ಕೇಂದ್ರ ಸಕಾರದ ಮಹತ್ವದ ಯೋಜನೆಯಲ್ಲಿ ಈ ಉಚಿತ ಗ್ಯಾಸ್ ಸಿಲೆಂಡರ್ ಪಡೆಯುವ ಯೋಜನೆ ಕೂಡ ಒಂದಾಗಿದೆ. ಭಾರತದಲ್ಲಿ ಈಗಾಗಲೇ ಬಹುತೇಕ ಜನರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ನೀವು ಕೂಡ ಮತ್ತೊಮ್ಮೆ ಈ ಯೋಜನೆಯ ಸೌಲಭ್ಯ ಪಡೆಯಲು ಇಚ್ಚಿಸುವುದಾದರೆ. ಆನ್ಲೈನ್ ಮೂಲಕ ಅರ್ಜಿಸಲ್ಲಿಸಬೇಕಾಗುತ್ತದೆ.
ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ, ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲ್ಲಿ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು 2016 ರಲ್ಲಿ ಗ್ರಾಮೀಣ ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಪ್ರಾರಂಭಿಸಲಾಯಿತು. ಈ ಯೋಜನೆಯಡಿ, ಮೊದಲ ಹಂತದಲ್ಲಿ ಬಡತನ ರೇಖೆಗಿಂತ ಕೆಳಗಿನ ಐದು ಕೋಟಿ ಮಹಿಳಾ ಸದಸ್ಯರಿಗೆ ಉಚಿತ ಎಲ್ಪಿಜಿ ಸಂಪರ್ಕವನ್ನು ಒದಗಿಸಲಾಗಿದೆ. ಈಗ ಈ ಯೋಜನೆಯನ್ನು ಮತ್ತೆ ನವೀಕರಿಸಲಾಗಿದೆ, ಈ ಯೋಜನೆಯನ್ನು ಯಾರೆಲ್ಲ ಪಡೆಯಬಹುದು ಇದಕ್ಕೆ ಬೇಕಾಗವ ದಾಖಲೆಗಳೇನು ಎಲ್ಲಿ ಅರ್ಜಿ ಸಲ್ಲಿಸಬೇಕು? ಈ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿದೆ ನೋಡಿ
ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0:
ಕೆಲವು ವರ್ಷಗಳ ಹಿಂದೆ, ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಹಿಳೆಯರು ಅಡುಗೆ ಮಾಡಲು ಸೌದೆ ಒಲೆ ಬಳಸುತ್ತಿದ್ದರು. ನಿರಂತರ ಉರುವಲು ಬಳಕೆಯಿಂದ ಉತ್ಪತ್ತಿಯಾಗುವ ಹೊಗೆ ಆರೋಗ್ಯಕ್ಕೆ ಹಾನಿಕರವಾಗಿರುವುದರಿಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ನೀಡುವ ಯೋಜನೆ ಜಾರಿಗೊಳಿಸಲಾಗಿದೆ. ಬಡತನ ರೇಖೆಗಿಂತ ಕೆಳಗಿರುವ ಲಕ್ಷಾಂತರ ಮಹಿಳೆಯರು ಈ ಯೋಜನೆಯ ಲಾಭ ಪಡೆದಿದ್ದಾರೆ. ಈಗ ಮತ್ತೆ ಯೋಜನೆಯ ಸೌಲಭ್ಯವನ್ನು ವಿಸ್ತರಿಸಲಾಗುತ್ತಿದೆ.
ಈ ಯೋಜನೆಯನ್ನು ಯಾರೆಲ್ಲ ಪಡೆಯಬಹುದು?
ಅಭ್ಯರ್ಥಿಗಳು ಭಾರತದ ಪ್ರಜೆಗಳಾಗಿರಬೇಕು.
ಅಭ್ಯರ್ಥಿಗಳು ಯಾವುದೇ ಇತರ LPG ಸಂಪರ್ಕವನ್ನು ಹೊಂದಿರಬಾರದು.
18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು BPL ಕಾರ್ಡ್ ಹೊಂದಿರಬೇಕು ಅಥವಾ ಅವರ ಹೆಸರನ್ನು ಅಂತ್ಯೋದಯ ಅನ್ನ ಯೋಜನೆ (AAY) ನಲ್ಲಿ ಪಟ್ಟಿ ಮಾಡಿರಬೇಕು.
ಕೆಳಗಿನ ವರ್ಗಗಳ ಮಹಿಳೆಯರು ಭಾಗವಹಿಸಲು ಅರ್ಹರಾಗಿದ್ದಾರೆ:
ಪರಿಶಿಷ್ಟ ಜಾತಿ/ಪಂಗಡ
ಆರ್ಥಿಕವಾಗಿ ಹಿಂದುಳಿದ ವರ್ಗ (EBC)
ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಫಲಾನುಭವಿಗಳು.ಅಗತ್ಯವಿರುವ
ಬೇಕಾಗುವ ದಾಖಲೆಗಳು:
ಆಧಾರ್ ಕಾರ್ಡ್
ದಿನಸಿ ಕಾರ್ಡ್
ಬಿಪಿಎಲ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ಮೊಬೈಲ್ ಫೋನ್ ಸಂಖ್ಯೆ
ನಿವಾಸವನ್ನು ದೃಢೀಕರಿಸುವ ಪತ್ರ
ಪಾಸ್ಪೋರ್ಟ್ ಫೋಟೋ.
ಅರ್ಜಿಯನ್ನು ನಿಮ್ಮ ಅತ್ತಿರದ ಆನ್ಲೈನ್ ಸೆಂಟರ್ ಅಥವಾ ಗ್ಯಾಸ್ ಏಜನ್ಸಿಯಲ್ಲಿ ಸಲ್ಲಿಸಬಹುದಾಗಿದೆ.