2024 ಆಗಸ್ಟ್ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಆಗಸ್ಟ್ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಧನಸ್ಸು ರಾಶಿಯ ಆಗಸ್ಟ್ ತಿಂಗಳ ರಾಶಿ ಭವಿಷ್ಯ ಹಾಗೂ ಮುಂಬರುವ ಶ್ರಾವಣ ಮಾಸದ ಮಹತ್ವದ ಬಗ್ಗೆ ಈ ಲೇಖನದಲ್ಲಿ ನೋಡೋಣ
ಮುಂಬರುವ ಆಗಸ್ಟ್ 5ನೆ ತಾರೀಖಿನಿಂದ ಶುಭ ಶ್ರಾವಣ ಮಾಸ ಪ್ರಾರಂಭವಾಗುತ್ತದೆ. ಶ್ರಾವಣ ಮಾಸ ಪರಮೇಶ್ವರನ ಪ್ರಿಯವಾದ ಮಾಸವಾಗಿದೆ ಗೌರಿ ಸಮೇತ ಈಶ್ವರನು ಭೂಮಿಗೆ ಬಂದು ಈ ಸಮಯದಲ್ಲಿ ನೆಲೆಸುತ್ತಾನೆ. ಈ ಮಾಸದಲ್ಲಿ ವಿವಾಹಿತ ಸ್ತ್ರೀಯರು ತಮ್ಮ ತಾಳಿ ವೃದ್ಧಿಗಾಗಿ ಹಾಗೂ ಮನೆಯ ಅಭಿವೃದ್ಧಿಗಾಗಿ ಮಂಗಳಗೌರಿ ವ್ರತವನ್ನು ಮಾಡುತ್ತಾರೆ. ಈ ತಿಂಗಳಿನ ಆರನೆ ತಾರೀಖಿನ ಮಂಗಳವಾರದಂದು ಮಂಗಳ ಗೌರಿ ವ್ರತ ಮಾಡಬಹುದಾಗಿದೆ ಹಾಗೂ ಅದೆ ತಿಂಗಳಿನ 13 ನೇ ತಾರೀಖು 20ನೆ ತಾರೀಖು 27ನೆ ತಾರೀಖಿನಂದು ಮಂಗಳಗೌರಿ ವ್ರತವನ್ನು ಮಾಡಬಹುದಾಗಿದೆ, ಮಂಗಳ ಗೌರಿ ವ್ರತ ಮಾಡುವುದರಿಂದ ಮನೆಯಲ್ಲಿ ಅಷ್ಟಲಕ್ಷ್ಮಿಯರು ನೆಲೆಸುತ್ತಾರೆ.
ಶ್ರಾವಣ ಮಾಸದ ಪ್ರತಿ ಶುಕ್ರವಾರದಂದು ಮಹಾಲಕ್ಷ್ಮೀ ಮನೆಯನ್ನು ಅಭಿವೃದ್ಧಿ ಮಾಡಲೆಂದು ಲಕ್ಷ್ಮೀ ಪೂಜೆಯನ್ನು ಮಾಡಲಾಗುತ್ತದೆ. ಆಗಸ್ಟ್ 16ನೆ ತಾರೀಖಿನಂದು ವರಮಹಾಲಕ್ಷ್ಮೀ ವ್ರತ ಮಾಡಬಹುದಾಗಿದೆ ವರಮಹಾಲಕ್ಷ್ಮೀ ವ್ರತ ಮಾಡುವಾಗ ಲಕ್ಷ್ಮೀ ಪೂಜೆಯನ್ನು ಇಷ್ಟ ಬಂದ ಸಮಯದಲ್ಲಿ ಮಾಡಬಾರದು ಸಂಧ್ಯಾ ಕಾಲದಲ್ಲಿ ಮಾಡಬೇಕು. ಹುಣ್ಣಿಮೆಗಿಂತ ಮೊದಲು ಬರುವ ಶುಕ್ರವಾರದ ದಿನದಂದು ಮಹಾಲಕ್ಷ್ಮೀ ವ್ರತ ಮಾಡಬೇಕು, ಶುಕ್ರ ಗ್ರಹದ ಕಿರಣಗಳು ನೇರವಾಗಿ ಭೂಮಿಗೆ ತಲುಪುತ್ತದೆ ಹೀಗಾಗಿ ಈ ದಿನ ಪೂಜೆ ಮಾಡುವುದರಿಂದ ಒಳ್ಳೆಯ ಫಲ ದೊರೆಯುತ್ತದೆ.
