Chanikya Niti: ಆಚಾರ್ಯ ಚಾಣಕ್ಯರು ಬಹಳ ಹಿಂದಿನ ಕಾಲದವರೇ ಆಗಿದ್ದರು ಸಹ ಇಂದಿಗೂ ಸಹ ಜನರು ಅವರನ್ನು ನೆನೆಯುತ್ತಾರೆ. ವಿದ್ವಾಂಸರಾಗಿದ್ದ ಚಾಣಕ್ಯರು ಒಬ್ಬ ಮನುಷ್ಯನ ಜೀವನದ ಎಲ್ಲಾ ವಿಚಾರಗಳನ್ನು ತಿಳಿಸಿದ್ದಾರೆ. ಇಂದಿಗೂ ಕೂಡ ಚಾಣಕ್ಯರು ಬರೆದಿರುವ ಚಾಣಕ್ಯ ನೀತಿ (Chanikya Niti) ಪುಸ್ತಕವನ್ನು ಓದಿದರೆ ಬದುಕಿಗೆ ಬೇಕಾದ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಚಾಣಕ್ಯನೀತಿಯಲ್ಲಿ ಮನುಷ್ಯರ ದಾಂಪತ್ಯ ಜೀವನದ ಬಗ್ಗೆ ಕೂಡ ತಿಳಿಸಲಾಗಿದೆ.
ಪ್ರಸವ ವೈರಾಗ್ಯ, ಸ್ಮಶಾನ ವೈರಾಗ್ಯ, ಮತ್ತು ಪುರಾಣ ವೈರಾಗ್ಯ ಎಂದು 3 ವಿಧದ ವೈರಾಗ್ಯವಿದೆ. ಈ ವೈರಾಗ್ಯಗಳ ಬಗ್ಗೆ ಚಾಣಕ್ಯ ನೀತಿಯಲ್ಲಿ ವಿಶೇಷವಾಗಿ ತಿಳಿಸಿದ್ದಾರೆ.
ಧರ್ಮೋಖ್ಯಾನೇ ಸ್ಮಶಾನೇ ಚ ರೋಗಿಣಾಂ ಯಾ ಮತಿರ್ಭವೇತ್|
ಸಾ ಸರ್ವದೈವ ತಿಷ್ಠೇಚ್ಚತ್ ಕೋ ನ ಮುಖ್ಯೇತ್ ಬಂಧನಾತ್||
ಇದು ವೈರಾಗ್ಯದ ಶ್ಲೋಕ ಆಗಿದೆ. ಈ ಶ್ಲೋಕದ ಅರ್ಥ ಏನು ಎಂದರೆ…
ಒಬ್ಬ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಹೋದಾಗ, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವಾಗ ಬದುಕಿಗೆ ಆರೋಗ್ಯ ಸಿಗುತ್ತದೆ. ಆದರೆ ಈ ಎಲ್ಲಾ ಸಮಸ್ಯೆಗಳು ಮುಗಿದಾಗ ವೈರಾಗ್ಯ ಎನ್ನುವ ಯೋಚನೆಯನ್ನೇ ಬಿಟ್ಟುಬಿಡುತ್ತಾನೆ ಎಂದು ಅರ್ಥ ಎಂದು ಹೇಳಲಾಗಿದೆ. ಪ್ರಸವದ ವೈರಾಗ್ಯ, ಇದು ವೈರಾಗ್ಯದ ಮತ್ತೊಂದು ಶ್ಲೋಕ ಆಗಿದ್ದು, ತಾನು ಪ್ರಸವದ ನೋವು ಅನುಭವಿಸುವಾಗ, ಮತ್ತೊಮ್ಮೆ ಗಂಡನ ಜೊತೆಗೆ ಸೇರಬಾರದು ಎಂದು ಅಂದುಕೊಳ್ಳುತ್ತಾರೆ.
ಆಗ ಗಂಡನ ಹತ್ತಿರ ಕೂಡ ಹೋಗುವುದಿಲ್ಲ ಎಂದು ಪ್ರಮಾಣ ಮಾಡಿರುತ್ತಾಳೆ. ಪುರಾಣಗಳಲ್ಲಿ ವೈರಾಗ್ಯದ ಮಾತುಗಳನ್ನು ಕೇಳಿ ಈಗ ನಾವು ಹಾಗೆ ಇರೋಣ ಎಂದು ಯೋಚನೆ ಬರುವುದು ಸಹಜ. ಆದರೆ ಆ ಪ್ರವಚನ ಕೇಳಿ ಹೊರಬರುತ್ತಿದ್ದ ಹಾಗೆಯೇ ಅದೆಲ್ಲವನ್ನು ಮರೆತುಬಿಡುತ್ತಾರೆ, ಇರುತ್ತಿದ್ದ ಹಾಗೆಯೇ ಇರುತ್ತಾರೆ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯರು. ನಾವು ನೋವಿನಲ್ಲಿ ಇದ್ದಾಗ ಬರುವ ವೈರಾಗ್ಯ ಕೆಲವು ಸಾರಿ ಬದುಕಿನ ಬಿಂದುವೆ ಕಂಪಿಸುವ ಹಾಗೆ ಮಾಡುತ್ತದೆ.
ಈ ಕಂಪನವು ಕೆಲವು ಕ್ಷಣಗಳ ಮಾತ್ರ ಇರುತ್ತದೆ ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿಯಲ್ಲಿ ವೈರಾಗ್ಯದ ಭಾವನೆ ಆರಂಭವಾದರೆ ಬದುಕಿನಲ್ಲಿ ಎಲ್ಲವೂ ಸಾಕು ಅನ್ನಿಸಿಬಿಡುತ್ತದೆ. ಆದರೆ ಈ ಭಾವನೆ ಯಾವಾಗಲೂ ಇದ್ದರೆ, ನಿಮಗೆ ಮಕ್ತಿ ಸಿಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.