ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮಾ ಜೂನಿಯರ್ಸ್ ಮಹೇಂದ್ರ ಅನ್ನುವ ಕಲದೇವಿಯ ಪುತ್ರನ ಬಗ್ಗೆ ಯಾರಿಗೆ ಗೊತ್ತಿಲ್ಲ ನೋಡಲು ಶ್ಯಾಮ ವರ್ಣ ಪುಟ್ಟ ಹುಡುಗ ಇಂದು ಸಿನಿಮಾ ಇಂಡಸ್ಟ್ರಿಯಲ್ಲಿ ಈತನ ನಟನೆ ಹಾಗೂ ಮಾತಿನ ಮೋಡಿಗೆ ಎಲ್ಲರೂ ತಲೆದೂಗುವರು ಡ್ರಾಮಾ ಜೂನಿಯರ್ ಅಲ್ಲಿ ಹಲವಾರು ಪಾತ್ರಗಳ ಅಭಿನಯದ ಮೂಲಕ ಜನರ ಮನದಲ್ಲಿ ಮೆಚ್ಚಿಗೆ ಗಳಿಸಿ ಕೊನೆಗೆ ರನ್ನರ್ ಆಗಿ ಪ್ರಶಸ್ತಿ ಪಡೆದ ಹುಡುಗ ಆದರೆ ಈತನ ಮನೆ ಹಾಗೂ ಈತ ಹಾದು ಬಂದ ದಾರಿ ಬಗ್ಗೆ ಈ ಅಂಕಣದಲ್ಲಿ ತಿಳಿಯೋಣ ಬನ್ನಿ

ಮಹೇಂದ್ರ ಮೈಸೂರಿನ ಗಾಂಧಿನಗರ ಅಲ್ಲಿನ ನಿವಾಸಿ ಆಗಿದ್ದು ಇವನು ಸಕಲ ಕಲಾವಿದ ಎಂದರೆ ತಪ್ಪಾಗಲಾರದು ನಟನೆ ಪೈಂಟಿಂಗ್ ಹಾಗೂ ಕ್ಲೇ ಮೂಲಕ ಕರಕುಶಲ ಮಾಡುವ ತನ್ನ ಪ್ರತಿಭೆಯನ್ನು ಹೊಂದಿದ್ದಾನೆ ಇವನು ಶಾಲಾ ಸಮಯಲ್ಲಿ ಆತನ ನಟನೆ ಹಾಗೂ ಅವನ ವ್ಯಕ್ತಿತ್ವ ನೋಡಿದ ಅವನ ಟೀಚರ್ ಉಷಾ ಅವರು ಅವನ ತಾಯಿಯಲ್ಲಿ ಈತನನ್ನು ಡ್ರಾಮಾ ಜೂನಿಯರ್ ಆಡಿಷನ್ ಗೆ ಕರೆದೋಯ್ಯಲು ಸಲಹೆ ನೀಡುತ್ತಾರೆ ಕೊನೆಗೆ ಆಡಿಷನ್ ನಲ್ಲಿ ಕೊನೆಗೂ ಆಯ್ಕೆ ಆಗುತ್ತಾರೆ ತನ್ನ ಮನೆಯ ಪರಿಸ್ಥಿಯಲ್ಲಿ ಆತನ ತಾಯಿ ಹಾಗೂ ಮಹೇಂದ್ರ ಸ್ವಲ್ಪ ಮುಜುಗರಕ್ಕೆ ಒಳಪಟ್ಟಾಗ ಜೀ ಕನ್ನಡದವರು ಇರಲು ಬೆಂಗಳೂರಿನಲ್ಲಿ ವಸತಿ ಸೌಲಭ್ಯವನ್ನು ಒದಗಿಸುತ್ತಾರೆ ಇನ್ನು ಆತನ ನಟನೆಯನ್ನು ನೋಡಿದ ಜನರು ಆತನ ನಟನೆಯನ್ನು ಮೆಚ್ಚಿ ಕೊನೆಗೆ ಡ್ರಾಮಾ ಜೂನಿಯರ್ಸ್ ರನ್ನರ್ ಆಗುತ್ತಾನೆ

