Home Loan: ಗೃಹ ಸಾಲವನ್ನು ಪಡೆಯಲು ಬೇಕಾಗುವ ದಾಖಲೆಗಳು ಯಾವುವು ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ಗೃಹ ಸಾಲಗಳೊಂದಿಗೆ ನೀವು ಕೈಗೆಟುಕುವ ಬಡ್ಡಿ ದರದಲ್ಲಿ ಹಾಗೂ ದೀರ್ಘಾವಧಿಯವರೆಗೆ ಹೆಚ್ಚಿನ ಮೌಲ್ಯದ ಹಣವನ್ನು ಪಡೆದುಕೊಳ್ಳಬಹುದು. ಗ್ರಹ ಸಾಲಗಳು ಆಸ್ತಿಯನ್ನು ಆಧಾರವಾಗಿ ಅಡ ಇಟ್ಟು ರಿಯಲ್ ಎಸ್ಟೇಟ್ ಖರೀದಿ ಮಾಡಲು ಪಡೆಯುವಂತಹ ಸುರಕ್ಷಿತವಾದ ಸಾಲಗಳಾಗಿವೆ, ಇಂತಹ ಸಾಲಗಳನ್ನು ಮಾಸಿಕ ರೂಪದಲ್ಲಿ ಮರುಪಾವತಿ ಮಾಡಲಾಗುತ್ತದೆ ಸಾಲಗಾರರು ಮರುಪಾವತಿಯ ನಂತರ ಆಸ್ತಿಯ ಶೀರ್ಷಿಕೆಯನ್ನ ಮರಳಿ ಪಡೆಯುತ್ತಾನೆ.
ಗೃಹ ಸಾಲವನ್ನು ಪಡೆಯಲು ಹಲವಾರು ನಿಯಮಗಳು ಇರುತ್ತವೆ. ಬ್ಯಾಂಕುಗಳು ಸಾಲದ ಮೊತ್ತ ಮತ್ತು ಬಡ್ಡಿ ದರವನ್ನ ನಿಗದಿ ಮಾಡಲು ಕೆಲವೊಂದು ಮಾನದಂಡಗಳನ್ನ ಹಾಕುತ್ತರೆ. ವೇತನದಾರ ಅಥವಾ ಸ್ವಯಂ ಉದ್ಯೋಗಿಯಾಗಿರುವ ವ್ಯಕ್ತಿಗೆ, ಕಂಪನಿಗಳಿಗೆ, ಇತರೆ ಸಂಸ್ಥೆಗಳಿಗೆ ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಇಂತಹ ಸಾಲದ ಮೊತ್ತವು ಕೆಲವೊಂದು ಅಂಶಗಳ ಮೇಲೆ ಆಧಾರಿತವಾಗಿರುತ್ತವೆ. ಉದಾಹರಣೆಗೆ ಸೈಟು ಅಥವಾ ಮನೆ ನಿರ್ಮಾಣ ಸಾಲ ಇಂತಹ ಸಾಲವನ್ನು ಪಡೆಯಲು ಅರ್ಜಿದಾರನು ಕೆಲವೊಂದು ಮಾನದಂಡಗಳನ್ನು ಪೂರೈಸಬೇಕಾಗುತ್ತದೆ ಅವುಗಳು ಏನು ಎಂಬುದನ್ನು ಈ ಕೆಳಗೆ ತಿಳಿಯೋಣ.
ಸಾಲ ಪಡೆಯಲು ವ್ಯಕ್ತಿಗೆ 18ರಿಂದ 65 ವರ್ಷಗಳ ವಯೋಮಿತಿ ಇರುತ್ತದೆ. ಇದರ ಜೊತೆಗೆ ಆತ ಭಾರತೀಯ ನಿವಾಸಿಯಾಗಿರಬೇಕು ಅಷ್ಟೇ ಅಲ್ಲದೆ ಸ್ವಯಂ ಉದ್ಯೋಗಿ ಅಥವಾ ಸಂಬಳ ಪಡೆಯುವಂತಹ ವ್ಯಕ್ತಿ ಆಗಿರಬೇಕು ಆತನ ಕ್ರೆಡಿಟ್ ಸ್ಕೋರ್ 750ಕ್ಕಿಂತ ಹೆಚ್ಚಾಗಿರಬೇಕು, ತಿಂಗಳಿಗೆ 25,000 ಆದಾಯವನ್ನು ಹೊಂದಿರಬೇಕು.
ಬೇಕಾಗುವ ಅವಶ್ಯಕತೆಗಳು:
ಗೃಹ ಸಾಲ ಪಡೆಯಲು ವಯಸ್ಸು, ವಿಳಾಸ, ಆದಾಯ, ಉದ್ಯೋಗ, ಆದಾಯ ತೆರಿಗೆ ಇತ್ಯಾದಿಗಳಂತಹ ವಿವರಗಳು ಬೇಕಾಗುತ್ತವೆ. ಒಂದು ಬಾರಿ ಪ್ರಪಾರ್ಟಿ ಖರೀದಿ ನಿರ್ಧಾರ ಅಂತ್ಯಗೊಳಿಸಿದ ಬಳಿಕ ಬ್ಯಾಂಕು ಅಥವಾ ಗೃಹ ಹಣಕಾಸು ಕಂಪನಿಗಳಿಗೆ ಅರ್ಜಿ ಹಾಕಬಹುದು ಆಗ ಅರ್ಜಿದಾರ ಮತ್ತು ಸಹ ಅರ್ಜಿದಾರನ ಭಾವಚಿತ್ರಗಳು ಪ್ಯಾನ್ ಮತ್ತು ಐಡಿ ಪ್ರೂಫ್ ಪೆ ಸ್ಲಿಪ್ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಇತ್ಯಾದಿಗಳನ್ನು ನೀಡಬೇಕಾಗುತ್ತದೆ.
ಒಂದು ವೇಳೆ ಅರ್ಜಿದಾರರನ್ನು ಸ್ವಯಂ ಉದ್ಯೋಗಿಯಾಗಿದ್ದರೆ ಉದ್ಯಮದ ಸ್ವರೂಪ ಉದ್ಯಮ ಆರಂಭಿಸಿದ ವರ್ಷ ಆತನ ಬ್ಯಾಂಕ್ ವ್ಯವಹಾರ ಆತನ ಆದಾಯ ಪ್ರಮಾಣ ಪತ್ರ ತೆರಿಗೆ ಸಲ್ಲಿಸಿದ ವಿವರ ಪ್ರಾಫಿಟ್ ಅಂಡ್ ಲಾಸ್ ಅಕೌಂಟ್ ವಿವರ ಇತ್ಯಾದಿಗಳನ್ನು ನೀಡಬೇಕಾಗುತ್ತದೆ. ಇದನ್ನೂ ಓದಿ: Excise Department Recruitment 2023: SSLC, ಪಿಯುಸಿ, ಹಾಗೂ ಡಿಗ್ರಿ ಆದವರಿಗೆ, ಅಬಕಾರಿ ಇಲಾಖೆಯಲ್ಲಿ ಉದ್ಯೋಗಾವಕಾಶ ಸಂಬಳ 30 ಸಾವಿರ