ಬಹಳಷ್ಟು ಜನರು ಸರ್ಕಾರಿ ಹುದ್ದೆಗಳಿಗೋಸ್ಕರ ಕಾಯುತ್ತಿರುತ್ತಾರೆ. ಬಹಳಷ್ಟು ವರ್ಷಗಳ ಕಾಲ ಪರೀಕ್ಷೆಗಾಗಿ ಓದುತ್ತಾ ಕನಸನ್ನು ಕಟ್ಟಿಕೊಂಡಿರುತ್ತಾರೆ. ಇದೀಗ ಅಬಕಾರಿ ಇಲಾಖೆಯಿಂದ ಸಿಹಿ ಸುದ್ದಿಯೊಂದು ಬಂದಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಸೆಪ್ಟೆಂಬರ್ ತಿಂಗಳಿನ 23ರಂದು ಕರ್ನಾಟಕ ವಿಧಾನ ಪರಿಷತ್ತಿನ ಸಭೆಯಲ್ಲಿ ಶಿಕ್ಷಕರ ಕ್ಷೇತ್ರದಿಂದ ನಾರಾಯಣ ಸ್ವಾಮಿ ಅವರು ಅಬಕಾರಿ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳುವುದರ ಬಗ್ಗೆ ಕೇಳಲಾದ ಪ್ರಶ್ನೆಗೆ ಅಬಕಾರಿ ಸಚಿವರು ಉತ್ತರಿಸಿದ್ದಾರೆ. ಅನುಬಂಧ ಒಂದರಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ, ಈಗಾಗಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಂಖ್ಯೆ, ವೇತನದ ಬಗ್ಗೆ ಮಾಹಿತಿ ಕೊಡಲಾಗಿದೆ. ಗ್ರೂಪ್ ಎ ಅರವತ್ತು ಹುದ್ದೆಗಳು, ಗ್ರೂಪ್ ಬಿ ಎಂಟು ಹುದ್ದೆಗಳು, ಗ್ರೂಪ್ ಸಿ 1,633 ಹುದ್ದೆಗಳು ಖಾಲಿ ಇದೆ.
ಗ್ರೂಪ್ ಡಿಯಲ್ಲಿ ಬರುವ ಚಾಲಕರು ಹುದ್ದೆಗೆ ಹಿರಿಯ ವಾಹನ ಚಾಲಕರು 14 ಹುದ್ದೆಗಳು, ಅಬಕಾರಿ ಕಾನ್ಸ್ಟೇಬಲ್ 573 ಹುದ್ದೆಗಳು, ಮುಖ್ಯ ಪೇದೆ 165 ಹುದ್ದೆಗಳು, ಬೆರಳಚ್ಚುಗಾರರು 46 ಹುದ್ದೆಗಳು, ದ್ವಿತೀಯ ದರ್ಜೆ ಸಹಾಯಕರು 137 ಹುದ್ದೆಗಳು, ಶೀಘ್ರಲಿಪಿಗಾರರು 34 ಹುದ್ದೆಗಳು, ಪ್ರಥಮ ದರ್ಜೆ ಸಹಾಯಕರು 136 ಹುದ್ದೆಗಳು ಖಾಲಿ ಇದೆ, ಅಬಕಾರಿ ಉಪನಿರೀಕ್ಷಕರು 353 ಹುದ್ದೆಗಳು, ಅಬಕಾರಿ ನಿರೀಕ್ಷಕರು 60 ಹುದ್ದೆಗಳು ಲ್ಯಾಬ್ ಸಹಾಯಕ ಎರಡು ಹುದ್ದೆಗಳು ಖಾಲಿ ಇದೆ.
ಗ್ರೂಪ್ ಡಿ 34 ಹುದ್ದೆಗಳು ಖಾಲಿ ಇದೆ. ಒಟ್ಟು 1,755 ಹುದ್ದೆಗಳು ಖಾಲಿ ಇದೆ. ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕೆಪಿಎಸ್ ಸಿ ಇಂದ ಖಾಲಿ ಇರುವ ಹುದ್ದೆಗಳಿಗೆ 2018ರ 11ನೇ ತಿಂಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಕೆಪಿಎಸ್ ಸಿ ಇಂದ 2022 ರಲ್ಲಿ ಜನವರಿಯಿಂದ ಎಪ್ರಿಲ್ ತಿಂಗಳಿನ ಒಳಗೆ ಅರ್ಜಿ ಆಹ್ವಾನಿಸುವ ಸಾಧ್ಯತೆಗಳಿವೆ
ಸಭೆಯಲ್ಲಿ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆ ನಡೆಯುತ್ತಿದ್ದು ಇದು ಸರ್ಕಾರದ ಗಮನಕ್ಕೆ ಬಂದಿದೆಯೇ, ಸರ್ಕಾರದ ಗಮನಕ್ಕೆ ಬಂದಿದ್ದರೆ ಭ್ರಷ್ಟಾಚಾರ ಎಸಗುತ್ತಿರುವ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ದೂರುಗಳೇನು ಎಂದು ಪ್ರಶ್ನೆ ಕೇಳಿದಾಗ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪದ ಮೇರೆಗೆ ಸರಿಯಾದ ಶಿಕ್ಷೆಯನ್ನು ಕೊಡಲಾಗುತ್ತದೆ ಎಂದು ಉತ್ತರಿಸಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರವನ್ನು ತಡೆಯುವುದು ಅವಶ್ಯವಾಗಿದೆ. ಒಟ್ಟಿನಲ್ಲಿ ಉದ್ಯೋಗಾಕಾಂಕ್ಷಿಗಳು ಮುಂದಿನ ದಿನಗಳಲ್ಲಿ ಕೆಪಿಎಸ್ ಸಿ ಇಂದ ಬಿಡುವ ನೇಮಕಾತಿಯನ್ನು ನೋಡಿಕೊಂಡು ಅರ್ಜಿ ಸಲ್ಲಿಸಿ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430