ರೈತರು ತಮ್ಮ ಜಮೀನಿನಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆಯುತ್ತಾರೆ. ಕೆಲವರು ಅಡಿಕೆ ಬೆಳೆಯುತ್ತಾರೆ ಇನ್ನು ಕೆಲವರು ತರಕಾರಿ, ಹೂವು, ಹಣ್ಣು ಇನ್ನು ಕೆಲವರು ತೆಂಗು ಬೆಳೆಯುತ್ತಾರೆ. ತೆಂಗಿನಮರಕ್ಕೆ ಒಂದು ಸರಳ ವಿಧಾನವನ್ನು ಅನುಸರಿಸಿ 300 ತೆಂಗಿನಕಾಯಿಗಳನ್ನು ಪಡೆಯಬಹುದು. ಹಾಗಾದರೆ ಈ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಕಲ್ಪವೃಕ್ಷ ಹೀಗಂದರೆ ಸಾಕು ಎಲ್ಲರಿಗೂ ಅದು ತೆಂಗಿನಮರ ಎಂದು ತಿಳಿಯುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ತೆಂಗಿನಮರ ಹಾಗೂ ತೆಂಗಿನಕಾಯಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ತೆಂಗಿನಕಾಯಿ ರುಚಿಕರವಾದ ಅಡುಗೆಗೆ, ಸಿಹಿ ನೀರು ಅಂದರೆ ಎಳನೀರು ಕುಡಿಯಲು, ನಾರು ಹೀಗೆ ತೆಂಗಿನ ಮರದಿಂದ ಹಲವು ಉಪಯುಕ್ತವಿದೆ. ಒಂದುಕಡೆ ತೆಂಗಿನಮರವನ್ನು ಬಳಸಿಕೊಂಡು ಕೈಗಾರಿಕೆ ಮಾಡಿಕೊಂಡು ಬದುಕುತ್ತಿರುವ ವರ್ಗವಾದರೆ ಎಳನೀರು, ತೆಂಗಿನಕಾಯಿ ಮಾರಿ ಜೀವನ ನಡೆಸುತ್ತಿರುವ ವರ್ಗ ಇನ್ನೊಂದು. ಇತ್ತೀಚಿನ ದಿನಗಳಲ್ಲಿ ರೈತರು ತೆಂಗಿನ ತೋಟದಲ್ಲಿ ತಮ್ಮ ಕೃಷಿಯಲ್ಲಿ ಸರಿಯಾದ ಕ್ರಮಗಳನ್ನು ಅನುಸರಿಸದೆ ಸಾಕಷ್ಟು ತೊಂದರೆಯಾಗುತ್ತಿದೆ.
ಒಂದು ಮರದಿಂದ 300 ಕ್ಕಿಂತ ಹೆಚ್ಚು ತೆಂಗಿನಕಾಯಿಗಳನ್ನು ಕೊಯ್ಲು ಮಾಡುವ ಸುಲಭ ವಿಧಾನವಿದೆ. ಈಗೀಗ ತೆಂಗಿನತೋಟದಲ್ಲಿ ಇಳುವರಿ ಕಡಿಮೆಯಾಗಿದೆ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದೆ ಇರುವುದು ಇದಕ್ಕೆ ಮುಖ್ಯ ಕಾರಣ ಎಂದು ಹೇಳಬಹುದು. ಒಂದು ಮರದಲ್ಲಿ 70 -80 ಕಾಯಿ ಬಂದರೆ ಲಾಭಕ್ಕಿಂತ ನಷ್ಟವೆ ಹೆಚ್ಚು ಹೀಗಾಗಿ ತೆಂಗಿನಕಾಯಿ ಇಳುವರಿ ಹೆಚ್ಚಿಸಲು ಗಮನ ಹರಿಸಬೇಕು. ಸರಳ ವಿಧಾನವನ್ನು ಅನುಸರಿಸಿದರೆ ಒಂದು ಮರದಿಂದ 300 ತೆಂಗಿನಕಾಯಿಗಳನ್ನು ಪಡೆಯಬಹುದು. ತೆಂಗಿನ ಮರದ ತ್ಯಾಜ್ಯವನ್ನು ಅಂದರೆ ಗರಿ, ಗುಂಟೆ ಮತ್ತು ಇತರೆ ಕಸಗಳನ್ನು ಸುಡಬಾರದು ಮರದ ಸುತ್ತಲೂ ಹರಡಬೇಕು. ತೆಂಗಿನ ಮರದ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಎರಡು ಗೊಬ್ಬರ ಗಿಡಗಳನ್ನು ಹಾಕಬೇಕು, ಮಿಶ್ರಗೊಬ್ಬರವು ಮಣ್ಣನ್ನು ಸ್ಥಿರಗೊಳಿಸುತ್ತದೆ, ವಾರ್ಷಿಕವಾಗಿ ಗೊಬ್ಬರದ ಗಿಡಗಳನ್ನು ಎರಡು ಮೂರು ಬಾರಿ ಕತ್ತರಿಸಿ ತೆಂಗಿನ ಮರದ ಬುಡದಲ್ಲಿ ಇಡಬೇಕು.
ಗೊಬ್ಬರ ಗಿಡ ಮತ್ತು ತೆಂಗಿನ ಮರದ ತ್ಯಾಜ್ಯದಿಂದ ಸೂಕ್ಷ್ಮ ಜೀವಿಗಳು ಮತ್ತು ಎರೆಹುಳುಗಳು ಉತ್ಪತ್ತಿಯಾಗುತ್ತದೆ. ಈ ಸರಳ ವಿಧಾನಗಳನ್ನು ಅನುಸರಿಸಿದರೆ ನೀರು ಕಡಿಮೆ ಪ್ರಮಾಣದಲ್ಲಿ ಸಾಕಾಗುತ್ತದೆ ಆದ್ದರಿಂದ ಒಂದು ತೆಂಗಿನ ಮರ ಸುಮಾರು 300 ಕಾಯಿಗಳನ್ನು ಕೊಡುತ್ತದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ನೀರಿನ ಕೊರತೆ ಇರುತ್ತದೆ ಆಗ ಈ ವಿಧಾನವನ್ನು ಅನುಸರಿಸಿದರೆ ಉತ್ತಮ ಇಳುವರಿ ಪಡೆಯಬಹುದು. ಈ ಮಾಹಿತಿಯನ್ನು ರೈತರಿಗೆ ಅದರಲ್ಲೂ ತೆಂಗು ಬೆಳೆಯುತ್ತಿರುವ ರೈತರಿಗೆ ತಿಳಿಸುವುದರಿಂದ ಅವರು ತೆಂಗು ಬೆಲೆಯಲ್ಲಿ ಲಾಭ ಗಳಿಸಬಹುದು.