electric car ಈಗಿನ ಕಾಲದಲ್ಲಿ ಸ್ವಂತ ವಾಹನವಿಲ್ಲದೆ ಓಡಾಡುವುದು ತುಂಬಾ ಕಷ್ಟದ ಕೆಲಸ. ಹಾಗಾಗಿ ಬಹುತೇಕ ಎಲ್ಲರೂ ಕೂಡ ತಮ್ಮ ಮನೆಗಳಲ್ಲಿ ಒಂದು ವಾಹನವನ್ನಾದರು ಇಟ್ಟುಕೊಂಡಿರುತ್ತಾರೆ. ಅದರಿಂದ ಮನೆಯವರು ಓಡಾಡುವುದಕ್ಕೆ ಅನುಕೂಲವು ಆಗುತ್ತದೆ. ಹಾಗೆಯೇ ಎಲ್ಲಿಗಾದರು ಹೋಗಲು ತಗಲುವ ಖರ್ಚನ್ನು ಸಹ ಕಡಿಮೆ ಮಾಡುತ್ತದೆ. ಈ ಕಾರಣಗಳಿವೆ ಜನರು ಸ್ವಂತ ವಾಹನ ಹೊಂದುವುದು ಉತ್ತಮ ಎಂದು ಬಯಸುತ್ತಾರೆ. ಹೆಚ್ಚಿನ ಜನರು ತಮ್ಮ ಬಜೆಟ್ ಗೆ ತಕ್ಕ ಹಾಗೆ ಒಂದು ದ್ವಿಚಕ್ರ ವಾಹನ ಕೊಂಡುಕೊಳ್ಳಬೇಕು ಎಂದುಕೊಳ್ಳುತ್ತಾರೆ.
ನಮ್ಮ ದೇಶದಲ್ಲಿ ಹೀಗೆ ಉತ್ತಮವಾದ ಹಲವು ಬೈಕ್ ಗಳಿವೆ, ಖ್ಯಾತ ದ್ವಿಚಕ್ರ ವಾಹನ ಸಂಸ್ಥೆಗಳು ಬೈಕ್ ಗಳನ್ನು ತಯಾರಿಸುತ್ತದೆ..ಒಳ್ಳೆಯ ಕಾರ್ಯಕ್ಷಮತೆ ಇರುವ ಬೈಕ್ ಖರೀದಿ ಮಾಡುತ್ತೀವಿ ಎಂದರೆ, ಬೆಲೆ 1 ಲಕ್ಷ ಅಥವಾ ಅದಕ್ಕಿಂತ ಜಾಸ್ತಿ ಇರುತ್ತದೆ. ಆದರೆ ಇಷ್ಟೇ ಹಣಕ್ಕೆ ಕಾರ್ ಸಿಗುತ್ತದೆ ಎಂದರೆ ಖರೀದಿ ಮಾಡಲು ನಿಮಗೆ ಇಷ್ಟ ಆಗದೆ ಇರುತ್ತಾ? ಬೈಕ್ ಗಿಂತ ಕಾರ್ ಉತ್ತಮವಾದ ಆಯ್ಕೆ ಎಂದು ಅದನ್ನೇ ಖರೀದಿ ಮಾಡುತ್ತಾರೆ.
ಈ ಕಾರಣಕ್ಕೆ ಕಡಿಮೆ ಬೆಲೆಯ ಕಾರ್ ಗಳು ಮಾರುಕಟ್ಟೆಗೆ ಬಂದಿದೆ. ಇದಕ್ಕಿಂತ ಮೊದಲು ಟಾಟಾ ಸಂಸ್ಥೆಯು ಅತಿಕಡಿಮೆ ಬೆಲೆಯ ನ್ಯಾನೋ ಕಾರ್ ಲಾಂಚ್ ಮಾಡಿತ್ತು, ಈ ಕಾರ್ ಕಡಿಮೆ ಬೆಲೆಗೆ ಒಳ್ಳೆಯ ಕಾರ್ಯಕ್ಷಮತೆ ಇದ್ದ ಕಾರಣ ಜನರನ್ನು ಆಕರ್ಷಿಸಿತ್ತು. ಸಾಕಷ್ಟು ಜನರು ನ್ಯಾನೋ ಕಾರ್ ಖರೀದಿ ಮಾಡಿದ್ದರು. ಇದೀಗ ನ್ಯಾನೋ ಕಾರ್ ಗಿಂತಲು ಕಡಿಮೆ ಬೆಲೆಯಲ್ಲಿ ಹೊಸದೊಂದು ಕಾರ್ ಲಾಂಚ್ ಆಗಿದೆ. ಇದರ ಬೆಲೆ ಕೂಡ ಕಡಿಮೆ ಇದ್ದು, ಗ್ರಾಹಕರು ಸುಲಭವಾಗಿ ಖರೀದಿ ಮಾಡಬಹುದಾದಂಥ ಕಾರ್ ಆಗಿದೆ. ಬೈಕ್ ಬೆಲೆಗೆ ಸಿಗುವಂಥ ಕಾರ್ ಇದಾಗಿದೆ.
