Cow farming Scheme: ನಮ್ಮ ರಾಜ್ಯದಲ್ಲಿ ಈ ವರ್ಷ ನಿರೀಕ್ಷೆಯ ಮಟ್ಟಕ್ಕೆ ಮಳೆ ಬರದ ಕಾರಣ ರೈತರು ನಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ವ್ಯವಸಾಯವನ್ನು ಮಾತ್ರ ನಂಬಿಕೊಂಡಿರುವವರಿಗೆ ಭಾರಿ ನಷ್ಟವಾಗಿದೆ, ಆದರೆ ಹೈನುಗಾರಿಕೆಯನ್ನು ಕೂಡ ಮಾಡುತ್ತಿರುವವರಿಗೆ ಸ್ವಲ್ಪ ಪರವಾಗಿಲ್ಲ ಎನ್ನುವ ಪರಿಸ್ಥಿತಿ ಇದೆ. ಸರ್ಕಾರ ಕೂಡ ಈಗ ರೈತರ ಪರವಾಗಿ ನಿಂತಿದ್ದು, ಹೈನುಗಾರಿಕೆ ಮಾಡುವವರಿಗೆ ಸರ್ಕಾರವು ಗುಡ್ ನ್ಯೂಸ್ ನೀಡಿದೆ.

ಹೈನುಗಾರಿಕೆ ಮಾಡುವವರಿಗೆ ಸಪೋರ್ಟ್ ಮಾಡುವ ಸಲುವಾಗಿ ಸಬ್ಸಿಡಿ ಲೋನ್ ಹಾಗೂ ಬಡ್ಡಿರಹಿತ ಸಾಲ ನೀಡುವುದಕ್ಕೆ ಸರ್ಕಾರ ಮುಂದಾಗಿದೆ. ಇಷ್ಟು ಮಾತ್ರವಲ್ಲದೆ ಇನ್ನು ಕೆಲವು ಸೌಲಭ್ಯಗಳನ್ನು ಒದಗಿಸಲು ಸರ್ಕಾರ ನಿರ್ಧಾರ ಮಾಡಿದ್ದು, ಮಿಶ್ರತಳಿ ಹಸುಗಳ ಸಾಕಾಣಿಕೆ ಮಾಡುವವರಿಗೆ 90% ಹಣವನ್ನು ಲೋನ್ ಮೂಲಕ ನೀಡುವುದಕ್ಕೆ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಹೈನುಗಾರಿಕೆ ಮಾಡುತ್ತಿರುವ ರೈತರಿಗೆ ಸಹಾಯ ಆಗಲಿ ಎಂದು ಸರ್ಕಾರ ಈ ಸೌಲಭ್ಯಗಳನ್ನು ಒದಗಿಸಿ ಕೊಡುತ್ತಿದೆ.

ಮಿಶ್ರ ತಳಿ ಹಸುಗಳ ಖರೀದಿಗಾಗಿ, 90% ಅಂದರೆ 58,500 ರೂಪಾಯಿಗಳಷ್ಟು ಹಣವನ್ನು ಸರ್ಕಾರ ನೀಡಲಿದ್ದು, ಇನ್ನು 10% ಅಂದರೆ 6,500 ರೂಪಾಯಿಗಳನ್ನು ಬ್ಯಾಂಕ್ ಸಾಲದ ರೂಪದಲ್ಲಿ ಪಾವತಿ ಮಾಡಬೇಕಾಗುತ್ತದೆ. ಈ ಸಾಲ ಸೌಲಭ್ಯವು ಪುರುಷ ರೈತರಿಗೆ ಮಾತ್ರವಲ್ಲ, 33% ಮಹಿಳಾ ರೈತರಿಗೆ ಮತ್ತು 3% ವಿಕಲಚೇತನರಿಗೆ ನೀಡಲಾಗುತ್ತದೆ. ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯ ಅಡಿಯಲ್ಲಿ ಸರ್ಕಾರವು ಈ ಸಾಲ ಸೌಲಭ್ಯವನ್ನು ನೀಡುತ್ತಿದೆ.

ಈ ಯೋಜನೆಗೆ SC/ST ವರ್ಗದ ಕೃಷಿಕರು, ಕೂಲಿ ಕಾರ್ಮಿಕರು ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅಪ್ಲೈ ಮಾಡಲು ಕೆಲವು ಶರತ್ತುಗಳಿದ್ದು ಅವುಗಳು ಏನೇನು ಎಂದು ನೋಡುವುದಾದರೆ.. ಅರ್ಜಿ ಸಲ್ಲಿಸುವವರು ಹಾಲು ಉತ್ಪಾದನಾ ಸಂಘದ ಸದಸ್ಯರಾಗಿರಬೇಕು, ಅಥವಾ ಯೋಜನೆಗೆ ಅಪ್ಲೈ ಮಾಡಿದ ನಂತರ ಸದಸ್ಯತ್ವ ಪಡೆದುಕೊಳ್ಳಬೇಕು. ಸಾಲ ಪಡೆಯುವ ರೈತರು ಹಾಲು ಉತ್ಪಾದಕರ ಸಂಘಕ್ಕೆ ಹಾಲು ವಿತರಣೆ ಮಾಡುತ್ತಿರುವ ಬಗ್ಗೆ ಅಧಿಕೃತವಾಗಿ ಮುಚ್ಚಳಿಕೆ ಬರೆದು ಕೊಡಬೇಕು.

ಈ 5 ವರ್ಷಗಳ ಹಿಂದಿನ ಅವಧಿಯಲ್ಲಿ ಪಶು ಸಂಗೋಪನೆಗೆ ಯಾವುದಾದರೂ ಸಾಲ ಪಡೆದುಕೊಂಡಿದ್ದರೆ ಅಂಥವರು ಈ ಯೋಜನೆಗೆ ಅರ್ಹರಾಗುವುದಿಲ್ಲ.
ಸರ್ಕಾರದ ಈ ಸಹಾಯಧನ ಪಡೆಯಲು ಅಗತ್ಯವಿರುವ ದಾಖಲೆಗಳು..
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಇನ್ಕಮ್ ಸರ್ಟಿಫಿಕೇಟ್
ಕ್ಯಾಸ್ಟ್ ಸರ್ಟಿಫಿಕೇಟ್
ವಿಕಲಚೇತನರಾದರೆ ಅದರ ಸರ್ಟಿಫಿಕೇಟ್
ಬ್ಯಾಂಕ್ ಅಕೌಂಟ್ ಡೀಟೇಲ್ಸ್
ಫೋನ್ ನಂಬರ್

ಮಿಶ್ರತಳಿ ಹಸುಗಳ ಸಾಕಾಣಿಕೆಗಾಗಿ ಸಹಾಯ ಪಡೆಯಲು, ಅರ್ಜಿ ಸಲ್ಲಿಸುವುದಕ್ಕೆ ಕೊನೆಯ ದಿನಾಂಕ ನವೆಂಬರ್ 25ಆಗಿದ್ದು, ಅಷ್ಟರ ಒಳಗೆ ಅರ್ಜಿ ಸಲ್ಲಿಸಿ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!