಸಕ್ತಿ ಇರುವ ಮಹಿಳೆಯರಿಗೆ ಸರ್ಕಾರದಿಂದ ಉಚಿತವಾಗಿ ವಿದ್ಯುತ್ ಹೊಲಿಗೆ ಯಂತ್ರ ಸಿಗಲಿದೆ ಹೊಲಿಗೆ ಯಂತ್ರವನ್ನು ಪಡೆಯಲು ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಯಾವೆಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು ಷರತ್ತುಗಳೇನು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಉಚಿತವಾಗಿ ವಿದ್ಯುತ್ ಹೊಲಿಗೆ ಯಂತ್ರವನ್ನು ಕೊಡುತ್ತಿದ್ದಾರೆ ಕರೆಂಟ್ ಟೇಲರಿಂಗ್ ಮಷೀನ್ ಅನ್ನು ಉಚಿತವಾಗಿ ಮಹಿಳೆಯರಿಗೆ ಸರ್ಕಾರದಿಂದ ಕೊಡಲಾಗುತ್ತದೆ ಅದಕ್ಕಾಗಿ ಅರ್ಜಿ ಕರೆದಿದ್ದಾರೆ. ಉಚಿತ ವಿದ್ಯುತ್ ಹೊಲಿಗೆ ಯಂತ್ರ ಪಡೆಯಲು ಕೆಲವು ಷರತ್ತುಗಳಿವೆ ಅವುಗಳೆಂದರೆ ಅರ್ಜಿ ಸಲ್ಲಿಸುವವರು ಕಲ್ಬುರ್ಗಿ ಜಿಲ್ಲೆಯಲ್ಲಿ ವಾಸ ಮಾಡುತ್ತಿರಬೇಕು ಅಲ್ಲದೆ ಗ್ರಾಮೀಣ ಪ್ರದೇಶದ ಮಹಿಳಾ ಅಭ್ಯರ್ಥಿ ಆಗಿರಬೇಕು. ಅರ್ಜಿ ಸಲ್ಲಿಸುವವರ ವಯಸ್ಸು ಕನಿಷ್ಠ 21 ಗರಿಷ್ಠ 45 ವರ್ಷದೊಳಗಿರಬೇಕು. ಅರ್ಜಿ ಸಲ್ಲಿಸಲು ಕನಿಷ್ಠ 10ನೇ ತರಗತಿಯನ್ನು ಪಾಸ್ ಮಾಡಿರಬೇಕು. ಒಂದು ಕುಟುಂಬದಿಂದ ಒಬ್ಬರು ಮಾತ್ರ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರ ಮನೆಯಲ್ಲಿ ಇದಕ್ಕೂ ಮೊದಲು ಸರ್ಕಾರದ ಯೋಜನೆಯ ಮೂಲಕ ಹೊಲಿಗೆ ಯಂತ್ರವನ್ನು ಪಡೆದಿರಬಾರದು ಹಾಗೂ ಕುಟುಂಬದ ಯಾವ ಸದಸ್ಯರು ಸರ್ಕಾರಿ ಉದ್ಯೋಗದಲ್ಲಿ ಇರಬಾರದು.
ಉಚಿತ ವಿದ್ಯುತ್ ಹೊಲಿಗೆ ಯಂತ್ರ ಪಡೆಯಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಆನ್ಲೈನಲ್ಲಿ ಅಪ್ಲೋಡ್ ಮಾಡಲು ಕೆಲವು ದಾಖಲಾತಿಗಳು ಬೇಕಾಗುತ್ತದೆ ಅವುಗಳೆಂದರೆ ಹುಟ್ಟಿದ ದಿನಾಂಕ ಇರುವ ಒಂದು ದಾಖಲಾತಿ ಎಸ್ಎಸ್ಎಲ್ ಸಿ ಮಾರ್ಕ್ಸ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಹತ್ತಿರದ ಗ್ರಾಮ ಪಂಚಾಯತ್ ಅಧಿಕಾರಿಗಳಿಂದ ವೃತ್ತಿ ಪ್ರಮಾಣ ಪತ್ರ ಹೊಲಿಗೆ ಮಾಡುತ್ತಿರುವುದರ ಬಗ್ಗೆ ಒಂದು ಪ್ರಮಾಣ ಪತ್ರ ಬೇಕಾಗುತ್ತದೆ, ಪಾಸ್ ಪೋರ್ಟ್ ಸೈಜ್ ಫೋಟೊ ಬೇಕಾಗುತ್ತದೆ. ಹೊಲಿಗೆಯಂತ್ರ ಪಡೆಯಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೆ ಸೆಪ್ಟೆಂಬರ್ ತಿಂಗಳಿನ 30ನೇ ತಾರೀಖು.
