ಪಾಳುಬಿದ್ದ ಜಮೀನಿನಲ್ಲಿ ಕಂತೆ ಕಂತೆ ಹಣ ಸಿಕ್ಕಿರುವುದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬುಕ್ಲಾರಳ್ಳಿಯಲ್ಲಿ ಪಾಳುಬಿದ್ದ ಜಮೀನಿನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ. ಅನಾಮಧೇಯ ವ್ಯಕ್ತಿಯೋರ್ವ ಪೊಲೀಸರಿಗೆ ಕರೆ ಮಾಡಿ ಜಮೀನಿನಲ್ಲಿ ಕಂತೆ ಕಂತೆ ಹಣ ಬಿದ್ದಿರುವ ಮಾಹಿತಿ ತಿಳಿಸಿದ್ದಾನೆ. ಈ ವಿಷಯ ತಿಳಿದು ತಳುಕು ಠಾಣೆಯ ಪೋಲಿಸರು ಸ್ಥಳಕ್ಕೆ ಧಾವಿಸಿದಾಗ ಅಲ್ಲಿ 2000, 500, 100, ಹಾಗೂ 50 ರೂಪಾಯಿಗಳ ಕಂತೆ ಕಂತೆ ದುಡ್ಡು ಸಿಕ್ಕಿತ್ತು. ಮೊಳಕಾಲ್ಮೂರು ಹಾಗೂ ಚಳ್ಳಕೆರೆ ಮಾರ್ಗ ಮಧ್ಯೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ನಿರ್ವಹಣೆ ಮಾಡುತ್ತಿರುವ ದಿಲೀಪ್ ಬಿಲ್ಡ್ ಕಾನ್ ಕಂಪನಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಮೂವತ್ತಾರು ಲಕ್ಷದ ಅರವತ್ತು ಸಾವಿರ ರೂ ಹಣ ಕಳ್ಳತನ ಆಗಿತ್ತು.
ಕಳ್ಳರು ಕಂಪನಿಯ ಕ್ಯಾಷ್ ರೂಮಿನ ಛಾವಣಿ ಮುರಿದು ಕಳ್ಳತನ ಮಾಡಿದ್ದರು. ಈ ಬಗ್ಗೆ ಕಂಪನಿ ವ್ಯವಸ್ಥಾಪಕರು ತಳಕು ಪೊಲೀಸ್ ಠಾಣೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು. ಕಂಪನಿಯ ಹಿಂದೆ ಪಾಳುಬಿದ್ದ ಜಮೀನಿನಲ್ಲಿ ಹಣ ಪತ್ತೆ ಆಗಿರುವುದು ಎಲ್ಲ ಮಾಹಿತಿ ಗೊತ್ತಿರುವವರೇ ಕಳ್ಳತನ ಮಾಡಿದ್ದಾರೆ ಎಂಬ ಅನುಮಾನ ಪೋಲಿಸರಿಗೆ ಮೂಡಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಜ ಏನೆಂಬುದು ತನಿಖೆಯ ನಂತರವೆ ತಿಳಿಯುತ್ತದೆ.