ಇತ್ತೀಚೆಗೆ ಸಂದರ್ಶನ ಒಂದರಲ್ಲಿ ತನ್ನ ಜೀವನದ ಬಗ್ಗೆ ಕೆಲವೊಂದು ಅನುಭವ ಹಂಚಿಕೊಳ್ಳುತ್ತಾರೆ ನಾನು ಯಾವುದೇ ವಸ್ತುವನ್ನು ದುಡ್ಡು ಕೊಟ್ಟು ತೆಗೆದು ಕೊಳ್ಳುವ ಪ್ರಮೇಯ ಇಲ್ಲ ತುಂಬಾ ಅಭಿಮಾನಿಗಳು ಚಿನ್ನದ ಸರ ಕೈ ಗಡಿಯಾರ ಮೊಬೈಲ್ ಹೀಗೆ ಹಲವರು ವಸ್ತುಗಳನ್ನು ಬಹುಮಾನದ ರೂಪವಾಗಿ ಕೊಡುತ್ತಾರೆ ಒಮ್ಮೆ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಅಭಿಮಾನಿಯೊಬ್ಬರು ಬಸ್ ಅನ್ನು ಬೆನ್ನಟ್ಟಿ ಕೊನೆಗೆ ಬಸ್ ಅನ್ನು ನಿಲ್ಲಿಸಿ ಅಮ್ಮನ ಕೈಗೆ ಹತ್ತು ಸಾವಿರ ಕೊಟ್ಟು ಏನಾದರೂ ತೆಗೆದುಕೊಳ್ಳಲು ಮನವಿ ಮಾಡುತ್ತಾರೆ

ಅದೇ ಹಣದಲ್ಲಿ ಮೊದಲನೆಯ ಬಾರಿಗೆ ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ನನ್ನು ತೆಗೆದುಕೊಳ್ಳುತ್ತಾರೆ ಸುಮಾರು 6_7 ವರ್ಷ ಅದರ ಉಪಯೋಗ ಬಂದಿದೆ ಇಂದಿಗೂ ಕೂಡ ಅಮ್ಮ ಅದನ್ನು ಜೋಪಾನವಾಗಿ ಎತ್ತಿಟ್ಟು ಕೊಂಡಿದ್ದಾರೆ ಡ್ರಾಮಾ ಜೂನಿಯರ್ ಸಮಯದಲ್ಲಿ ಬಂದ ಹಣವನ್ನು ನಮ್ಮ ಮನೆಯ ನವೀಕರಣ ಮಾಡಲು ಉಪಯೋಗಿಸಿಕೊಂಡಿದ್ದೇನೆ ಮೊದಲು ಮಳೆ ಬಂದರೆ ಮನೆ ಪೂರ್ತಿ ಸೋರುವುದು ಮಲಗಲು ಕೂಡ ಜಾಗ ಇರಲಿಲ್ಲ ಯಾವುದಾದರೂ ಪ್ರೋಗ್ರಾಮ್ ಗೆ ಹೋದಾಗ ಅದರಿಂದ ಬಂದ ಹಣವನ್ನು ಕೂಡ ಮನೆಗೆ ಹಾಕಿದೇನೆ ಇನ್ನು ಪ್ರತಿದಿನ ನನಗೆ ಹತ್ತು ಸಾವಿರ ಹಣವನ್ನು ವೇತನ ಆಗಿ ನೀಡುತ್ತಿದ್ದರು

ಚಾಲೆಂಜ್ ಸ್ಟಾರ್ ದರ್ಶನ್ ಸರ್ ಅವರು ತಮ್ಮ ತಾರಕ್ ಸಿನಿಮಾದಲ್ಲಿ ನಟಿಸಲು ಕೇಳಿದಾಗ ನನಗೆ ಸಮಯದ ಅಭಾವವಿರುವುದರಿಂದ ಮನವಿ ಮಾಡಿದ್ದಲ್ಲಿ ನನಗೋಸ್ಕರ ಅವರು ಕಾದಿರುವ ವಿಚಾರ ನನಗೆ ಇಂದು ಹೆಮ್ಮೆ ಆಗುತ್ತದೆ ಸಾಧುಕೋಕಿಲ ಅವರ ಜೊತೆ ನಟಿಸುವ ಅವಕಾಶ ಇದ್ದು ಆದರೆ ಸಮಯದ ಅಭಾವದಿಂದ ಕೊನೆಗೆ ಆ ಪಾತ್ರವನ್ನು ಕುರಿ ಪ್ರತಾಪ್ ಅವರು ನಟನೆ ಮಾಡಿದ್ದಾರೆ ಆ ಸಿನಿಮಾದಲ್ಲಿ ಪ್ರತಾಪ್ ಅವರ ಮಗನ ಪಾತ್ರ ನಿರ್ವಹಿಸಿದ್ದು ಪ್ರತಾಪ್ ಅವರು ಒಬ್ಬ ಬುದ್ಧಿಭ್ರಮಣೆ ವ್ಯಕ್ತಿಯಾಗಿದ್ದು ಇಂದಿನ ದಿನ ನಡೆದ ಘಟನೆಯನ್ನು ನಾಳೆ ಮರೆಯುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ

