ದರ್ಶನ್ ತುಂಬಾ ಕಷ್ಟಪಟ್ಟು ಮೇಲೆ ಬಂದ ವ್ಯಕ್ತಿ. ತನ್ನ ಜೀವನದಲ್ಲಿ ಏಳಿಗೆಯಾಗಲು ಕಾರಣವಾದವರು ಹಾಗೂ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಗಳಂತೆ ಕಾಣುತ್ತಾರೆ. ಅವರು ತಮ್ಮ ಪ್ರೀತಿ ಪಾತ್ರರಿಗೆ ನೀಡುವ ಗೌರಮ ಹಾಗೂ ಸ್ಥಾನ ಕುರಿತಾಗಿ ಪ್ರತ್ಯೇಕವಾಗಿ ಹೇಳಬೇಕಿಲ್ಲ. ತಮ್ಮ ಶಾಲಾ ದಿನಗಳಲ್ಲಿ ಸಾರಥಿಯಾಗಿ ಶಾಲೆಗೆ ತಲುಪಿಸುತ್ತಿದ್ದ ಚಾಲಕನನ್ನು ಅವರ 80ನೇ ಹುಟ್ಟುಹಬ್ಬದಂದು ಭೇಟಿಯಾಗಿದ್ದಾರೆ ದರ್ಶನ್. ದರ್ಶನ್ ಅವರ ಜೊತೆ ಇರುವ ವ್ಯಕ್ತಿ ಕೆಎಸ್ಆರ್ಟಿಯಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಗ ದರ್ಶನ್ ಅವರು ಶಾಲೆಗೆ ಹೋಗುವ ಮಾರ್ಗದ ರಸ್ತೆಯಲ್ಲಿ ಪಯಣಿಸುವ ಬಸ್ಗೆ ಚಾಲಕರಾಗಿದ್ದರಂತೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸರಳ, ನೇರ ನಡವಳಿಕೆಯಿಂದಲೇ ಅಭಿಮಾನಿಗಳಿಗೆ ಹತ್ತಿರವಾದವರು. ಜೀವನದಲ್ಲಿ ಹತ್ತಾರು ಏಳು ಬೀಳುಗಳನ್ನು ಕಂಡು ಯಶಸ್ವಿ ಹೆಜ್ಜೆ ಇಟ್ಟಿರುವ ದರ್ಶನ್ ತಮ್ಮ ಜೀವನದ ಪ್ರತಿ ಹಂತದಲ್ಲಿ ಜೊತೆಯಾಗಿ ನೆರವಾದವರನ್ನು ಸದಾ ನೆನಪಿಟ್ಟುಕೊಳ್ಳುತ್ತಾರೆ. ಈಗ ದರ್ಶನ್ ತಮ್ಮ ಬಾಲ್ಯದ ದಿನಗಳ ನೆನಪಿಗೆ ಮರಳಿದ್ದು, ತಾವು ಶಾಲೆಗೆ ಹೋಗುತ್ತಿದ್ದ ರೂಟ್ನ ಕೆಎಸ್ಆರ್ಟಿಸಿ ಬಸ್ ಚಾಲಕರೊಬ್ಬರನ್ನ ಭೇಟಿಯಾಗಿದ್ದಾರೆ. ಮೈಸೂರಿನ ಬಸ್ ಚಾಲಕ ಸುಂದರ ರಾಜ್ ಅವರ ಮನೆಗೆ ದರ್ಶನ್ ನಿನ್ನೆ ಭೇಟಿ ನೀಡಿದ್ದು, ಅವರ 80ನೇ ವರ್ಷದ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ದರ್ಶನ್ ಸಾರಥಿ ಮೀಟ್ಸ್ ಸಾರಥಿ, ಇಂದು ನಮ್ಮ ಶಾಲೆಯ ರೂಟ್ನ ಕೆಎಸ್ಆರ್ಟಿಸಿ ಬಸ್ ಡ್ರೈವರ್ರನ್ನ ಭೇಟಿಯಾಗಿ ಅವರ ಆಶೀರ್ವಾದ ಪಡೆದೆ ಎಂದು ಬರೆದುಕೊಂಡಿದ್ದಾರೆ.
ಹೂಗುಚ್ಛ ಕೊಟ್ಟು ಅವರ 80ನೇ ವರ್ಷದ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ ದರ್ಶನ್. ಈ ಕುರಿತಾಗಿ ದರ್ಶನ್, ತಮ್ಮ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಕೆಲವು ಫೋಟೋಗಳನ್ನುಪೋಸ್ಟ್ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ತೆರೆ ಮೇಲೆ ಸಾರಥಿಯಾಗಿ ಮಿಂಚಿರುವ ನಟನ ಶಾಲಾ ದಿನಗಳ ನಿಜ ಜೀವನದ ಸಾರಥಿ ಇವರೇ. ಸುಂದರ್ ರಾಜ್ ಅವರು ಮೈಸೂರಿನ ತೆರೆಸಿಯನ್ ಕಾನ್ವೆಂಟ್ನ ಸಾವಿರಾರು ಮಕ್ಕಳಿಗೆ ಸುಂದರ್ ಮಾಮ. ಸುಂದರ್ ಅಂಕಲ್ ಅಂತಾನೇ ಚಿರಪರಿಚಿತರು.