ಹಿಂದೂ ಮುಸ್ಲಿಂ ವಿವಾದಾತ್ಮಕ ಚರ್ಚೆ ಮೊದಲಿಂದಲೂ ನಡೆದುಕೊಂಡು ಬಂದಿದ್ದು ಇದು ಭಾರತೀಯ ಸಂಸ್ಕೃತಿ ಗೆ ಕಪ್ಪುಚುಕ್ಕೆ ಎಂದರೆ ತಪ್ಪಲ್ಲ ಎಲ್ಲರೂ ಒಟ್ಟಾಗಿ ನಾವೆಲ್ಲ ಒಂದೇ ಎಂದು ಹೇಳುವ ಸಮಯ ಯಾವಾಗ ಬರುವುದೋ ಇಲ್ಲವೋ ಗೊತ್ತಿಲ್ಲ ಇತ್ತೀಚಿನ ದಿನಗಳಲ್ಲಿ ಜಾತ್ಯತೀತೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಹಿಜಾಬ್ ಹಲಾಲ್ ಕಟ್ ಕೂಡ ನ್ಯಾಯಾಲಯದ ಮೆಟ್ಟಿಲೇರಿದೆ ಹಿಜಾಬ್ ಧರಿಸಿ ಶಾಲಾ ಕಾಲೇಜು ಪ್ರವೇಶವಿಲ್ಲ ಎಂದು ಹೇಳಿದಾಗ ಗಂಭೀರ ಹೋರಾಟ ನಡೆಸಿ ಕೋರ್ಟ್ ಮೆಟ್ಟಿಲೇರಿದ್ದಾರೆ
ಕೊನೆಗೆ ಹಿಂದೂಗಳು ಕೇಸರಿ ಶಾಲನ್ನು ಹೊದ್ದು ದೊಡ್ಡ ಹೋರಾಟವನ್ನು ಮಾಡಿದ್ದರು ಇನ್ನೂ ಹಲಾಲ ಕಟ್ ಯಿಂದ ಮುಸ್ಲಿಂ ಅಂಗಡಿಯಲ್ಲಿ ಮಾಂಸ ಖರೀದಿ ಮಾಡಲು ನಿರ್ಭಂದ ಹೇರಿದ್ದು ಇದರಿಂದ ಸಾಮಾನ್ಯ ಜನರ ಜೀವನ ಅಸ್ತವ್ಯಸ್ತ ಆಗಿದೆ. ಇತ್ತೀಚಿನ ದಿನಗಳಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಾಮರಾಜ ಪೇಟೆಯಲ್ಲಿ ಇರುವ ಮಾಜಿ ಶಾಸಕ ಜಮೀರ್ ಅವರ ಮನೆಗೆ ಭೇಟಿ ಕೊಟ್ಟಿದ್ದು ರಂಜಾನ್ ಮಾಸದಲ್ಲಿ ಇಫ್ತೀಯರ್ ಕೂಟದಲ್ಲಿ ಭಾಗಿಯಾಗಿದ್ದು ತಮ್ಮ ಆತ್ಮೀಯರ ಜೊತೆ ಬಿರಿಯಾನಿ ಸವಿದಿದ್ದಾರೆ ಜೊತೆಗೆ ವಿನೋದ್ ಪ್ರಭಾಕರ ಮತ್ತು ಜಮೀರ್ ಪುತ್ರ ಹಾಗೂ ನಟ ಜಾಹೀದ ಖಾನ್ ಕೂಡ ಪಾಲ್ಗೊಂಡಿದ್ದರು
ಇದರಿಂದ ಸಮಾಜದಲ್ಲಿ ಸ್ನೇಹ ಸೌಹಾರ್ದತೆಯನ್ನು ಮತ್ತು ಬಾಂಧವ್ಯಕ್ಕೆ ಮನ್ನಣೆಯನ್ನು ನೀಡಿದ್ದಾರೆ ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಒಳಪಟ್ಟಿದೆ ನಟ ದರ್ಶನ್ ಅವರ ಮೇಲೂ ಕೂಡ ನಿರ್ಭಂದ ಹೇರಿ ಯಾಕೆ ಮುಸ್ಲಿಂ ಅವರಿಗೆ ಮಾತ್ರ ಒಂದು ನ್ಯಾಯ ಎಂದು ಜನ ಪ್ರಶ್ನಿಸಿದ್ದಾರೆ ಆದರೆ ನಿಜವಾಗಿ ನೋಡುವುದಾದರೆ ಇದರಿಂದ ಹಿಂದೂ ಮುಸ್ಲಿಂ ಮನೆಗೆ ಹೋಗಿ ಬರುವುದರಿಂದ ಎರಡು ಜಾತಿಯವರ ಮದ್ಯೆ ಸಾಮರಸ್ಯ ಉಂಟಾಗಿ ಒಂದು ಒಳ್ಳೆಯ ಬಾಂಧವ್ಯಕ್ಕೆ ಬುನಾದಿ ಹಾಗೂ ಧರ್ಮ ದಂಗಲ್ ಕೂಡ ಕಡಿಮೆ ಆಗುವುದು ಎನ್ನಬಹುದು.