ನಮ್ಮ ದೇಶದ ಬೆನ್ನೆಲುಬು ರೈತ. ರೈತರು ಬೆಳೆ ಬೆಳೆದರೆ ಮಾತ್ರ, ನಮ್ಮೆಲ್ಲರಿಗೂ ಆಹಾರ ಸಿಗೋದು. ಆದರೆ ನಮ್ಮ ದೇಶದಲ್ಲಿ ರೈತರ ಪರಿಸ್ಥಿತಿ ಹೇಗಿದೆ ಅಂದ್ರೆ ಮಳೆ ಬೆಳೆ ಇಲ್ಲದೆ ಸರಿಯಾದ ಫಲ ಸಿಗೋದಿಲ್ಲ. ಜೊತೆಗೆ ಅವರ ಜೀವನ ಕೂಡ ಸಂತೋಷವಾಗಿಲ್ಲ. ರೈತರು ಮದುವೆ ಆಗ್ತಾರೆ ಅಂದ್ರೆ ಯಾರು ಹೆಣ್ಣು ಕೊಡೋಕೆ ಮುಂದೆ ಬರೋದಿಲ್ಲ. ದೇಶಕ್ಕೆ ಅನ್ನ ಕೊಡೋ ರೈತನ ಪರಿಸ್ಥಿತಿಯೇ ಈ ರೀತಿ ಅಂದರೆ ಬೇರೆಯವರ ಕಥೆ ಹೇಗೆ ಎಂದು ಊಹಿಸಲು ಕೂಡ ಸಾಧ್ಯವಿಲ್ಲ.

ರೈತರ ಬದುಕು ಚೆನ್ನಾಗಿರಲಿ ಎಂದು ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಎಲ್ಲಾ ಯೋಜನೆಗಳು ರೈತರನ್ನು ತಲುಪುತ್ತಿಲ್ಲ ಎನ್ನುವುದನ್ನು ಸಹ ನಾವು ನೆನಪಿನಲ್ಲಿ ಇಡಬೇಕು. ಕೃಷಿ ಚಟುವಟಿಕೆಗಳಿಗೆ ಸರಿಯಾಗಿ ಹಣವಿಲ್ಲದೇ ರೈತರು ಸಾಲ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ, ಮಾಡಿದ ಸಾಲ ತೀರಿಸಲು ಸಾಧ್ಯವಾಗದೆ, ಕಷ್ಟ ಎದುರಿಸುವಂಥ ಪರಿಸ್ಥಿತಿ ಬಂದಿದೆ. ಇದು ನಿಜಕ್ಕೂ ಬೇಸರದ ವಿಚಾರ.
ಈ ಕಾರಣಕ್ಕೆ ರೈತರಿಗೆ ಸರ್ಕಾರದಿಂದ ಸೌಲಭ್ಯಗಳು ರೈತರ ಬದುಕಿಗೆ ಸಹಾಯ ಆಗಬೇಕು ಎಂದು ರೈತ ಸಂಘಗಳು ಪ್ರಯತ್ನ ಪಡುತ್ತಿವೆ. ಈ ವರ್ಸ್ಗ ರಾಜ್ಯ ಸರ್ಕಾರದ ವಾರ್ಷಿಕ ಬಜೆಟ್ ನಲ್ಲಿ ರೈತದಿಗೆ ಅನುಕೂಲ ಅಗುವಂಥ ಯೋಜನೆಗಳನ್ನೇ ಜಾರಿಗೆ ತರಬೇಕು ಎಂದು ಕೇಳಿಕೊಳ್ಳಲಾಗಿದೆ. ಹಾಗೆಯೇ ರೈತ ಸಂಘದ ಅಧ್ಯಕ್ಷರು, ರೈತರಿಗೆ ಅನುಕೂಲ ಅಗುವಂಥ ಕೆಲವು ಸೌಲಭ್ಯ ತರಬೇಕು ಎಂದು ಸಿಎಂ ಅವರನ್ನು ಭೇಟಿ ಮಾಡಿ ಸಭೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅಷ್ಟಕ್ಕೂ ವಿಷಯ ಏನು ಅಂದರೆ, ರೈತರಿಗೆ ಆರ್ಥಿಕ ಸಮಸ್ಯೆಗಳು ಇರುವ ಕಾರಣ, 45 ವರ್ಷವಾದರೂ ಮದುವೆ ಆಗುವುದಕ್ಕೆ ಕಷ್ಟವಾಗಿದೆ. ರೈತರಿಗೆ ಹೆಣ್ಣುಕೊಡಲು ಯಾರು ಕೂಡ ಮುಂದೆ ಬರುತ್ತಿಲ್ಲ. ಹಾಗಾಗಿ ರೈತರಿಗೆ ಅನುಕೂಲ ಆಗಲಿ ಎಂದು ಈ ವರ್ಷದ ಬಜೆಟ್ ನಲ್ಲಿ ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲದೆ ಮತ್ತೊಂದು ಪ್ರಮುಖ ವಿಚಾರದ ಬಗ್ಗೆ ಚರ್ಚೆ ಮಾಡಲಾಗಿದೆ..
ಅದೇನು ಎಂದರೆ, ರೈತರನ್ನು ಮದುವೆಯಾದರೆ ಮದುವೆಯ ವೇಳೆ ಆ ಹುಡುಗಿಯ ಭದ್ರತೆಗಾಗಿ, ಸರ್ಕಾರದ ಕಡೆಯಿಂದ ₹5 ಲಕ್ಷ ರೂಪಾಯಿ ಕೊಡಬೇಕು, ಆಗ ರೈತರ ಮದುವೆ ಆಗುತ್ತದೆ ಎಂದು ಮನವಿ ಮಾಡಿಕೊಳ್ಳಲಾಗಿದೆ. ಹೌದು, ಈ ಒಂದು ಮನವಿಯನ್ನು ಕೂಡ ಸರ್ಕಾರಕ್ಕೆ ಮಾಡಿಕೊಳ್ಳಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ರೈತ ಸಂಘದ ಮನವಿಗಳನ್ನು ಆಲಿಸಿದ್ದು, ಬಜೆಟ್ ವೇಳೆ ಈ ಯೋಜನೆಗಳನ್ನು ಜಾರಿಗೆ ತರುತ್ತಾರಾ ಎಂದು ಕಾದು ನೋಡಬೇಕಿದೆ..