ಹೊಲ ಅಥವಾ ಜಾಮೀನು ಸೈಟ್ ಜಾಗಕ್ಕೆ ಮುಳ್ಳು ತಂತಿ ಹಾಕಿಸಲು ಬಹಳಷ್ಟು ಜನ ಇಷ್ಟ ಪಡುತ್ತಾರೆ, ಯಾಕೆಂದರೆ ಜಾಗ ಯಾವುದೇ ಕಾರಣಕ್ಕೂ ಒತ್ತುವರಿ ಆಗಲು ಬಿಡೋದಿಲ್ಲ, ಅಷ್ಟೇ ಅಲ್ಲ ಜಮೀನು ಸುರಕ್ಷತೆಯಿಂದ ಇರುತ್ತೆ ಯಾವುದೇ ಸಮಸ್ಯೆ ಇರೋದಿಲ್ಲ. ಧನ ಕರಗಳ ಕಾಟದಿಂದ ಮುಕ್ತಿ ಇರುತ್ತೆ ಇನ್ನೂ ಜಮೀನಿನಲ್ಲಿ ಹಾಕಿರುವ ಬೆಳೆಗಳನ್ನು ಸಂರಕ್ಷಣೆ ಮಾಡುತ್ತೆ.
ಹಾಗಾದ್ರೆ ಒಂದು ಎಕರೆ ಜಮೀನಿಗೆ ಎಷ್ಟು ಹಣ ಖರ್ಚಾಗಬಹುದು ಅನ್ನೋದನ್ನ ಪ್ರಸ್ತುತ ಮಾಹಿತಿ ಮೂಲಕ ತಿಳಿಯೋಣ ಬನ್ನಿ
ಒಂದು ಎಕರೆಗೆ ಕಲ್ಲು ಕಂಬಗಳು 130 ರಿಂದ 150 ಬೇಕಾಗುತ್ತೆ,
ಕಲ್ಲು ಕಂಬ, ಸಿಮೆಂಟ್ ಕಂಬ ಮುಂತಾದವುಗಳನ್ನು ಜಮೀನಿಗೆ ಬಳಸುತ್ತಾರೆ.
ಅವರ ಅನುಕೂಲ ತಕ್ಕಂತೆ ಕಂಬಗಳನ್ನು ಬಳಸಬಹುದು.
ಹಳ್ಳಿಗಳಲ್ಲಿ ಬಹಳಷ್ಟು ಜನ ಕಲ್ಲಿನ ಕಂಬಗಳನ್ನು ಬಳಸುತ್ತಾರೆ ಕಾರಣ ಇದು ಲೈಫ್ ಇರತ್ತೆ 100 ವರ್ಷಗಳವರೆಗೆ ಬಾಳಿಕೆ ಬರುತ್ತೆ ಅನ್ನೋ ಕಾರಣಕ್ಕೆ ಜಾಸ್ತಿ ಕಲ್ಲಿನ ಕಂಬ ಬಳಸುತ್ತಾರೆ
ಒಂದು ಕಲ್ಲು ಕಂಬದ ಬೆಲೆ ಅಳತೆಗೆ ತಕ್ಕಂತೆ ಅಂದರೆ 6ವರೇ ಅಡಿ ಕಂಬ 7ಅಡಿ ಕಂಬ 8ಅಡಿ ಕಂಬ ಹೀಗೆ ಅದರದ್ದೇ ಆದ ಬೆಲೆ ನಿಗದಿ ಮಾಡಿರುತ್ತಾರೆ 7 ಅಡಿ ಕಲ್ಲು ಕಂಬಕ್ಕೆ 300 ರೂಪಾಯಿ ಇರುತ್ತೆ. ಇದೆ ಲೆಕ್ಕದಲ್ಲಿ ನಾವು 1 ಎಕರೆ ಜಮೀನಿಗೆ ಎಷ್ಟು ಬೇಕಾಗುತ್ತೆ ಅನ್ನೋದನ್ನ ನೋಡೋಣ
1 ಎಕರೆಗೆ 130 ರಿಂದ 150 ಕಂಬಗಳು ಬೆಲೆ 300 ಇದಕ್ಕೆ ಹಣ 45000 ಆಗುತ್ತೆ.
ಮುಳ್ಳು ತಂತಿಗೆ 1 ಎಕರೆಗೆ 20 ರಿಂದ 30 ಸಾವಿರ ಆಗುತ್ತೆ ಅದರಲ್ಲೂ ಹಲವು ಕ್ವಾಲಿಟಿ ಇದೆ. ಫೆನ್ಸಿಂಗ್ ವರ್ಕ್ ಮಾಡೋರಿಗೆ 20 ಸಾವಿರ ಒಟ್ಟಾರೆ 1 ಲಕ್ಷದಿಂದ 1.20 ಲಕ್ಷ ರೂಪಾಯಿ ಆಗುತ್ತೆ