ಅಕ್ಟೋಬರ ತಿಂಗಳಿನಲ್ಲಿ ಧನು ರಾಶಿಯವರ ಆರೋಗ್ಯ, ಶಿಕ್ಷಣ, ವೃತ್ತಿಜೀವನ, ಹಣಕಾಸು ಇನ್ನಿತರ ವಿಷಯದ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಧನು ರಾಶಿಯು ರಾಶಿ ಚಕ್ರದ 9 ನೇ ಜ್ಯೋತಿಷ್ಯ ಚಿಹ್ನೆಯಾಗಿದೆ. ಇದು ಮೂಲಾ ನಕ್ಷತ್ರದ ನಾಲ್ಕು ಪಾದಗಳು ಪೂರ್ವಶಾಢ ನಕ್ಷತ್ರದ ನಾಲ್ಕು ಪಾದಗಳು ಉತ್ತರಾಶಾಢ ನಕ್ಷತ್ರದ ಒಂದನೇ ಪಾದದ ಅಡಿಯಲ್ಲಿ ಜನಿಸಿದವರು ಧನು ರಾಶಿಯಲ್ಲಿ ಬರುತ್ತಾರೆ. ಈ ರಾಶಿಯ ಅಧಿಪತಿ ಗುರು ಕುಟುಂಬ ಸಂಬಂಧದ ಏರಿಳಿತದೊಂದಿಗೆ ಈ ತಿಂಗಳು ಸಾಗಲಿದೆ. ಈ ತಿಂಗಳು ಮನೆಯಲ್ಲಿ ಹಬ್ಬದ ಸಡಗರ ತುಂಬಿರುತ್ತದೆ. ಮಕ್ಕಳ ಹಾಗೂ ಪತ್ನಿಯ ಹುಟ್ಟುಹಬ್ಬ ಬರುವುದರಿಂದ ಕುಟುಂಬದಲ್ಲಿ ಸಡಗರವಿರುತ್ತದೆ. ಈ ತಿಂಗಳ ಕೊನೆಯ ವಾರದಲ್ಲಿ ಆಸ್ತಿಗೆ ಸಂಬಂಧಿಸಿ ಸಹೋದರರೊಂದಿಗೆ ಮಾತುಕತೆ ಮಾಡಬಹುದು ಇದರಿಂದ ಕುಟುಂಬದ ಮೇಲೆ ಒತ್ತಡ ಬೀಳಬಹುದು. ಈ ತಿಂಗಳ ಶುರುವಿನಲ್ಲಿ ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಈ ರಾಶಿಯ ಮಹಿಳೆಯರ ದೇಹದಲ್ಲಿ ಆಂತರಿಕ ಸಮಸ್ಯೆ ಉಂಟಾಗುವುದರಿಂದ ಸ್ವಲ್ಪ ಹಣ ಖರ್ಚಾಗುತ್ತದೆ. ಮನೆಯ ಹಿರಿಯರ ಆರೋಗ್ಯದಲ್ಲಿ ಏರುಪೇರು ಕಾಣುತ್ತದೆ. ಗುರುವಿನ ಸಕಾರಾತ್ಮಕ ಚಲನೆಯಿಂದ ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು. ಹೊಸ ವಿಶ್ವವಿದ್ಯಾಲಯಗಳಲ್ಲಿ ಸೀಟು ಪಡೆಯುತ್ತಿರುವವರಿಗೆ ಉತ್ತಮ ಅವಕಾಶವಿದೆ. ನಿಮ್ಮ ಶ್ರಮಕ್ಕೆ ಉತ್ತಮ ಫಲಿತಾಂಶ ದೊರೆಯಲಿದೆ.

ಈ ತಿಂಗಳ ಒಳಗಾಗಿ ಗೊಂದಲ ಉಂಟಾಗುತ್ತದೆ ಒತ್ತಡಕ್ಕೆ ಒಳಗಾಗುವಿರಿ ವಿವೇಚನೆಯಿಂದ ಮುನ್ನಡೆಯುವುದರಿಂದ ಪರಿಹಾರ ಸಿಗುವುದು. ವೃತ್ತಿ ಮತ್ತು ವ್ಯವಹಾರ ತಿಂಗಳ ಅರ್ಧದಲ್ಲಿ ಹೊಸ ಎತ್ತರವನ್ನು ತಲುಪುತ್ತದೆ. ನಿರ್ವಹಣೆ, ವಾಣಿಜ್ಯ, ನಾಯಕತ್ವ, ತರಬೇತಿ ಮುಂತಾದ ಕ್ಷೇತ್ರಗಳಿಗೆ ಉತ್ತಮ ಬೆಂಬಲ ಪಡೆಯಬಹುದಾಗಿದೆ. ಈ ರಾಶಿಯವರು ಸ್ಥಿರವಾಗಿ ಕೆಲಸ ಮಾಡಿದರೆ ಬಯಸಿದ ಫಲಿತಾಂಶ ಪಡೆಯಬಹುದು. ತಿಂಗಳ ಎರಡನೇ ವಾರದ ನಂತರ ದೀರ್ಘಾವಧಿ ಯೋಜನೆಗೆ ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಯಾವುದೇ ಕಾರಣಕ್ಕೂ ಸಹೋದ್ಯೋಗಿಗಳೊಂದಿಗೆ ಕಿರಿಕಿರಿ ಮಾಡಿಕೊಳ್ಳಬೇಡಿ ಏಕೆಂದರೆ ಕೆಲವು ಕೆಲಸದಲ್ಲಿ ನಿಮ್ಮ ಸಹದ್ಯೋಗಿಯು ನಿಮ್ಮೊಂದಿಗೆ ಕೈಜೋಡಿಸಬೇಕಾಗಿದೆ. ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿ ಇರುವವರಿಗೆ ಶುಭಸುದ್ದಿ ಬಂದರೂ ಕೆಲವು ಕಾರಣಾಂತರಗಳಿಂದ ದಿನಾಂಕಗಳು ಮುಂದೂಡಬಹುದಾಗಿದೆ. ಈ ತಿಂಗಳ ಎರಡನೇ ವಾರದಲ್ಲಿ ಗ್ರಹಗಳ ಚಲನೆಯಿಂದ ಆರ್ಥಿಕ ಪರಿಸ್ಥಿತಿ ದುರ್ಬಲವಾಗುತ್ತದೆ. ಮನೆಯವರ ಆರೋಗ್ಯದಲ್ಲಿ ಸಮಸ್ಯೆಯಾಗಿ ಹಣ ಖರ್ಚಾಗುವ ಸಾಧ್ಯತೆ ಇರುತ್ತದೆ. ಸ್ನೇಹಿತರ ಬಳಿ ಹಣ ಸಹಾಯ ಪಡೆಯಬಹುದಾಗಿದೆ. ವೆಚ್ಚಗಳು ಹೆಚ್ಚಾಗುವುದರಿಂದ ಆರ್ಥಿಕ ನಷ್ಟವಾಗಬಹುದು. ಆದರೆ ಕೊನೆಯ ವಾರದಲ್ಲಿ ಸಕಾರಾತ್ಮಕ ಬದಲಾವಣೆಯಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ನಿಮ್ಮ ಸಮಸ್ಯೆಗಳು ದೂರವಾಗಲು ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!