ಪಡಿತರ ಚೀಟಿ ಬಗ್ಗೆ ತಿಳಿಯದವರು ಯಾರು ಇಲ್ಲ ಎಲ್ಲಾ ಕಡೆ ಅದರ ಪ್ರಭಾವ ಹೆಚ್ಚಾಗಿಯೇ ಇದೆ. ಯಾಕೆಂದರೆ ಈವಾಗ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಎಲ್ಲಾ 5 ಯೋಜನೆಗಳ ಲಾಭ ಪಡೆಯಬೇಕು ಎಂದರೆ ಪಡಿತರ ಚೀಟಿ ಹೊಂದಿರುವುದು ಕಡ್ಡಾಯ. ಉಚಿತ ರೇಷನ್ ಇನ್ನು ಮುಂದೆ ಯಾರಿಗೆಲ್ಲ ಲಭ್ಯವಿಲ್ಲ ಎಂದು ಮೊದಲು ತಿಳಿಯೋಣ.
ಮೊದಲಿಗೆ ಮನೆಯ ಗೃಹಲಕ್ಷ್ಮಿಗೆ ಹಣ ಪಡೆಯುವ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯಲ್ಲಿ ದೊರಕುವ ಹಣ ನಮ್ಮ ಖಾತೆಗೆ ವರ್ಗಾವಣೆಯಾಗಬೇಕು ಎಂದರೆ ಪಡಿತರ ಚೀಟಿಯನ್ನು ಹೊಂದವುದು ಬಹಳ ಮುಖ್ಯವಾಗುತ್ತದೆ. ಬಿ.ಪಿ.ಎಲ್. ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಇದ್ದವರಿಗೆ ಉಚಿತ ರೇಷನ್ ಹಾಗೂ ಸರ್ಕಾರ ಬಿಡುಗಡೆ ಮಾಡಿರುವ ಉಚಿತ ಯೋಜನೆಗಳ ಲಾಭಗಳು ದೊರಕುತ್ತದೆ.
ಇನ್ನು ಎ.ಪಿ.ಎಲ್. ಕಾರ್ಡ್ ವಿಷಯಕ್ಕೆ ಬಂದರೆ ಬಡತನ ರೇಖೆಗಿಂತ ಮೇಲೆ ಇರುವವರಿಗೆ ಈ ಕಾರ್ಡನ್ನು ಮಾತ್ರ ವಿತರಣೆ ಮಾಡಲಾಗುತ್ತದೆ. ಗುರುತಿನ ಚೀಟಿಯಂತೆ ಎ.ಪಿ.ಎಲ್. ಕಾರ್ಡನ್ನು ಕೂಡ ಬಳಕೆ ಮಾಡಲಾಗುತ್ತದೆ. ಸರ್ಕಾರ ರಚಿಸಿರುವ ಹೊಸ ನಿಯಮದ ಪ್ರಕಾರ ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಕುಟುಂಬಗಳು ಮಾತ್ರ ಇನ್ನು ಮುಂದೆ ಸರ್ಕಾರ ನೀಡುವ ಉಚಿತ ಯೋಜನೆಯ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಸಾಧ್ಯ ಎಂದು ಉಲ್ಲೇಖ ಮಾಡಲಾಗಿದೆ.
ಬಡತನ ರೇಖೆಗಿಂತ ಕೆಳಗೆ ಇರುವ ಜನರು ಮಾತ್ರ ಉಚಿತ ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ, ರೇಷನ್ ಕಾರ್ಡ್ ವಿತರಣೆಯನ್ನು ಮಾಡಲಾಗುವುದು. ಆದರೆ ಸಾಕಷ್ಟು ಬಡತನದ ರೇಖೆಗಿಂತ ಮೇಲೆ ಇರುವ ಜನರು ಸರ್ಕಾರದ ಮಾನದಂಡಗಳನ್ನು ಗಣನೆಗೆ ತೆಗೆದುಕೊಳ್ಳದೆ ಬಿ.ಪಿ.ಎಲ್. ಮತ್ತು ಅಂತ್ಯೋದಯ ಕಾರ್ಡ್ ಪಡೆದುಕೊಂಡಿರುವುದು ಸರ್ಕಾರದ ಗಮನಕ್ಕೆ ಕಂಡು ಬಂದಿದೆ.
