ಫೆಬ್ರವರಿ 1ನೇ ತಾರೀಕು ಹೊಸ ತಿಂಗಳು ಶುರುವಾಗುವ ದಿವಸ. ಅಂದರೆ ನಾಳೆ, ಹೊಸ ತಿಂಗಳು ಶುರುವಾಗಯುತ್ತಿರುವ ಈ ವೇಳೆ 6 ಪ್ರಮುಖ ನಿಯಮಗಳು ಜಾರಿಗೆ ಬರುತ್ತಿವೆ. ಈ ನಿಯಮಗಳನ್ನು ತಿಳಿದಿಲ್ಲ ಎಂದರೆ, ಆ ತಪ್ಪನ್ನು ಮಾಡಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳುವ ಹಾಗೆ ದಂಡ ಬೀಳಬಹುದು. ಹಾಗಾಗಿ ನಾಳೆಯಿಂದ ಬದಲಾಗುತ್ತಿರುವ, 5 ನಿಯಮಗಳನ್ನು ತಪ್ಪದೇ ತಿಳಿಯಿರಿ..
NPA ಹಣ ವಾಪಸ್ ಪಡೆಯುವಿಕೆ ನಿಯಮ:
NPA ಹಣವನ್ನು ವಾಪಸ್ ಪಡೆಯುವ ಬಗ್ಗೆ ಜನವರಿ 12ರಂದು ಹೊಸ ನಿಯಮವನ್ನು ಜಾರಿಗೆ ತರಲಾಗಿತ್ತು. ಈ ಹೊಸ ನಿಯಮದ ಅನುಸಾರ NPS ಖಾತೆ ಹೊಂದಿರುವವರು ತಮ್ಮ ಪೆನ್ಶನ್ ಅಕೌಂಟ್ ಇಂದ 25% ಅಷ್ಟು ಹಣವನ್ನು ಮಾತ್ರ ವಾಪಸ್ ಪಡೆಯಬಹುದು. ಪರಿಶೀಲನೆ ನಡೆಸಿದ ಬಳಿಕ CRA ಬಾಗಶಃ ಹಣವನ್ನು ವಾಪಸ್ ಪಡೆಯುವ ಮನವಿಯನ್ನು ಜಾರಿಗೆ ತಂದಿದೆ.
IMPS ನಿಧಿ ಟ್ರಾನ್ಸ್ಫರ್ ನಿಯಮ ಬದಲಾವಣೆ:
ನಾಳೆಯಿಂದ IMPS ನಿಯಮದಲ್ಲಿ ಹೊಸ ಬದಲಾವಣೆ ಜಾರಿಗೆ ತಂದಿದ್ದು, ಬ್ಯಾಂಕ್ ಫಲಾನುಭವಿಗಳ ಹೆಸರನ್ನು ಸೇರಿಸದೆ 5 ಲಕ್ಷದವರೆಗೂ ಹಣ ಟ್ರಾನ್ಸ್ಫರ್ ಮಾಡಲು ಸಾಧ್ಯವಾಗುತ್ತದೆ. ಆದರೆ ಫಲಾನುಭವಿಯ ಫೋನ್ ನಂಬರ್ ಮತ್ತು ಬ್ಯಾಂಕ್ ಹೆಸರನ್ನು ಸೇರಿಸಬೇಕು.
ಫಾಸ್ಟ್ಯಾಗ್ ಕೆವೈಸಿ ಕಡ್ಡಾಯ:
ವಾಹನಗಳ ಫಾಸ್ಟ್ಯಾಗ್ ವಿಚಾರದಲ್ಲಿ ಕೂಡ ನಿಯಮ ಬದಲಾವಣೆ ಮಾಡಲಾಗಿದೆ. ಫಾಸ್ಟ್ಯಾಗ್ ಬಳಕೆ ಮಾಡುತ್ತಿರುವವರು ಇಕೆವೈಸಿ ಮಾಡಿಸುವುದು ಈಗ ಕಡ್ಡಾಯ. ಇದಕ್ಕೆ ಇಂದು ಕೊನೆಯ ದಿನಾಂಕ ಆಗಿದ್ದು, ಇಕೆವೈಸಿ ಮಾಡಿಸಿಲ್ಲ ಎಂದರೆ, ಈಗಲೇ ಮಾಡಿಸಿ.
ಪಂಜಾಬ್ ಅಂಡ್ ಸಿಂಡ್ ಬ್ಯಾಂಕ್ FD ಯೋಜನೆ:
ಈ ಬ್ಯಾಂಕ್ ನಲ್ಲಿ ಧನಲಕ್ಷ್ಮಿ444 ಎನ್ನುವ 444 ದಿನಗಳ ಹೊಸ FD ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ FD ಸ್ಕೀಮ್ ನಲ್ಲಿ 7.60% ಬಡ್ಡಿದರ ಸಿಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಇಂದು ಕೊನೆಯ ದಿನಾಂಕ ಆಗಿದ್ದು, ಆಸಕ್ತರು FD ಯೋಜನೆ ಶುರು ಮಾಡಿ.
SBI ಹೋಮ್ ಲೋನ್:
ನಮ್ಮ ದೇಶದ ಜನರ ನಂಬಿಕೆ ಗಳಿಸಿರುವ SBI ಇದೀಗ ತಮ್ಮ ಗ್ರಾಹಕರಿಗೆ ಹೋಮ್ ಲೋನ್ ಮೇಲೆ ವಿಶೇಷ ರಿಯಾಯಿತಿ ನೀಡುತ್ತಿದೆ. ಹೋಮ್ ಲೋನ್ ಮೇಲೆ 65ಬಿಪಿಎಸ್ ವರೆಗು ರಿಯಾಯಿತಿ ನೀಡಲಿದೆ. ಇಂದು ಸಂಸ್ಕರಣಾ ಶುಲ್ಕ ಹಾಗೂ ಸಾಲ ಮನ್ನಾ ಶುಲ್ಕಕ್ಕೆ ಕೊನೆಯ ದಿನಾಂಕ ಆಗಿರುತ್ತದೆ.
SGB ಹೊಸ ಇನ್ಸ್ಟಾಲ್ಮೆಂಟ್ ಬಿಡುಗಡೆ:
ಸಾವೇರಿನ್ ಗೋಲ್ಡ್ ಬಾಂಡ್ ಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ, RBI ನಿಮಗೆ ಒಳ್ಳೆಯ ಅವಕಾಶ ನೀಡುತ್ತಿದೆ. 2023-24ನೇ ಸಾಲಿನ SGB ಯಲ್ಲಿ ಫೆಬ್ರವರಿ 12 ರಿಂದ 16ರವರೆಗು ಹೂಡಿಕೆ ಮಾಡಬಹುದು.