Forest Jobs Recruitment 2023: ಪಿಯುಸಿ ಪಾಸ್ ಆಗಿರುವವರು ಸರ್ಕಾರಿ ಕೆಲಸ ಬೇಕು ಎಂದು ಪ್ರಯತ್ನ ಪಡುತ್ತಿದ್ದರೆ ನಿಮಗಾಗಿ ಒಂದು ಸದಾವಕಾಶ ಕಾಯುತ್ತಿದೆ. ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಆದೇಶ ನೀಡಲಾಗಿದೆ. ಸುಮಾರು 540ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲಾಗುತ್ತದೆ. ಒಂದು ವೇಳೆ ನಿಮಗೆ ಆಸಕ್ತಿ ಇದ್ದರೆ, ಹುದ್ದೆಗೆ ಅಪ್ಲೈ ಮಾಡುವ ಬಗ್ಗೆ ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ.
ಈ ಹುದ್ದೆಯ ಬಗ್ಗೆ ಪೂರ್ತಿ ಮಾಹಿತಿ ನೀಡುವುದಾದರೆ.. ಕರ್ನಾಟಕ ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ, 540 ಫಾರೆಸ್ಟ್ ಗಾರ್ಡ್ ಹುದ್ದೆಗಳು ಖಾಲಿ ಇದ್ದು. ಇದಕ್ಕೆ ಅರ್ಹತೆಗಳನ್ನು ನೀಡಲಾಗಿದೆ. ನಿಮಗೆ ಆಸಕ್ತಿ ಮತ್ತು ಅರ್ಹತೆ ಇದ್ದರೆ, ನೀವು ಈ ಕೆಲಸಕ್ಕೆ ಅಪ್ಲೈ ಮಾಡಬಹುದು. ಈ ಕೆಲಸಕ್ಕೆ ಅಗತ್ಯ ಇರುವ ವಿದ್ಯಾರ್ಹತೆ ನೋಡುವುದಾದರೆ, ಸರ್ಕಾರದ ಮಾನ್ಯತೆ ಪಡೆದಿರುವ ಸಂಸ್ಥೆ ಅಥವಾ ಕಾಲೇಜಿನಿಂದ ಪಿಯುಸಿ ತೇರ್ಗಡೆ ಹೊಂದಿರಬೇಕು.
ಈ ಕೆಲಸಕ್ಕೆ ಅಗತ್ಯವಿರುವ ವಯೋಮಿತಿಯ ಬಗ್ಗೆ ಹೇಳುವುದಾದರೆ. ಅಭ್ಯರ್ಥಿಗಳಿಗೆ 2023ರ ಡಿಸೆಂಬರ್ 30ನೇ ತಾರೀಕಿಗೆ 18 ವರ್ಷ ತುಂಬಿರಬೇಕು, 35 ವರ್ಷ ಮೀರಿರಬಾರದು ಎಂದು ತಿಳಿಸಲಾಗಿದೆ. ಆದರೆ ವಯೋಮಿತಿ ಸಡಿಲಿಕೆ ಇದ್ದು, ಓಬಿಸಿ ಅಭ್ಯರ್ಥಿಗಳಿಗೆ 2 ವರ್ಷ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ..
ಕೆಲಸಕ್ಕೆ ಅಪ್ಲೈ ಮಾಡಿದ ನಂತರ ನೀವು ಅರ್ಜಿ ಶುಲ್ಕ ಪಾವತಿ ಮಾಡಬೇಕಿದ್ದು, ಎಸ್ಸಿ ಎಸ್ಟಿ ಮತ್ತು ಪ್ರವರ್ಗ 1 ಅಭ್ಯರ್ಥಿಗಳು 100 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 200 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ. ಈ ಕೆಲಸಕ್ಕೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ₹18,600 ಇಂದ ₹32,600 ರೂಪಾಯಿಯವರೆಗು ಅರ್ಜಿ ಶುಲ್ಕ ಇರುತ್ತದೆ.
ಈ ಕೆಲಸದ ಆಯ್ಕೆ ಪ್ರಕ್ರಿಯೆ ಬಗ್ಗೆ ಹೇಳುವುದಾದರೆ, ಲಿಖಿತ ಪರೀಕ್ಷೆ, ಇಂಟರ್ವ್ಯೂ ಮತ್ತು ಮೆಡಿಕಲ್ ಫಿಟ್ನೆಸ್ ಮೇಲೆ ಆಯ್ಕೆ ಮಾಡಲಾಗುತ್ತದೆ. https://kfdrecruitment.in/ ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2023ರ ಡಿಸೆಂಬರ್ 30, ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ 2024ರ ಜನವರಿ 5. ಆಸಕ್ತಿ ಇರುವವರು ಇಂದೇ ಅರ್ಜಿ ಸಲ್ಲಿಸಿ.