ಸರ್ಕಾರಕ್ಕೆ ಜನರಿಂದ ಮೇಲಿಂದ ಮೇಲೆ ಬಿ.ಪಿ.ಎಲ್. ಹೊಸ ಕಾರ್ಡ್’ಗಳನ್ನು ವಿತರಣೆ ಮಾಡಲು ಒತ್ತಡ ಹೇರಲಾಗಿದ್ದು. ಸುಮಾರು ವರ್ಷಗಳಿಂದ ಯಾರು ಅಕ್ರಮವಾಗಿ ಬಿ.ಪಿ.ಎಲ್. ಕಾರ್ಡ್ ಹೊಂದಿರುತ್ತಾರೋ ಅಂತ ಜನರನ್ನು ಮೊದಲು ಹುಡುಕಿ ಅವರು ಪಡೆದಿರುವ ಕಾರ್ಡ್ ರದ್ದುಪಡಿಸಲು ಮತ್ತು ಅವರಿಗೆ ದಂಡ ವಿಧಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಆಹಾರ ಇಲಾಖೆ ಕೊಟ್ಟಿರುವ ಮಾಹಿತಿಯನ್ನು ಪರಿಗಣಿಸಿ. 2024ರ ಹೊಸ ವರ್ಷದಲ್ಲಿ ಅಂದರೆ ಜನವರಿಯಲ್ಲಿ ಹೊಸದಾಗಿ ವಿತರಣೆಯಾಗುವ ಪಡಿತರ ಯಾವುದೇ ವಸ್ತುಗಳು ನಿಮಗೆ ದೊರೆತಿಲ್ಲ ಅಥವ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಹಣದ ಮುಂದಿನ ಕಂತು ನಿಮ್ಮ ಖಾತೆಗೆ ಜಮೆಯಾಗಿಲ್ಲಾ ಎಂದರೆ ನಿಮ್ಮ ರೇಷನ್ ಕಾರ್ಡ್ ಇನ್ನು ಪ್ರಯೋಜನಕ್ಕೆ ಬರುವುದಿಲ್ಲ ಸರ್ಕಾರ ಅದನ್ನು ರದ್ದು ಮಾಡಿದೆ ಎಂದು ತಿಳಿದುಕೊಳ್ಳಬೇಕು.
ಪಡಿತರ ಚೀಟಿಯನ್ನು ರದ್ದುಪಡಿಸುವ ಬಗ್ಗೆ ಸರ್ಕಾರದ ವೆಬ್ಸೈಟ್’ನಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ. ನೀವು ನಿಮ್ಮ ಪಡಿತರ ಚೀಟಿಯ ವಿವರ ಎಂದರೆ ರೇಷನ್ ರದ್ದಾಗಿದೆಯೋ ಇಲ್ಲವೋ ಎಂಬುದನ್ನು ನೀವು ಆನ್ಲೈನ್ ಮೂಲಕವೆ ಪರೀಕ್ಷೆ ಮಾಡಿಕೊಳ್ಳಬಹುದು ಆದರೆ ಅದನ್ನು ಹೇಗೆ ಮಾಡುವುದು ಎಂದು ತಿಳಿಯಲು. ಪಡಿತರ ಚೀಟಿಯ ಬಗ್ಗೆ ಆನ್ಲೈನ್’ನಲ್ಲಿ ಪರೀಕ್ಷೆ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://ahara.kar.nic.in/Home/EServices ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಅದರ ಹೋಂ ಪೇಜ್ ಪುಟದ ಮೇಲ್ಭಾಗದಲ್ಲಿ 3 ಲೈನ್ ಕಾಣಿಸುತ್ತದೆ. ಅದರ ಮೇಲೆ ನೀವು ಕ್ಲಿಕ್ ಮಾಡಿದರೆ ಎಡಭಾಗದಲ್ಲಿ ‘ ಈ ಸ್ಥಿತಿ ‘ ಎಂದು ಕಾಣಿಸುತ್ತದೆ.
ಮುಂದೆ ಅಲ್ಲಿ ರದ್ದುಪಡಿಸಿರುವ ಅಥವ ತಡೆಹಿಡಿಯಲಾಗಿರುವ ಪಡಿತರ ಚೀಟಿ ಎನ್ನುವ ಆಯ್ಕೆಯನ್ನು ಕಾಣಬಹುದು ಅದರ ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ ಒಂದು ಫಾರ್ಮ್ ಸಿಗುತ್ತದೆ. ಅಲ್ಲಿ ಕೇಳಿರುವ ನಿಮ್ಮ ಪ್ರಸ್ತುತ ಜಿಲ್ಲೆ, ತಾಲೂಕು, ಹೋಬಳಿ ಇನ್ನು ಇತ್ತರೆ ಮಾಹಿತಿಯನ್ನು ಪೂರ್ತಿಯಾಗಿ ಭರ್ತಿ ಮಾಡಬೇಕು.
ಮುಂದಿನ ಅಂತ ಸರ್ಕಾರದ ಕಡೆಯಿಂದ ರದ್ದಾಗಿರುವ ರೇಷನ್ ಕಾರ್ಡ್ ಪಟ್ಟಿಯನ್ನು ನೋಡಬಹುದು. ಇದರಲ್ಲಿ ರೇಷನ್ ಕಾರ್ಡ್ ಇರುವ ಕುಟುಂಬದ ಯಜಮಾನಿಯ ಹೆಸರು ಹಾಗೂ ಅದನ್ನು ರದ್ದು ಮಾಡಲು ಕಾರಣವನ್ನು ಕೂಡ ತಿಳಿಸಿರುತ್ತಾರೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಕಂಡು ಬಂದರೆ ಇನ್ನು ಮುಂದೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಯಾವುದೇ ಸೌಲಭ್ಯ ಪಡೆದುಕೊಳ್ಳಲು ಸಾದ್ಯವಿಲ್ಲ ಎಂದು ಅರ್ಥವಾಗುತ್ತದೆ. ಇಂತಹ ಕೆಲಸದಿಂದ ಬಡವರು ಸೌಕರ್ಯದಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಇಂತವರನ್ನು ಗುರುತಿಸಿ ರೇಷನ್ ಕಾರ್ಡ್ ರದ್ದು ಮಾಡು ಒಳ್ಳೆ ಕಾರ್ಯ ಮಾಡುತ್ತಿದೆ.