ವರಮಹಾಲಕ್ಷ್ಮಿ ಹಬ್ಬ ಎಂದು ತಿಳಿದು ಆಚರಿಸುತ್ತಾರೆ ಆದರೆ ಅದು ಹಬ್ಬವಲ್ಲ ಅದೊಂದು ವೃತಾಚರಣೆ ಶ್ರಾವಣ ಮಾಸದ ಶನಿವಾರದಂದು ವಿಷ್ಣು ದೇವರ ಆರಾಧನೆ ಮಾಡುವ ಜೊತೆಗೆ ಈಶ್ವರನ ದೇವಾಲಯಕ್ಕೆ ಹೋಗಿ ದರ್ಶನ ಮಾಡಬೇಕು. ಗಂಡ ಹೆಂಡತಿಯ ನಡುವೆ ಸಮಸ್ಯೆ ಇದ್ದರೆ ಮಂಗಳಗೌರಿ ವ್ರತವನ್ನು ಹಣಕಾಸಿನ ಸಮಸ್ಯೆಯಿದ್ದರೆ ವರಮಹಾಲಕ್ಷ್ಮೀ ವ್ರತ ಮಾಡುವುದರಿಂದ ಒಳ್ಳೆಯದಾಗುತ್ತದೆ. ನಾಗದೋಷವಿದ್ದರೆ ಶ್ರಾವಣ ಮಾಸದಲ್ಲಿ ನಾಗರ ಪಂಚಮಿ ಹಬ್ಬವಿದೆ ನಾಗರ ಆರಾಧನೆ ಮಾಡಬೇಕು.
ಆಗಸ್ಟ್ 17 ರಂದು ಸಿಂಹ ರಾಶಿಗೆ ರವಿ ಪ್ರವೇಶ ಮಾಡುತ್ತಾನೆ, 22 ನೆ ತಾರೀಖು ಬುಧನು ಕರ್ಕಾಟಕ ರಾಶಿಗೆ, 24 ನೆ ತಾರೀಖು ಶುಕ್ರನು ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಾನೆ 26ನೆ ತಾರೀಖು ಮಿಥುನ ರಾಶಿಗೆ ಕುಜ ಪ್ರವೇಶ ಮಾಡುತ್ತಾನೆ. ಧನಸ್ಸು ರಾಶಿಯವರಿಗೆ ಈ ತಿಂಗಳಿನಲ್ಲಿ ಧನ ಲಾಭವಿದೆ, ಆದಾಯದಲ್ಲಿ ಪ್ರಗತಿ ಕಾಣುತ್ತಾರೆ, ಸ್ವಂತ ಪ್ರಯತ್ನ ಮಾಡುವುದರಿಂದ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಮನಸ್ಸಿಗೆ ಖುಷಿ ನೀಡುವ ಅಂಶಗಳನ್ನು ನೋಡಬಹುದು. ವ್ಯಾಪಾರ ವ್ಯವಹಾರದಲ್ಲಿ ದೊಡ್ಡ ಮಟ್ಟದ ಲಾಭ ಪಡೆಯಬಹುದು. ಕಿರಾಣಿ ಅಂಗಡಿ ನಡೆಸುತ್ತಿರುವವರಿಗೆ, ರೈತಾಪಿ ವರ್ಗದವರಿಗೆ ಕಬ್ಬು ಬೆಳೆಗಾರರಿಗೆ ರೇಷ್ಮೆ ಬೆಳೆಗಾರರಿಗೆ ತರಕಾರಿ ಬೆಳೆಗಾರರಿಗೆ ದೊಡ್ಡ ಮಟ್ಟದ ಲಾಭವಾಗುತ್ತದೆ.
