ಕೊರೋನ ಎಂಬ ಮಹಾಮಾರಿ ಸತತ ಮೂರು ವರ್ಷದಿಂದ ನಮ್ಮೆಲ್ಲರನ್ನು ಬಿಡದೆ ಕಾಡುತ್ತಿದೆ. ಈ ಸಮಯದಲ್ಲಿ ಅದೆಷ್ಟೊ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಆದರೆ ಈ ಸಮಯದಲ್ಲಿ ಟ್ಯಾಬ್ಲೆಟ್ ಕಂಪನಿ ಹಾಗೂ ಮೆಡಿಕಲ್ ಶಾಪ್ ಗಳು ಹಿಂದೆಂದಿಗಿಂತಲೂ ಹೆಚ್ಚಿನ ಲಾಭ ಗಳಿಸಿದೆ. ಮಾತ್ರೆಗಳಲ್ಲಿ ಡೊಲೊ 650 ಮಾತ್ರೆ ಅತಿಹೆಚ್ಚು ಮಾರಾಟವಾಗುತ್ತಿದೆ ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ಬಾಯಿಯಲ್ಲಿ ಹರಿದಾಡುತ್ತಿರುವ ವಿಷಯ ಏನೆಂದರೆ ಅದು ಕೊರೋನ ಸೋಂಕಿನ ವಿಷಯ. ಕೊರೋನ ಮಹಾಮಾರಿ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಬಂದು ಹೋಗಿದೆ ಎಂದು ಹೇಳಬಹುದು. ಕಳೆದ ಮೂರೂ ವರ್ಷದ ಹಿಂದೆ ಈ ಭೂಮಿಯ ಮೇಲೆ ಕಾಣಿಸಿಕೊಂಡ ಕೊರೋನ ಮಹಾಮಾರಿ ಕೋಟ್ಯಾಂತರ ಜನರ ಪ್ರಾಣವನ್ನು ಬಲಿ ತೆಗೆದುಕೊಳ್ಳುವುದರ ಮೂಲಕ ಅದೆಷ್ಟೊ ಕುಟುಂಬದವರನ್ನು ಒಂಟಿಮಾಡಿದೆ.
ಕೊರೋನ ಮಹಾಮಾರಿ ಕಾಣಿಸಿಕೊಂಡ ನಂತರ ಹೆಚ್ಚಿನ ಜನರ ಬಾಯಲ್ಲಿ ಕೇಳಿಬಂದ ಮಾತ್ರೆಯ ಹೆಸರು ಡೋಲೊ 650 ಮಾತ್ರೆ. ಡೋಲೊ 650 ಕೊರೋನ ಮಹಾಮಾರಿ ಸೋಂಕಿನಿಂದ ಜನರ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿತು. ಇನ್ನು ಹೆಚ್ಚಿನದಾಗಿ ಹೇಳಬೇಕೆಂದರೆ ವೈದ್ಯರು ಕೊರೋನ ರೋಗಿಗಳಿಗೆ ಶಿಫಾರಸ್ಸು ಮಾಡುತ್ತಿದ್ದ ಮಾತ್ರೆ ಕೂಡ ಡೋಲೊ 650 ಆಗಿದೆ. ಹೆಚ್ಚಿನ ಜನರು ಈ ಮಾತ್ರೆಯನ್ನು ಸೇವನೆ ಮಾಡಿದ್ದಾರೆ. ಕೊರೋನ ಸೋಂಕಿನ ಕಾರಣ ಈ ಮಾತ್ರೆ ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಕೂಡ ಹೆಚ್ಚು ಮಾರಾಟ ಆಗಿದ್ದು ಕೊರೋನ ಸಮಯದಲ್ಲಿ ಈ ಡೋಲೊ 650 ಮಾತ್ರೆಯ ಕಂಪನಿಗೆ ಆದ ಲಾಭವನ್ನು ಕೇಳಿದರೆ ಶಾಕ್ ಆಗುತ್ತದೆ. ಹಾಗಾದರೆ ಡೋಲೋ 650 ಮಾತ್ರೆ ಕಂಪನಿಗೆ ಆದ ಲಾಭ ಎಷ್ಟು ಎನ್ನುವುದನ್ನು ನೋಡೋಣ.
ಕೊರೋನ ಮಹಾಮಾರಿ ತಡೆಗಟ್ಟಲು ದೇಶದಲ್ಲಿ ವಿವಿಧ ಮಾತ್ರೆಗಳು ಬಂದಿದ್ದವು ಆದರೆ ಡೋಲೊ 650 ಅವೆಲ್ಲವನ್ನು ಹಿಂದಿಕ್ಕಿ ದೊಡ್ಡ ದಾಖಲೆಯನ್ನೆ ಮಾಡಿದೆ. 2020ರ ಜನವರಿಯಿಂದ ಈವರೆಗೂ ದಾಖಲೆಯ ಮಾರಾಟ ಕಂಡಿದ್ದು ಬರೋಬ್ಬರಿ 560 ಕೋಟಿಗೂ ಹೆಚ್ಚಿನ ಆದಾಯ ಕಂಡಿದೆ. ಕೊರೋನ ಆರಂಭಕ್ಕೂ ಮುನ್ನದಿಂದಲೆ ವಿವಿಧ ರೋಗ ಲಕ್ಷಣಗಳಿಗೆ ವೈದ್ಯರು ಡೋಲೊ 650 ಶಿಫಾರಸು ಮಾಡುತ್ತಿದ್ದರು. ಇದೀಗ ಕೊರೋನಾ ಕಾರಣದಿಂದ ಅತಿ ಹೆಚ್ಚು ಮಾತ್ರೆಗಳು ಮಾರಾಟವಾಗಿದ್ದು ಕಂಪನಿಗೆ ಎಂದು ಆಗದ ಲಾಭ ಈಗ ಆಗಿದೆ.
ಇನ್ನು ಪ್ಯಾರಾಸಿಟಮೊಲ್ ವಿಭಾಗದಲ್ಲಿ ಈಗಾಗಲೇ 40ಕ್ಕೂ ಹೆಚ್ಚು ವಿವಿಧ ಕಂಪನಿಗಳ ಮಾತ್ರೆಗಳು ಲಭ್ಯವಿದೆ. ಅವೆಲ್ಲವನ್ನೂ ಡೋಲೊ 650 ಹಿಂದಿಕ್ಕಿದೆ. ಬಹುಶಃ ಡೋಲೊ 650 ಮಾತ್ರೆಯನ್ನು ತೆಗೆದುಕೊಳ್ಳದವರೆ ಇಲ್ಲ ಇದೀಗ ಮತ್ತೆ ಎಲ್ಲಾ ಕಡೆ ತಂಡಿ, ಜ್ವರದ ಮೂಲಕ ಕೊರೋನ ವೈರಸ್ ಕಾಣಿಸಿಕೊಂಡಿದ್ದು ಎಲ್ಲರೂ ಡೋಲೊ 650 ಮಾತ್ರೆಯ ಮೊರೆ ಹೋಗುತ್ತಾರೆ. ಒಟ್ಟಾರೆಯಾಗಿ ಈ ಮಾತ್ರೆಯ ಕಂಪನಿ ಸಾಕಷ್ಟು ಪ್ರಮಾಣದಲ್ಲಿ ಲಾಭ ಗಳಿಸಿದೆ.