Free Gas Cylinder Scheme Withouts ration card: ನಿಮ್ಮ ಹತ್ತಿರ ಬಿಪಿಎಲ್ ಕಾರ್ಡ್ ಇದ್ದು, ಇನ್ನು ನಿಮ್ಮ ಹತ್ತಿರ ಗ್ಯಾಸ್ ಸಿಲಿಂಡರ್ ಇಲ್ಲ ಎಂದರೆ, ಉಚಿತವಾಗಿ ಗ್ಯಾಸ್ ಸಿಲಿಂಡರ್ ಪಡೆಯುವುದಕ್ಕೆ ಸರ್ಕಾರದಿಂದ ನಿಮಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಇದೀಗ ಸರ್ಕಾರ ನೀಡಿರುವ ಈ ಅವಕಾಶದಿಂದ ನೀವು ಗ್ಯಾಸ್ ಸಿಲಿಂಡರ್ ಗಾಗಿ ಅರ್ಜಿ ಸಲ್ಲಿಸಿ ಸುಲಭವಾಗಿ ಗ್ಯಾಸ್ ಸಿಲಿಂಡರ್ ಪಡೆಯಬಹುದು. ಆನ್ಲೈನ್ ಮೂಲಕ ಗ್ಯಾಸ್ ಸಿಲಿಂಡರ್ ಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಸರ್ಕಾರವೇ ನೀಡಿದೆ.

ನೀವು ಅರ್ಜಿ ಸಲ್ಲಿಸಿ, ಗ್ಯಾಸ್ ಸಿಲಿಂಡರ್ ಪಡೆಯುವುದು ಪ್ರಧಾನಮಂತ್ರಿ ಅವಾಸ್ ಯೋಜನೆಯ ಮೂಲಕ. ಮಹಿಳೆಯರಿಗೆ ಈ ಯೋಜನೆಯ ಸಹಾಯ ಸಿಗಲಿದ್ದು, ಒಲೆಯಲ್ಲಿ ಅಡುಗೆ ಮಾಡುವಾಗ ಹೊಗೆ, ಧೂಳು ಮತ್ತು ಇನ್ನಿತರ ಕಾರಣಕ್ಕೆ ಮಹಿಳೆಯರಿಗೆ ಅನಾರೋಗ್ಯ ಕೂಡ ಉಂಟಾಗುತ್ತಿತ್ತು, ಆದರೆ ಪಿಎಮ್ ಅವರ ಈ ಹೊಸ ಯೋಜನೆಯ ಕಾರಣ ಇನ್ನುಮುಂದೆ ಯಾರಿಗೆ ಉಜ್ವಲ ಯೋಜನೆಯ ಫಲದಿಂದ ಯಾರು ಕೂಡ ತೊಂದರೆ ಅನುಭವಿಸುವ ಅವಶ್ಯಕತೆ ಇಲ್ಲ. ಇದು ಎಲ್ಲಾ ಮಹಿಳೆಯರಿಗೆ ಸಹಾಯ ಆಗುತ್ತಿರುವ ಯೋಜನೆ ಆಗಿದೆ.

ಮಹಿಳೆಯರಿಗಾಗಿ ಬಂದಿರುವ ಈ ಯೋಜನೆಗೆ ಈಗಾಗಲೇ 10.30 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿ, ಉಚಿತ ಗ್ಯಾಸ್ ಸಂಪರ್ಕ ಪಡೆದಿದ್ದಾರೆ. ಹಾಗೆಯೇ ಈ ವರ್ಷ ಇನ್ನು 75 ಲಕ್ಷ ಜನರು ಅರ್ಜಿ ಸಲ್ಲಿಸಿದ್ದು, ಅವರಿಗು ಗ್ಯಾಸ್ ಸಂಪರ್ಕ ಸಿಕ್ಕಿದೆ. ಬಹಳಷ್ಟು ಜನರು ಈ ಯೋಜನೆಯ ಅನುಕೂಲ ಪಡೆದುಕೊಂಡಿದ್ದಾರೆ. ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿ ಉಚಿತ ಗ್ಯಾಸ್ ಸಿಲಿಂಡರ್ ಸಂಪರ್ಕ ಪಡೆಯಲು ಮಹಿಳೆಯರು ಕಡ್ಡಾಯವಾಗಿ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಎರಡನ್ನು ಕೊಡಬೇಕಿತ್ತು.

ಆದರೆ ಇನ್ನುಮುಂದೆ ಅದರ ಅವಶ್ಯಕತೆ ಇಲ್ಲ ಎಂದು ಮಾಹಿತಿ ಸಿಕ್ಕಿದ್ದು, ಇದು ಜನರಿಗೆ ಸಂತೋಷದ ಸುದ್ದಿ ಆಗಿದೆ. ಇನ್ನುಮುಂದೆ ರೇಷನ್ ಕಾರ್ಡ್ ಇಲ್ಲದೆ ಇದ್ದರು ಕೂಡ, ಆಧಾರ್ ಕಾರ್ಡ್ ಮಾತ್ರ ಕೊಟ್ಟು ಉಜ್ವಲ ಯೋಜನೆಯಲ್ಲಿ ಉಚಿತ ಗ್ಯಾಸ್ ಸೈಲಿಂಡರ್ ಪಡೆಯಬಹುದು. ಆಧಾರ್ ಕಾರ್ಡ್, ವಾಸಸ್ಥಳ ದೃಢೀಕರಣ ಪತ್ರ, ಸ್ವಯಂ ಘೋಷಣೆ ಪತ್ರ, ಇದಿಷ್ಟು ಬೇಕಾಗುತ್ತದೆ. 14 ಅಂಶಗಳ ಸ್ವಯಂ ಘೋಷಣೆ ಪತ್ರವನ್ನು ಫಿಲ್ ಮಾಡಿ, ಗ್ಯಾಸ್ ಸಂಪರ್ಕ ಪಡೆಯುವ ಏಜೆನ್ಸಿಗೆ ಸಲ್ಲಿಸಬೇಕು.

ಗ್ಯಾಸ್ ಏಜೆನ್ಸಿಯ ಸಿಬ್ಬಂದಿಗಳು ಅರ್ಜಿಯನ್ನು ಪರಿಶೀಲಿಸಿ, ಅರ್ಜಿ ಹಾಕಿರುವವರನ್ನು ಭೇಟಿ ಮಾಡಿ, ಸ್ವಯಂ ಘೋಷಣೆಯನ್ನು ಪರಿಶೀಲಿಸಿ, ಬಳಿಕ ಗ್ಯಾಸ್ ಏಜೆನ್ಸಿಗೆ ಮಾಹಿತಿ ನೀಡುತ್ತಾರೆ. ಗ್ಯಾಸ್ ಏಜೆನ್ಸಿ ಪರಿಶೀಲಿಸಿದ ಬಳಿಕ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಸಂಪರ್ಕ ಸಿಗುತ್ತದೆ. ಈ ರೀತಿಯಾಗಿ ನೀವು ಕೂಡ ಪ್ರಧಾನಮಂತ್ರಿ ಉಜ್ವಲಾ ಯೋಜನೆಯ ಮೂಲಕ ನೀವು ಉಚಿತವಾಗಿ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!