Pet dog: ವಿಶ್ವದಲ್ಲಿ ಅತಿಹೆಚ್ಚು ಜನರು ಪ್ರೀತಿ ಮಾಡುವ ಸಾಕು ಪ್ರಾಣಿ ನಾಯಿಗಳು (Pet dog) ಎಂದರೆ ತಪ್ಪಲ್ಲ. ನಗರ ಪ್ರದೇಶಗಳಲ್ಲಿ ಬಹಳಷ್ಟು ಜನರು ನಾಯಿ ಸಾಕಿರುತ್ತಾರೆ. ಹಲವು ಬ್ರೀಡ್ ನಾಯಿಗಳಿದ್ದು, ಅವುಗಳನ್ನು ಸಾಕಿ, ತಮ್ಮ ಮಕ್ಕಳ ಹಾಗೆಯೇ ನೋಡಿಕೊಳ್ಳುತ್ತಾರೆ. ಪ್ರೀತಿ ಮಾಡುತ್ತಾರೆ. ಶ್ವಾನ ಪ್ರಿಯರಿಗೆ ಅವುಗಳನ್ನು ನೋಡಿದರೆ ಎಲ್ಲಿಲ್ಲದ ಪ್ರೀತಿ ಎಂದರೆ ತಪ್ಪಲ್ಲ. ಹಾಗೆಯೇ ನಮ್ಮ ದೇಶದಲ್ಲಿ ಬೀದಿ ನಾಯಿಗಳ ಸಂಖ್ಯೆ ಕೂಡ ಕಡಿಮೆ ಇಲ್ಲ.
ಭಾರತದಲ್ಲಿ ಹೆಚ್ಚು ಹೆಚ್ಚು ಬೀದಿ ನಾಯಿಗಳಿವೆ, ಅವುಗಳಿಗೆ ಚುಚ್ಚುಮದ್ದು ಹಾಕಿಸುವ ಕೆಲಸಗಳನ್ನು ಸರ್ಕಾರ ಮಾಡುತ್ತಲೇ ಇರುತ್ತದೆ. ಏಕೆಂದರೆ ಬೀದಿ ನಾಯಿ ಕಡಿತದಿಂದ ಜನರಿಗೆ ತೊಂದರೆ ಆಗಿರುವ ಸಾಕಷ್ಟು ಘಟನೆಗಳು ನಡೆದಿವೆ. ಈಗಲೂ ಸಹ ಬೀದಿ ನಾಯಿ ಕಡಿತದಿಂದ ಅನಾರೋಗ್ಯಕ್ಕೆ ಒಳಗಾಗಿರುವ, ಕೆಲವರಿಗೆ ರೇಬಿಸ್ ಬಂದಿರುವ ಪ್ರಕರಣ ಕೂಡ ಆಸ್ಪತ್ರೆಗಳಲ್ಲಿ ದಾಖಲಾಗಿದೆ. ಇದರಿಂದ ಸರ್ಕಾರವು ಎಲ್ಲಾ ಬೀದಿ ನಾಯಿಗಳಿಗೆ ಚುಚ್ಚುಮದ್ದು ಹಾಕಿಸುವ ಕೆಲಸ ಮಾಡುತ್ತಿದೆ..
ಅಷ್ಟೇ ಅಲ್ಲ, ಮನೆಗಳಲ್ಲಿ ಸಾಕುವ ನಾಯಿಗಳಿಗೆ ಕೂಡ ಚುಚ್ಚುಮದ್ದು ಹಾಕಿಸುವುದನ್ನು ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಸಾಕಿದ ನಾಯಿ ಯಾರಿಗಾದರು ಕಚ್ಚಿ ಸಮಸ್ಯೆ ಉಂಟಾದರೆ, ರೇಬಿಸ್ ಬಂದರೆ ಆ ನಾಯಿಯ ಓನರ್ ಗೆ ದಂಡ ಹಾಕಲಾಗುತ್ತದೆ. ಸರ್ಕಾರ ಇದಕ್ಕಾಗಿ ದಂಡವನ್ನು ಕೂಡ ನಿಗದಿ ಮಾಡಿದೆ.. ಪಂಜಾಬ್ ಮತ್ತು ಹರಿಯಾಣ ಕೋರ್ಟ್ ಈ ವಿಚಾರವಾಗಿ ತೀರ್ಪು ನೀಡಿದ್ದು, ಸಾಕು ನಾಯಿ ಕಚ್ಚಿದರೆ, ಅದರ ಓನರ್ ಗೆ 10,000 ದಂಡ ವಿಧಿಸಲಾಗುತ್ತದೆ.
ನಾಯಿ ಕಚ್ಚಿ ಹಲ್ಲಿನ ಗುರುತು ವ್ಯಕ್ತಿಯ ದೇಹದಲ್ಲಿ ಕಂಡುಬಂದರೆ 10,000 ದಂಡ, 0.2 ಸೆಂಟಿಮೀಟರ್ ಮಾಂಸ ಹರಿದು, ಗಾಯ ಆದರೆ 20,000 ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಇದು ಹೈಕೋರ್ಟ್ ಇಂದ ಬಂದಿರುವ ಹೊಸ ತೀರ್ಪು ಆಗಿದ್ದು, ನಾಯಿಗಳನ್ನು ಸಾಕುತ್ತಿರುವ ಎಲ್ಲರೂ ಕೂಡ ಹುಷಾರಾಗಿರಬೇಕು, ಚುಚ್ಚುಮದ್ದು ಹಾಕಿಸಿ ಹುಷಾರಾಗಿ ನೋಡಿಕೊಳ್ಳಬೇಕು. ಹಾಗೆಯೇ ನಾಯಿ ಕಚ್ಚಿದರೆ ಸೂಕ್ತ ದಾಖಲೆಗಳ ಜೊತೆಗೆ ಜನರು ಬಂದು ದೂರು ನೀಡಬಹುದು.