ಆಗ ಅವರು ದಿನಪ್ರತಿ ಮಾಡಿದ ಕೆಲಸವನ್ನು ವಿಡಿಯೋ ಮೂಲಕ ತೋರಿಸುವ ಸಣ್ಣ ಪಾತ್ರವನ್ನು ನಾನು ಮಾಡಿದ್ದೇನೆ ಒಂದು ಊಟದ ಪಂಕ್ತಿಯಲ್ಲಿ ಕುಳಿತು ಊಟ ಮಾಡುವ ಸಂದರ್ಭವನ್ನು ಮರೆಯಲು ಅಸಾಧ್ಯ ಎಲ್ಲರನ್ನು ದರ್ಶನ ಅವ್ರು ಎಲ್ಲರೂ ನಮ್ಮವರೇ ಎನ್ನುವ ಗುಣ ಬಹಳ ದೊಡ್ಡದು ಮಾದ್ಯಮ ಒಂದರಲ್ಲಿ ಇವನ ಡೇಟ್ಸ್ ಗಾಗಿ ನಾನು ಕಾದಿದ್ದೇನೆ ಎಂದು ಕೂಡ ಹೇಳಿಕೊಂಡಿದ್ದಾರೆ ಇನ್ನೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಅಲ್ಲಿ ಹಲವು ಮೋಜು ಮಸ್ತಿ ಮಾಡಿದ್ದು ನನಗೆ ಪೂರ್ತಿ ಕಥೆಯನ್ನು ಓದಿ ಮನನ ಮಾಡಿ ಎಂದು ಕೊಟ್ಟರು ಕೂಡ ನಾನೂ ಬಾರಿ ಗೇಮ್ ಆಡುತ ಟೈಂಪಾಸ್ ಮಾಡಿದ್ದೇನೆ

ಶೂಟಿಂಗ್ ಸಮಯದಲ್ಲಿ ತರಲೆ ತುಂಟಾಟ ಆಡಿದ್ದು ಅದರಲ್ಲಿ ಮೈಸೂರಿನಿಂದ ಕಾಸರಗೋಡಿಗೆ ಹುಡುಕುತ ಬರುವ ದೃಶ್ಯ ಸಹಜ ಆಗಿದ್ದು ನನ್ನ ಅಣ್ಣನ ಒಂದು ಸಣ್ಣ ಪಾತ್ರ ಮಾಡಿದ್ದಾನೆ ಹಾಗೂ ಅನಂತ್ ನಾಗ್ ರಿಷಿಬ ಶೆಟ್ಟಿ ಪ್ರಮೋದ್ ಸರ್ ಅವರು ನಮ್ಮನ್ನೆಲ್ಲ ಚೆನ್ನಾಗಿ ಸ್ನೇಹಿತರ ಹಾಗೆ ಜೊತೆಗೆ ಇದ್ದರು ಆಸಿನಿಮಾ ಅಲ್ಲಿ ಕೊನೆಗೆ ಅನಂತ್ ನಾಗ್ ಸರ್ ಅವರು ಡೈಲಾಗ್ ಒಂದೇ ಟೇಕ್ ಅಲ್ಲಿ ಪೂರ್ಣ ಆಗಿದ್ದು ಎಲ್ಲರಿಗೂ ಆಶ್ಚರ್ಯ ಸಂಗತಿ ಸಿನಿಮಾ ವೇಳೆಯಲ್ಲಿ ಅತಿಯಾದ ಸೊಳ್ಳೆಯಿಂದ ಕಚ್ಚಿಸಿಕೊಂಡು ಪ್ರಜ್ಞೆ ತಪ್ಪಿ ಡೆಂಗ್ಯೂ ಜ್ವರ ಇಂದ ಬಳಲಿದ್ದು ಇಂದಿಗೂ ಮರೆಯಲು ಸಾಧ್ಯವೇ ಇಲ್ಲ

ಇನ್ನು ನಾನು ಮೇಕಪ್ ಮಾಡಿಸಿಕೊಳ್ಳುವುದು ಇಲ್ಲ ನನ್ನದು ಸಹಜ ನಟನೆ ಅಗತ್ಯ ಇದೆ ಎಂದರೆ ಮಾತ್ರ ನಾನು ಮೇಕಪ್ ಮಾಡಿಕೊಳ್ಳುವುದು ಎಂದು ಕೂಡ ಹೇಳಿದ್ದಾರೆ ಇನ್ನೂ ಎಳೆಯರು ನಾವು ಗೆಳೆಯರು ತಾರಕ್ ಹೀಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಸಿನಿಮಾ ಅಲ್ಲಿ ನಟಿಸಿದ್ದೇನೆ ಎಂದು ಹೇಳಿದ್ದಾರೆ ಇಂತಹ ಒಂದು ಪ್ರತಿಭೆ ಇನ್ನೂ ಎತ್ತರಕ್ಕೆ ಬೆಳೆಯಲಿ ಒಳ್ಳೆಯ ಯಶಸ್ಸು ಆತನ ಪಾಲಿಗೆ ಬರಲಿ ಎಂದು ಹಾರೈಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!