ಬ್ಯಾಂಕ್ ನಲ್ಲಿ ಕೆಲಸ ಮಾಡುವ ನಿರೀಕ್ಷೆಯಲ್ಲಿರುವವವರಿಗೆ DCC ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯ ಈ ಕೆಳಗೆ ನೀಡಲಾಗಿದೆ. ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ. ಪ್ರತಿದಿನ ಇದೆ ರೀತಿಯ ಉದ್ಯೋಗ ಮಾಹಿತಿ ಹಾಗೂ ಸರ್ಕಾರಿ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಸೇರಿ.
ಹುದ್ದೆಗಳ ವಿವರ ಹೀಗಿದೆ:
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚಿಕ್ಕಮಂಗಳೂರು
ಹುದ್ದೆಯ ಹೆಸರು: ಜೂನಿಯರ್ ಅಸಿಸ್ಟೆಂಟ್, ಪ್ರಥಮ ವಿಭಾಗದ ಸಹಾಯಕ
ಕೆಲಸದ ಸ್ಥಳ: ಕರ್ನಾಟಕ- ಚಿಕ್ಕಮಗಳೂರು
ಅರ್ಜಿಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ
ಹುದ್ದೆಗಳು: 85
ಹುದ್ದೆಗಳ ಸಂಖ್ಯೆ ಹೀಗಿದೆ:
ಕಿರಿಯ ಸಹಾಯಕ : 53
ಮೊದಲ ವಿಭಾಗದ ಸಹಾಯಕ/ಮೇಲ್ವಿಚಾರಕರು : 18
ಅಟೆಂಡರ್ : 10
ಸಹಾಯಕ ವ್ಯವಸ್ಥಾಪಕ : 4
ಈ ಹುದ್ದೆಗೆ ಸಂಬಳ: ಪ್ರತಿ ತಿಂಗಳು ರೂ.18600-67550/-
ವಯೋಮಿತಿ: ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35
ವಯೋಮಿತಿ ಸಡಿಲಿಕೆ ಕ್ಯಾಟ್-2ಎ/2ಬಿ/3ಎ/3ಬಿ ಅಭ್ಯರ್ಥಿಗಳು: 03 ವರ್ಷಗಳು
SC/ST/Cat-I ಅಭ್ಯರ್ಥಿಗಳು: 05 ವರ್ಷಗಳು, PWD/ವಿಧವೆ ಅಭ್ಯರ್ಥಿಗಳು: 10 ವರ್ಷಗಳು ಇರುತ್ತೆ
ಈ ಹುದ್ದೆಗೆ ಅರ್ಜಿ ಶುಲ್ಕ ಎಷ್ಟಿರುತ್ತೆ?
SC/ST/Cat-I/PWD/Ex-Servicemen ಅಭ್ಯರ್ಥಿಗಳು: ರೂ.750/- ಸಾಮಾನ್ಯ/ಕ್ಯಾಟ್-2ಎ/2ಬಿ/3ಎ/3ಬಿ ಅಭ್ಯರ್ಥಿಗಳು: ರೂ.1500/-
ಪಾವತಿ ವಿಧಾನ: ಆನ್ಲೈನ್ ಮೂಲಕ
ಈ ಹುದ್ದೆಗೆ ವಿದ್ಯಾರ್ಹತೆ ಎಷ್ಟಿರಬೇಕು?
ಸಹಾಯಕ ವ್ಯವಸ್ಥಾಪಕ : ಸ್ನಾತಕೋತ್ತರ ಪದವಿ
ಮೊದಲ ವಿಭಾಗದ ಸಹಾಯಕ/ಮೇಲ್ವಿಚಾರಕರು & ಕಿರಿಯ ಸಹಾಯಕ : ಪದವಿ
ಅಟೆಂಡರ್ : 10 ನೇತರಗತಿ
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ
ಅಧಿಕೃತ ಅಧಿಸೂಚನೆ ಪಿಡಿಎಫ್
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: chikkamagalurudccbank.com
ಅರ್ಜಿಸಲ್ಲಿಸುವ ದಿನಾಂಕಗಳು: ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 29-10-2024
ಅರ್ಜಿ ಸಲ್ಲಿಸಲು ಪಾವತಿಸಲು ಕೊನೆಯ ದಿನಾಂಕ: 27-ನವೆಂಬರ್-2024