Employee Scheme: ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಉದ್ಯಮ ಆರಂಭಿಸಲು ಮೂರು ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುವುದು ಮಹಿಳೆಯರು ಮಾಡುವಂತಹ ಸಣ್ಣಪುಟ್ಟ ವ್ಯಾಪಾರಗಳು (businesses) ಅಂದರೆ ಹಾಲಿನ ವ್ಯಾಪಾರ ತರಕಾರಿ ವ್ಯಾಪಾರ ಕಿರಾಣಿ ಅಂಗಡಿ ಬ್ಯೂಟಿ ಪಾರ್ಲರ್ (Beauty parlour) ಸಣ್ಣಪುಟ್ಟ ವ್ಯಾಪಾರ ಮಾಡುವವರಿಗೆ ಉದ್ಯೋಗಿನಿ ಯೋಜನೆಯ ಮುಖಾಂತರ ಬಡ್ಡಿ ರಹಿತ ಮೂರು ಲಕ್ಷ ರೂಗಳಷ್ಟು ಸಾಲವನ್ನು ನೀಡಲಾಗುವುದು.ಇದಕ್ಕೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳನ್ನು ಇಲ್ಲಿ ತಿಳಿಯೋಣ.
ಉದ್ಯೋಗಿನಿ ಯೋಜನೆಯ ಲಕ್ಷಣಗಳು ಏನೆಂದರೆ ಉದ್ಯೋಗಿನಿ ಯೋಜನೆ ಅಡಿ ಸಮಾಜದ ಎಲ್ಲಾ ವರ್ಗಗಳ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ ವಿಧವೆಯರು, ಅಂಗವಿಕಲರು, ನಿರ್ಗತಿಕ ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯ ನೀಡಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.
ಇನ್ನು ಯಾವೆಲ್ಲ ಉದ್ಯಮಗಳನ್ನು ಆರಂಭಿಸಲು ಈ ಸಾಲ ದೊರೆಯುತ್ತದೆ ಎಂದು ನೋಡುವುದಾದರೆ ಸುಮಾರು 88 ವಿಧದ ಸಣ್ಣ ಉದ್ಯಮ ಆರಂಭಿಸಲು ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸಾಲ ಪಡೆಯಬಹುದಾಗಿದೆ ಇವುಗಳಲ್ಲಿ ಹೊಲಿಗೆ ಮತ್ತು ಮೀನು ಮಾರಾಟ, ದಿನಸಿ ಮಾರಾಟ ಗ್ರಂಥಾಲಯ ಬೇಕರಿ, ತರಗತಿ ತಯಾರಿಕೆ ಡೈರಿ ಹಾಗೂ ಕುಕ್ಕುಟೋದ್ಯಮ ಕೂಡ ಸೇರಿವೆ ಉದ್ಯೋಗಿನಿ ಯೋಜನೆಯ ಅಡಿ ಮಹಿಳೆಯರಿಗೆ ಮಾತ್ರ ಸಾಲ ದೊರೆಯುತ್ತದೆ 18ರಿಂದ 55 ವರ್ಷದ ವಯಸ್ಸಿನ ಮಹಿಳೆಯರು ಬಡ್ಡಿ ರಹಿತ ಸಾಲ ಪಡೆಯಲು ಅರ್ಹರಾಗಿರುತ್ತಾರೆ.
ಸಾಲಕ್ಕೆ ಅರ್ಜಿ ಸಲ್ಲಿಸುವ ಮಹಿಳೆಯರ ಕುಟುಂಬದ ಆದಾಯ 1.5 ಲಕ್ಷ ರೂ ಗಿಂತ ಕಡಿಮೆ ಆಗಿರಬೇಕು ವಿಧವೆಯರು ಅಂಗವಿಕಲರು ಮತ್ತು ನಿರ್ಗತಿಕ ಮಹಿಳೆಯರಾದರೆ ಕುಟುಂಬದವರಿಗೆ ಹೆಚ್ಚಿನ ಆದಾಯವಿದ್ದರೂ ಸಾಲ ನೀಡಲು ಪರಿಗಣಿಸಲಾಗುತ್ತದೆ ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಎಂದರೆ ಆಧಾರ್ ಕಾರ್ಡ್ ಜನನ ಪ್ರಮಾಣ ಪತ್ರ ಸ್ಥಳೀಯ ಶಾಸಕ ಅಥವಾ ಸಂಸದನ ಲೆಟರ್ ಹೆಡ್ ಇರುವ ಪತ್ರ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ದೇಶದ ಅನೇಕ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಅನೇಕ ಬ್ಯಾಂಕುಗಳು ಉದ್ಯೋಗಿನಿ ಯೋಜನೆಯಡಿ ಸಾಲ ನೀಡುತ್ತಿವೆ
ಪಂಜಾಬ್ ಆಯಂಡ್ ಸಿಂದು ಬ್ಯಾಂಕ್ ಸರಸ್ವತ ಬ್ಯಾಂಕ್ ಗಳಲ್ಲಿಯೂ ಸಾಲ ಪಡೆಯಬಹುದಾಗಿದೆ ಇವುಗಳು ಮಾತ್ರವಲ್ಲದೆ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಸಹಕಾರಿ ಬ್ಯಾಂಕುಗಳಿಂದಲೂ ಸಾಲ ಪಡೆಯಬಹುದಾಗಿದೆ ಬ್ಯಾಂಕಿನವರು ನೀಡುವ ಅಪ್ಲಿಕೇಶನ್ ಫಾರಂ ಅನ್ನು ತುಂಬಿ ಅವರಿಗೆ ಸಬ್ಮಿಟ್ ಮಾಡಬೇಕು ಈ ಮೂಲಕ ಸಾಲವನ್ನು ಪಡೆಯಬಹುದು.