Excise Department Recruitment 2023: ಕರ್ನಾಟಕ ರಾಜ್ಯ ಸರ್ಕಾರದಿಂದ ಅಬಕಾರಿ ಇಲಾಖೆಯಿಂದ ಸಿಹಿ ಸುದ್ದಿ ಒಂದು ಬಂದಿದೆ. ಅಬಕಾರಿ ಇಲಾಖೆಯಲ್ಲಿ ಎಸ್ಎಸ್ಎಲ್ಸಿ, ಪಿಯುಸಿ, ಡಿಗ್ರಿ ಆದಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವಯೋಮಿತಿ ಕನಿಷ್ಠ 18 ವರ್ಷವಾಗಿರಬೇಕು ಗರಿಷ್ಠ 30 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆ ಕೂಡ ಇರುತ್ತದೆ
ವೇತನ: ರೂ 30,000 -65,000/-
ಸಭೆಯಲ್ಲಿ ಶಿಕ್ಷಕರ ಕ್ಷೇತ್ರದಿಂದ ನಾರಾಯಣಸ್ವಾಮಿ ಅವರು ಅಬಕಾರಿ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳುವುದರ ಬಗ್ಗೆ ಕೇಳಲಾದ ಪ್ರಶ್ನೆಗೆ ಅಬಕಾರಿ ಸಚಿವರು ಉತ್ತರಿಸಿದ್ದಾರೆ. ಅನುಬಂಧ ಒಂದರಲ್ಲಿ ಕಾಲಿರುವ ಹುದ್ದೆಗಳ ಸಂಖ್ಯೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಬಗ್ಗೆ ಹಾಗೂ ವೇತನದ ಬಗ್ಗೆ ಮಾಹಿತಿ ನೀಡಲಾಗಿದೆ.
ಖಾಲಿರುವ ಹುದ್ದೆಗಳು :
ಗ್ರೂಪ್ ಎ: 60 ಹುದ್ದೆಗಳು,
ಗ್ರೂಪ್ ಬಿ: 8 ಹುದ್ದೆಗಳು,
ಗ್ರೂಪ್ ಸಿ: 1633 ಹುದ್ದೆಗಳು ಖಾಲಿ ಇದೆ
ಗ್ರೂಪ್ ಡಿ ಯಲ್ಲಿ ಬರುವ ಚಾಲಕರ ಹುದ್ದೆಗೆ ಹಿರಿಯ ವಾಹನ ಚಾಲಕರು 14 ಹುದ್ದೆಗಳು,ಅಬಕಾರಿ ಕಾನ್ಸ್ಟೇಬಲ್ 573 ಹುದ್ದೆಗಳು, ಮುಖ್ಯ ಪೇದೆ 165 ಹುದ್ದೆಗಳು, ಬೆರಳಚ್ಚುಗಾರರು 46 ಹುದ್ದೆಗಳು, ದ್ವಿತೀಯ ದರ್ಜೆ ಸಹಾಯಕರು 137 ಹುದ್ದೆಗಳು, ಶೀಘ್ರ ಲಿಪಿಗಾರರು 34 ಹುದ್ದೆಗಳು, ಪ್ರಥಮ ದರ್ಜೆ ಸಹಾಯಕರು 136 ಹುದ್ದೆಗಳು ಖಾಲಿ ಇದೆ. ಅಬಕಾರಿ ಉಪನಿರೀಕ್ಷಕರು 353 ಹುದ್ದೆಗಳು, ಅಬಕಾರಿ ನಿರೀಕ್ಷಕರು 60 ಹುದ್ದೆಗಳು ಲ್ಯಾಬ್ ಸಹಾಯಕ ಎರಡು ಹುದ್ದೆಗಳು ಖಾಲಿ ಇದೆ. ಗ್ರೂಪ್ ಡಿ ಯಲ್ಲಿ ಒಟ್ಟು 1755 ಹುದ್ದೆಗಳು ಖಾಲಿ ಇದೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಸಕ್ತಿ ಇರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.