ವಿದ್ಯುತ್ ಬಿಲ್ ತಿಂಗಳುಗಟ್ಟಲೆ ಕಟ್ಟದೆ ಮುಂದೂಡುತ್ತಾ ಇದ್ದೀರಾ. ಹಾಗಾದರೆ ಇನ್ಮೇಲೆ ಬಿಲ್ ಪಾವತಿ ಪಾವತಿಸುವಲ್ಲಿ ನಿರ್ಲಕ್ಷ್ಯ ಬೇಡವೇ ಬೇಡ. ಒಂದ್ ವೇಳೆ ಮೂರು ತಿಂಗಳು ವಿದ್ಯುತ್ ಬಿಲ್ ಕಟ್ಟಿಲ್ಲ ಅಂದ್ರೆ ಕರೆಂಟ್ ಇಲ್ಲದೆ ಕತ್ತಲಲ್ಲೇ ಜೀವನ ಮಾಡ್ಬೇಕಾಗುತ್ತೆ. ಮನುಷ್ಯನ ಜೀವಕ್ಕೆ ನೀರು, ಆಹಾರದಷ್ಟೇ ವಿದ್ಯುತ್ ಅಗತ್ಯ ಬಹಳಷ್ಟಿದೆ. ಆದ್ರೆ ವಿದ್ಯುತ್ ಬಳಸಿಕೊಂಡು ಎಷ್ಟೋ ಜನ ವಿದ್ಯುತ್ ಬಿಲ್ ನೇ ಪಾವತಿ ಮಾಡ್ತಿಲ್ಲ. ಇದು ಎಸ್ಮಾಂಗಳ ಸಂಕಷ್ಟಕ್ಕೆ ಕಾರಣವಾಗ್ತಿದೆ. ಎಷ್ಟೋ ಜನ ವಿದ್ಯುತ್ ಬಿಲ್ ಮುಂದಿನ ತಿಂಗಳು ಕಟ್ಟೋಣವೆಂದು ತಿಂಗಳುಗಟ್ಟಲೆ ಬಿಲ್ ಪಾವತಿಸದೆ ಮುಂದೂಡುತ್ತಾ ವಿದ್ಯುತ್ ಫ್ಲೂಸ್ ತೆಗೆದ ಮೇಲೆ ಬಿಲ್ ಪಾವತಿಸುವ ವಾಡಿಕೆಯನ್ನ ರೂಡಿಸಿಕೊಂಡಿದ್ದಾರೆ.ಆದ್ರೆ ಇನ್ನು ಮುಂದೆ ಇದಕ್ಕೆ ಕಡಿವಾಣ ಹಾಕಲು ಬೆಸ್ಕಾಂ ಮುಂದಾಗ್ತಿದೆ.

ಗ್ರಾಹಕರಿಗೆ ಬಿಗ್ ಶಾಕ್ ಕೊಡಲು ಬೆಸ್ಕಾಂ ಮುಂದಾಗಿದೆ. ವಿದ್ಯುತ್ ಬಿಲ್ ಕಟ್ಟಲು ವಿಳಂಬ ಮಾಡುವವರಿಗೆ ದೊಡ್ಡ ಆಘಾತವೇ ನೀಡ್ತಿದೆ. ಸಾಮಾನ್ಯವಾಗಿ ಅನೇಕರು 2 ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ವಿದ್ಯುತ್ ಬಿಲ್ ಕಟ್ಟುವ ಪದ್ಧತಿಯನ್ನು ರೂಢಿ ಮಾಡಿಕೊಂಡಿರುತ್ತಾರೆ ಅಥವಾ ಕಾರಣಾಂತರಗಳಿಂದ ಕೆಲ ತಿಂಗಳು ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗಿರಲ್ಲ. ಈ ವೇಳೆ ಬೆಸ್ಕಾಂ ಅಧಿಕಾರಿಗಳು ಕರೆಂಟ್ ಫ್ಯೂಸ್ ತೆಗೆದು ಹೋಗುತ್ತಾರೆ. ಇದು ಎಲ್ಲರಿಗೂ ತಿಳಿದಿರುವ ವಿಷಯ.

