ಐಎಎಸ್ ಅಧಿಕಾರಿ ರವಿ ಅವರನ್ನು ಕಳೆದುಕೊಂಡ ನಂತರ ದುಃಖ, ಕಷ್ಟಗಳನ್ನು ಎದುರಿಸಿದ ಅವರ ಪತ್ನಿ ಕುಸುಮ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆಯದೆ ಇದ್ದರೂ ಉತ್ತಮ ಸ್ಪರ್ಧಿಯಾಗಿದ್ದರು. ಚುನಾವಣೆ ನಂತರ ಅವರು ಹೇಳಿದ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ಜನಾದೇಶಕ್ಕೆ ತಲೆ ಬಾಗುವುದು ಎಲ್ಲರ ಕರ್ತವ್ಯ. ಈಗ ಕೊಟ್ಟಿರುವ ಜನಾದೇಶಕ್ಕೆ ನಾನು ತಲೆ ಬಾಗುತ್ತೇನೆ ಎಂದು ಕುಸುಮ ರವಿ ಅವರು ಹೇಳಿದರು. ಜೀವನ ಅಂದಮೇಲೆ ಕಷ್ಟ- ಸುಖಗಳು ಇದ್ದಿದ್ದೆ. ಜೀವನದಲ್ಲಿ ಸೋತು ಗೆದ್ದಿರುವ ಹೆಣ್ಣುಮಗಳು ನಾನು ಎಂದು ಅವರು ಹೇಳಿಕೊಂಡರು. ಇವತ್ತಿನ ಚುನಾವಣಾ ರಂಗದಲ್ಲಿ ಸೋತಿರಬಹುದು ಆದರೆ ನಾಳೆ ಒಂದಿನ ಗೆದ್ದೆ ಗೆಲ್ಲುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು. ಅಲ್ಲದೇ ಅನಿರೀಕ್ಷಿತವಾಗಿ ಬಂದಿರುವ ಚುನಾವಣೆಯಲ್ಲಿ ಬಹಳ ಕಡಿಮೆ ಸಮಯ ಇದ್ದರೂ ಹಗಲು ರಾತ್ರಿ ಇಲ್ಲದೆ ಪಕ್ಷದ ಮುಖಂಡರು, ಕಾರ್ಯಕರ್ತರು ಕೆಲಸ ಮಾಡಿದ್ದಾರೆ ನಿಮಗೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದು ಅವರು ಕೆಲಸ ಮಾಡಿದ ಎಲ್ಲರಿಗೂ ಈ ಮೂಲಕ ಧನ್ಯವಾದ ತಿಳಿಸಿದರು.
ನಿಮ್ಮ ಮನೆ ಬಾಗಿಲಿಗೆ ಮತ ಯಾಚನೆ ಮಾಡಲು ಬಂದಾಗ ನೀವು ತೋರಿದ ಪ್ರೀತಿ, ವಿಶ್ವಾಸ ಹಾಗೂ ನಿಮ್ಮ ಆಶೀರ್ವಾದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ನಿಮ್ಮ ಪ್ರೀತಿ, ವಿಶ್ವಾಸ, ಆಶೀರ್ವಾದ ಹೀಗೆಯೇ ನನ್ನ ಮೇಲೆ ಸದಾ ಇರಲಿ, ನಿಮ್ಮೊಟ್ಟಿಗೆ ನಾನು ಸದಾ ಇರುತ್ತೇನೆ, ನಿಮ್ಮ ಹೋರಾಟಗಳಲ್ಲಿ ನಾನು ಭಾಗಿಯಾಗುತ್ತೇನೆ, ನಿಮ್ಮ ಎಲ್ಲಾ ಕೆಲಸಗಳಲ್ಲಿ ನಾನು ನಿಮ್ಮ ಜೊತೆ ಕೈ ಜೋಡಿಸುತ್ತೇನೆ ಎಂದು ಕುಸುಮ ರವಿ ಅವರು ಹೇಳಿದರು. ಅವರ ಮುಂದಿನ ದಿನಗಳು ಅವರಿಗೆ ಸಂತೋಷ ಕೊಡಲಿ ಹಾಗೂ ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲವು ಪಡೆಯಲಿ ಎಂದು ಆಶಿಸೋಣ.