ಪ್ರಸ್ತುತ ಈ ಕಾರ್ ನಮ್ಮ ದೇಶದಲ್ಲಿ ಮಾರಾಟ ಆಗುತ್ತಿಲ್ಲ. ಚೈನಾದಲ್ಲಿ ಈ ಕಾರ್ ಲಾಂಚ್ ಆಗಿದೆ. ಬೆಲೆ ಕಡಿಮೆ ಎನ್ನುವುದರ ಜೊತೆಗೆ ಈ ಕಾರ್ ನ ಸೈಜ್ ಚಿಕ್ಕದಾಗಿರುವ ಕಾರಣ ಪಾರ್ಕ್ ಮಾಡುವುದಕ್ಕೆ ಅನುಕೂಲವಾಗುತ್ತದೆ. ಚೀನಾದಲ್ಲಿನ ಖ್ಯಾತ ಇಕಾಮರ್ಸ್ ಕಂಪನಿ ಆಗಿರುವ ಅಲಿಬಾಬ ಎಲೆಕ್ಟ್ರಿಕ್ ವೆಹಿಕಲ್ ಆಫ್ ದಿ ವೀಕ್ ಹೆಸರಿನಲ್ಲಿ ಒಂದು ದೊಡ್ಡ ಸೇಲ್ಸ್ ಮೇಳ ಒಂದನ್ನು ಆರ್ಗನೈಸ್ ಮಾಡಿತ್ತು. ಇಲ್ಲಿ ಅತಿಕಡಿಮೆ ಬೆಲೆಗೆ ಕಾರ್ ಗಳನ್ನು ಲಾಂಚ್ ಮಾಡಲಾಗುತ್ತಿದೆ.
ಇದೊಂದು ಎಲೆಕ್ಟ್ರಿಕ್ ಕಾರ್ ಆಗಿದ್ದು, ಈ ಕಾರ್ ನ ಹೆಡ್ ಲೈಟ್ಸ್ ನೋಡಬಹುದು. ಈ ಕಾರ್ ನಲ್ಲಿ 35kW ಮೋಟರ್ ಬಳಸಲಾಗುತ್ತದೆ. 47 bhp ಪವರ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ಕಾರ್ ಹೆಚ್ಚು ಸಾರಿ ಚಾರ್ಜ್ ಮಾಡುವ ಅವಶ್ಯಕತೆ ಹೊಂದಿದೆ. ಇನ್ನು ಈ ಕಾರ್ 152km ಮೈಲೇಜ್ ನೀಡುತ್ತದೆ, 120 km/hr ಸ್ಪೀಡ್ ಕೊಡುತ್ತದೆ. ಈ ಕಾರ್ ನ ಬೆಲೆ 1999 ಡಾಲರ್ ಆಗಿದ್ದು, ಭಾರತದಲ್ಲಿ ಇದರ ಬೆಲೆ ₹99,000 ರೂಪಾಯಿ ಆಗಿದೆ.
ಈ ಕಾರ್ ಅನ್ನು ಈಗ ಭಾರತದಲ್ಲಿ ಮಾರಾಟ ಮಾಡುವುದಿಲ್ಲ ಎಂದು ಹೇಳಲಾಗುತ್ತಿದೆ. ಅದಕ್ಕೆ ಕಾರಣ ಈ ಕಾರ್ ನ ಬೆಲೆ ತುಂಬಾ ಕಡಿಮೆ ಆಗಿದೆ, ಹಾಗಾಗಿ ಆಕರ್ಷಣೀಯ ಲುಕ್ ಇರುವುದಿಲ್ಲ. ಇದರ ಸೌಕರ್ಯ ಕೂಡ ಅಷ್ಟೇನು ಚೆನ್ನಾಗಿಲ್ಲ. ಈ ಕಾರ್ ನ ಸೇಫ್ಟಿ ಬಗ್ಗೆ ಕೂಡ ಯಾವುದೇ ಗ್ಯಾರಂಟಿ ಇಲ್ಲ. ಈ ಕಾರಣಗಳಿಂದ ಭಾರತದ ಜನರಿಗೆ ಈ ಕಾರ್ ಇಷ್ಟ ಆಗುತ್ತೋ ಇಲ್ಲವೋ ಎಂದು ನಮ್ಮ ದೇಶದಲ್ಲಿ ಲಾಂಚ್ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಲಾಂಚ್ ಆಗುತ್ತಾ ಎಂದು ಕಾದು ನೋಡಬೇಕಿದೆ.