ಆದ್ರೆ ವಿದ್ಯುತ್ ಬಿಲ್ ಕಟ್ಟಲು ವಿಳಂಬ ಮಾಡುವವರಿಗೆ ವಿದ್ಯುತ್ ಸಂಪರ್ಕದ ಲೈಸೆನ್ಸ್ ರದ್ದು ಮಾಡಲು ಬೆಸ್ಕಾಂ ಮುಂದಾಗಿದೆ. ಇನ್ಮುಂದೆ 3 ತಿಂಗಳು ವಿದ್ಯುತ್ ಬಿಲ್ ಕಟ್ಟಿಲ್ಲವೆಂದರೆ ಸಿಬ್ಬಂದಿ ಕರೆಂಟ್ ಫ್ಯೂಸ್ ತೆಗೆಯಲ್ಲ ಬದಲಾಗಿ ನಿಮ್ಮ ಮನೆಯ ‌ವಿದ್ಯುತ್ ಸಂಪರ್ಕದ ಲೈಸೆನ್ಸ್ ನನ್ನೇ ರದ್ದು ಮಾಡ್ತಾರೆ. ವಿದ್ಯುತ್ ಬಾಕಿ ಬಿಲ್ ಸಂಗ್ರಹಕ್ಕೆ ಗ್ರಾಹಕರ ಮೇಲೆ ಬೆಸ್ಕಾಂ ಹೊಸ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದೆ. ಇನ್ಮೇಲೆ 3 ತಿಂಗಳು ವಿದ್ಯುತ್ ಬಿಲ್ ಬಾಕಿ ಇದ್ದರೆ ವಿದ್ಯುತ್ ಸಂಪರ್ಕದ ಒಪ್ಪಂದವೇ ರದ್ದಾಗಲಿದೆ.

ವಿದ್ಯುತ್ ಸಂಪರ್ಕ ಒಪ್ಪಂದ ರದ್ದುಗೊಂಡರೆ ಪುನಃ ಅರ್ಜಿ ಸಲ್ಲಿಸಿ ಹೊಸ ಕನೆಕ್ಷನ್ ತೆಗೆದುಕೊಳ್ಳಲೇಬೇಕು. ವಿದ್ಯುತ್ ಬಿಲ್ ಪಾವತಿಸುವಲ್ಲಿ ವಿಳಂಬ ಮಾಡಿದ್ರೆ, ಕರೆಂಟ್ ಇಲ್ಲದೆ ಕತ್ತಲಲ್ಲೇ ಜೀವನ ನಡೆಸುವಂತಹ ಸ್ಥಿತಿ ಉಂಟಾಗಲಿದೆ. ಇನ್ನೂ ತಿಂಗಳಿಗೆ ಸರಿಯಾಗಿ ಬಿಲ್ ಪಾವತಿಸದೆ ನಿರ್ಲಕ್ಷ್ಯ ತೋರುವರರ ವಿರುದ್ಧ ಬೆಸ್ಕಾಂ ಸಮರ ಸಾರಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲು ನೂತನ ಪ್ರಯೋಗ ಮಾಡುತ್ತಿದೆ. ಈ ಬಗ್ಗೆ ಬೆಸ್ಕಾಂ ಎಂ.ಡಿ ಮಹಾಂತೇಶ ಬೀಳಗಿ ಕೂಡ ಟ್ವೀಟ್ ಮೂಲಕ ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದಾರೆ.