Free Sewing Machine Scheme 2023
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾದರೆ https://www.india.gov.in/ ಎಂಬ ವೆಬ್ಸೈಟನಲ್ಲಿ ನೇರವಾಗಿ ಹೊಲಿಗೆ ಯಂತ್ರ ಪಡೆಯುವ ಲಿಂಕ್ ಕೊಡಲಾಗಿದೆ ಅದನ್ನು ಕ್ಲಿಕ್ ಮಾಡಿದಾಗ ವೆಬ್ಸೈಟ್ ಓಪನ್ ಆಗುತ್ತದೆ ಆ ಪೇಜ್ ನಲ್ಲಿ ಕೆಳಗಡೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಎಂದು ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿದಾಗ ಅರ್ಜಿಯ ಫಾರಂ ಓಪನ್ ಆಗುತ್ತದೆ ಮೇಲ್ಗಡೆ ಅಪ್ಲೋಡ್ ಮಾಡಬೇಕಾದ ಡಾಕ್ಯುಮೆಂಟ್ಸ್ ಗಳ ವಿವರ ಕಾಣಿಸುತ್ತದೆ ನಂತರ ನಮ್ಮ ಜಿಲ್ಲೆ ಹಾಗೂ ತಾಲೂಕನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು ಅರ್ಜಿ ಸಲ್ಲಿಸುತ್ತಿರುವ ಮಹಿಳೆಯ ಹೆಸರು ಮಹಿಳೆಯ ತಂದೆಯ ಹೆಸರು ಮದುವೆಯಾಗಿದ್ದರೆ ಗಂಡನ ಹೆಸರನ್ನು ಹಾಕಬೇಕು ಜಾತಿ ಕೆಟಗರಿ ಯಾವುದು ಎಂದು ಸೆಲೆಕ್ಟ್ ಮಾಡಬೇಕು
ನಂತರ ಇಮೇಲ್ ಐಡಿ, ಮೊಬೈಲ್ ನಂಬರ್ ಟೈಪ್ ಮಾಡಿ ರಾಜ್ಯ, ವಿಳಾಸ ಪಿನ್ ಕೋಡ್ ಎಜುಕೇಶನ್ ಮಾಹಿತಿ ಹಾಗೂ ಅಂಗವಿಕಲರಾಗಿದ್ದಲ್ಲಿ ಹೌದು ಎಂದು ಇಲ್ಲವೆಂದರೆ ಇಲ್ಲ ಎಂದು ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ಕೆಳಗೆ ಈ ಎಲ್ಲಾ ಮಾಹಿತಿಗಳಿಗೆ ನಾನು ಬದ್ಧನಾಗಿದ್ದೇನೆ ಎನ್ನುವುದಕ್ಕೆ ಒಪ್ಪಿದ್ದೇನೆ ಎಂದು ಅಗ್ರಿ ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕು. ನಂತರ ಕ್ಯಾಪ್ಚರ್ ಕೋಡ್ ಅನ್ನು ಸರಿಯಾಗಿ ಎಂಟ್ರಿ ಮಾಡಿ ಸಬ್ ಮಿಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ಸಬ್ ಮಿಟ್ ಆಗುತ್ತದೆ ಅಕನೊಲೇಜ್ ಮೆಂಟ್ ಕಾಫಿ ಸಿಗುತ್ತದೆ ಅದನ್ನು ಇಟ್ಟುಕೊಳ್ಳಬೇಕು. ಈ ಮಾಹಿತಿಯು ಉಪಯುಕ್ತವಾದ ಮಾಹಿತಿಯಾಗಿದ್ದು ತಪ್ಪದೆ ಎಲ್ಲರಿಗೂ ತಿಳಿಸಿ ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.