ಈಗಿನ ಡಿಜಿಟಲ್ ಯುಗದಲ್ಲಿ ಯಾರು ಯಾವಾಗ ಬೇಕಾದರೂ ಫೇಮಸ್ ಆಗಬಹುದು, ಯಾರ ಅದೃಷ್ಟ ಯಾವಾಗ ಬೇಕಾದರೂ ಬದಲಾಗಬಹುದು. ಇದಕ್ಕೆ ಒಂದು ಉದಾಹರಣೆ ಶಶಿರೇಖಾ ಎಂದರೆ ತಪ್ಪಲ್ಲ. ರಾಜ್ಯದಲ್ಲಿ ಕೋವಿಡ್ ಇಂದ ಜನರು ಕಷ್ಟಪಡುತ್ತಿದ್ದ ಸಮಯದಲ್ಲಿ, ಮಾಧ್ಯಮದ ಎದುರು ಶಶಿರೇಖಾ ನೀಡಿದ್ದ ಒಂದು ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕರೊನಾ ಬಂದಿರೋರಿಗೆ ಕೊಡೋದು Dolo650 ಮಾತ್ರೆ, ಬಿಸಿ ರಾಗಿ ಹಿಟ್ಟು ಅಷ್ಟೇ, ಇನ್ನೇನು ಕೊಡಲ್ಲಾ ಅಂದಿದ್ದರು.
ಹಳ್ಳಿ ಶೈಲಿಯಲ್ಲಿ ಶಶಿರೇಖಾ ಹೇಳಿದ್ದ ಈ ಮಾತುಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಈ ವಿಡಿಯೋ ಎಲ್ಲೆಡೆ ವೈರಲ್ ಆದ ನಂತರ ಶಶಿರೇಖಾ ಎಲ್ಲೇ ಹೋದರು ಕೂಡ ಆಕೆಯನ್ನು dolo650 ಎಂದೇ ಜನರು ಗುರುತಿಸುತ್ತಿದ್ದರು. ಇದರಿಂದ ಆಕೆಗೆ ಆರಂಭದಲ್ಲಿ ಅಸಮಾಧಾನ ಕೂಡ ಆಗಿತ್ತು. ಆದರೆ ಸೋಷಿಯಲ್ ಮೀಡಿಯಾ ಇಂದ ಸಿಕ್ಕ ಜನಪ್ರಿಯತೆಯನ್ನೇ ಬಳಸಿಕೊಂಡ ಶಶಿರೇಖಾ, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಗೆ ಬಂದು, 1.75 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.
ಇದೆಲ್ಲವೂ ಒಂದು ಕಡೆಯಾದರೆ ಈಗ ಶಶಿರೇಖಾ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಎನ್ನುವುದು ಆಶ್ಚರ್ಯ ಅನ್ನಿಸುವಂಥ ಸುದ್ದಿ ಆಗಿದೆ. ಹೌದು, ಶಶಿರೇಖಾ ಅಭಿನಯಿಸುತ್ತಿರುವ ಮೊದಲ ಸಿನಿಮಾ ಹೆಸರು ಸೌಜನ್ಯ, ಈ ಸಿನಿಮಾವನ್ನು ಕೊಳ್ಳೇಗಾಲ ಮೂಲದ ಚೇತನ್ ದೇವರಾಜ್ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಗೆ ಶಶಿರೇಖಾ ನಾಯಕಿಯಾಗ ಆಯ್ಕೆಯಾಗಿದ್ದಾರೆ..
ಈ ಸಿನಿಮಾದ ಫಸ್ಟ್ ಪೋಸ್ಟರ್ ಮೈಸೂರಿನ ಪತ್ರಿಕಾ ಕಚೇರಿಯಲ್ಲಿ ಬಿಡುಗಡೆ ಆಗಿದೆ ಎಂದು ಮಾಹಿತಿ ಸಿಕ್ಕಿದೆ. ಪ್ರಸ್ತುತ ಸಿಕ್ಕಿರುವ ಮಾಹಿತಿಯ ಅನುಸಾರ ಇದೊಂದು ಸೂಕ್ಷ್ಮವಾದ ಕತೆ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ ಶಶಿರೇಖಾ ಈ ರೀತಿ ಹೀರೋಯಿನ್ ಆಗಿರೋದು ಎಲ್ಲರಿಗೂ ಆಶ್ಚರ್ಯ ತಂದಿರೋದಂತೂ ಸತ್ಯ ಆಗಿದೆ.