ವಿದ್ಯುತ್ ಸಂಪರ್ಕ ಒಪ್ಪಂದ ರದ್ದುಗೊಳಿಸುವಂತಹ ತೊಂದರೆ ಬೇಡ ಅಂದರೆ ಸರಿಯಾದ ಟೈಮ್ ಗೆ ವಿದ್ಯುತ್ ಬಿಲ್ ಕಟ್ಟಿ ಎಂದು ಗ್ರಾಹಕರಿಗೆ ಟ್ವೀಟ್ ಮೂಲಕ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಮನವಿ ಮಾಡಿದ್ದಾರೆ. ಇನ್ನೂ ಈ ನಿಯಮವನ್ನ ಗ್ರಾಹಕರು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದ್ರೆ ಕರೆಂಟ್ ಸಂಪರ್ಕ ಲೈಸೆನ್ಸ್ ರದ್ದು ಆಗೋದು ಪಕ್ಕಾ ಅಂತ ಬೆಸ್ಕಾಂ ಜನರಲ್ ಮ್ಯಾನೇಜರ್ ನಾಗರಾಜ್ ಹೇಳ್ತಿದ್ದಾರೆ. ಸದ್ಯ ಬೆಸ್ಕಾಂ ಈ ನಿರ್ಧಾರ ಚರ್ಚೆಗೆ ಕಾರಣವಾಗಿದೆ. ಸರ್ಕಾರಿ ಇಲಾಖೆಗಳು ವರ್ಷಾನುಗಟ್ಟಲೆ ವಿದ್ಯುತ್ ಬಿಲ್ ಕಟ್ಟದೆ ಕೋಟಿ ಗಟ್ಟಲೆ ಬಾಕಿ ಉಳಿಸಿಕೊಂಡ್ರು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ‌. ಆದ್ರೆ ಇದೀಗ ಮೂರು ತಿಂಗಳು ಬಿಲ್ ಕಟ್ಟಿಲ್ಲ ಅಂದರೆ ಸಂಪರ್ಕ ಲೈಸೆನ್ಸ್ ರದ್ದು ಹೇಳ್ತಿರೋದು ಜನರ ಕೆಂಗಣ್ಣಿಗೆ ಕಾರಣವಾಗಿದೆ.

ಇನ್ನು ಕೆಟ್ಟ ಮೇಲೆ ಬುದ್ದಿ ಬಂತು ಅನ್ನೊ ಹಾಗೆ ಇದೀಗ ಎಚ್ಚೆತ್ತ ಬೆಸ್ಕಾಂ, ಬಿಲ್ ಪಾವತಿ ಮಾಡದ ಸರ್ಕಾರಿ ಸಂಸ್ಥೆಗಳಿಗೂ ಶಾಕ್ ಕೊಟ್ಟಿದೆ. ಬಿಡ್ಬ್ಲೂ ಎಸ್‌ಎಸ್‌ ಬಿ, ಬಿಡಿಎ, ಬಿಬಿಎಂಪಿ, ತೋಟಗಾರಿಕೆ ಇಲಾಖೆ, ನಗರ ಸಭೆ, ಗ್ರಾಮಸಭೆಗಳಿಗೆ ಬೆಸ್ಕಾಂನ ಹೆಬ್ಬಾಳ ಮತ್ತು ಜಾಲಹಳ್ಳಿ ವಿಭಾಗಗಳ ಕಾರ್ಯನಿರ್ವಾಹಕ ಇಂಜಿನಿಯರ್‌ ಗಳಿಂದ ಪ್ರತ್ಯೇಕ ನೋಟಿಸ್‌ ಜಾರಿ ಮಾಡಿದೆ. ಬಿಡ್ಬ್ಲೂ ಎಸ್‌ ಎಸ್‌ ಬಿ ಅತೀ ಹೆಚ್ಚು ಬಾಕಿ ಉಳಿಸಿಕೊಂಡಿದೆ ಬರೋಬ್ಬರಿ 65.09 ಕೋಟಿ ರೂ. ಪಾವತಿಸಬೇಕಿದೆ.

ಬಿಬಿಎಂಪಿ ನೀರು ಸರಬರಾಜು ವಿಭಾಗ 54.53 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ಬಿಲ್ ಪಾವತಿಗೆ 7 ದಿನಗಳ ಗಡುವು ನೀಡಲಾಗಿದೆ. ತಪ್ಪಿದ್ದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದಾಗಿ ಎಚ್ಚರಿಕೆ ಎಚ್ಚರಿಕೆ ನೀಡಿದೆ. ಸದ್ಯ ಕೇವಲ ಕಾಟಾಚಾರದ ನೋಟಿಸ್ ನೀಡಿ, ಒಂದು ವಾರದ ಗಡುವನ್ನ ಬೆಸ್ಕಾಂ ಸರ್ಕಾರಿ ಸಂಸ್ಥೆಗಳಿಗೆ ನೀಡಿದೆ. ಆದ್ರೆ, ಕೋಟಿ ಕೋಟಿ ಉಳಿಸಿಕೊಂಡಿರೊ ಸಂಸ್ಥೆಗಳು ಬಾಕಿ ಬಿಲ್ ಪಾವತಿಸುತ್ತಾರಾ ಅಂತ ಕಾದು ನೋಡ್ಬೇಕಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!