ಸರ್ಕಾರಿ ಉದ್ಯೋಗಿಗಳಿಗೆ ಕೀರ್ತಿ ಪದವಿ ಪ್ರತಿಷ್ಟೆ ಸಿಗುತ್ತದೆ. ಧನಸ್ಸು ರಾಶಿಯ ಕಲಾವಿದರಿಗೆ ಅದರಲ್ಲೂ ಕವಯತ್ರಿಗಳಿಗೆ ಸನ್ಮಾನಗಳು, ಹೆಸರು ಸಿಗುತ್ತದೆ. ಆಗಸ್ಟ್ ತಿಂಗಳಲ್ಲಿ ಧನಸ್ಸು ರಾಶಿಯ ವಿದ್ಯಾರ್ಥಿಗಳು ಪ್ರಗತಿ ಕಾಣುತ್ತಾರೆ. ಬೇರೆ ದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಬೇಕೆಂದು ಅಂದುಕೊಂಡಿರುವವರಿಗೆ ಉತ್ತಮ ಸಮಯವಾಗಿದೆ. ಆಗಸ್ಟ್ ತಿಂಗಳಿನಲ್ಲಿ ಧನಸ್ಸು ರಾಶಿಯವರು ಆಭರಣಗಳನ್ನು ಕೊಂಡುಕೊಳ್ಳುವ ಯೋಗವನ್ನು ಹೊಂದಿದ್ದಾರೆ. ಈ ರಾಶಿಯವರು ಮನೆ ನಿರ್ಮಾಣ ಮಾಡುತ್ತಿದ್ದರೆ ಅದು ಯಶಸ್ವಿಯಾಗುತ್ತದೆ. ಧನಸ್ಸು ರಾಶಿಯವರಿಗೆ 2024 ಆಗಸ್ಟ್ ತಿಂಗಳು ಶುಭ ಫಲ ನೀಡುತ್ತದೆ.
ಜಾತಕವನ್ನು ನುರಿತ ತಜ್ಞರ ಬಳಿ ಪರಿಶೀಲಿಸಿದಾಗ ಹೆಚ್ಚಿನ ವಿವರಗಳು ತಿಳಿಯುತ್ತದೆ. ಸಾಮಾಜಿಕ ಪರಿಹಾರ ಗಿಡಗಳನ್ನು ನೆಟ್ಟು ಬೆಳೆಸಬೇಕು ಮನೆಯ ಮುಂದೆ ಟೆರೇಸ್ ಇದ್ದರೆ ಮೇಲೆ ಕುಂಡಗಳಲ್ಲಿ ನೀರನ್ನು ಇಡಬೇಕು, ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ನೀಡಬೇಕು. ಧನಸ್ಸು ರಾಶಿಯವರು ಮಹಾಲಕ್ಷ್ಮಿ ಅಷ್ಟಕಂ ಸ್ತೋತ್ರವನ್ನು ಪ್ರತಿದಿನ ಪಠಿಸಬೇಕು. ಆಗಸ್ಟ್ ತಿಂಗಳಲ್ಲಿ ಧನಸು ರಾಶಿಯವರಿಗೆ ಶುಭ ಕೊಡುವ ದಿನಾಂಕಗಳೆಂದರೆ 1,9,10,23,31 ಆಗಿವೆ ಈ ಮಾಹಿತಿಯನ್ನು ತಪ್ಪದೆ ಧನಸ್ಸು ರಾಶಿಯವರಿಗೆ ತಿಳಿಸಿ.
ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513