ಆರೋಗ್ಯದಲ್ಲಿ ಸಣ್ಣ ಮಟ್ಟದ ಏರುಪೇರಾದರೂ ಈಗಿನ ಕಾಲಮಾನದ ಮೊದಲ ಅಯ್ಕೆ ಡಾಕ್ಟರ್. ಇನ್ನು. ವೈದ್ಯರು ಗುಣ ಪಡಿಸಲು ಆಗದೆ ಇರುವ ಏಷ್ಟೋ ಕಾಯಿಲೆಗಳು ಈ ಒಂದು ದೇವಸ್ತಾನಕ್ಕೆ ಹೋಗಿ ಬಂದ್ರೆ 100% ಗುಣವಾಗುತ್ತದೆ. ಯಾವುದು ಈ ದೇವಸ್ಥಾನ?, ಎಲ್ಲಿದೆ?. ನೋಡೋಣ ಬನ್ನಿ.
ನಗರದಲ್ಲಿ ಈಗಿನ ಜೀವನ ಶೈಲಿ ಮತ್ತು ಆಹಾರ ಪದ್ಧತಿಗೆ ಜನರಿಗೆ ಬೇಗ ಪಾರ್ಶ್ವವಾಯು, ಕಣ್ಣಿನ ಸಮಸ್ಯೆಗಳು, ಅತಿ ಹೆಚ್ಚು ತಲೆನೋವು ( ಮೈಗ್ರೇನ್ ), ಎಲ್ಲಾ ರೀತಿಯ ಚರ್ಮ ಸಮಸ್ಯೆ ಕಾಣಿಸುತ್ತದೆ.ಈ ರೀತಿಯ ಸಮಸ್ಯೆಗಳು ಎದುರಾದಾಗ ಈ ಚತುರ್ದಾಸ್ ಜಿ ಮಹಾರಾಜ ಬುಠಟಿ ದಾಂ ಎನ್ನುವ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿದರೆ ಸಾಕು ಎಲ್ಲಾ ರೋಗವು ಗುಣವಾಗುತ್ತದೆ.
ಜೋಧಪುರ್’ನಿಂದ ಈ ದೇವಸ್ಥಾನಕ್ಕೆ ಹೋಗಲು ರೈಲು, ಟ್ಯಾಕ್ಸಿ, ಸರ್ಕಾರಿ ಬಸ್ ಈ ರೀತಿಯ ಎಲ್ಲಾ ಸಾರಿಗೆ ವ್ಯವಸ್ಥೆ ಇದೇ. ಈ ದೇವಸ್ಥಾನಕ್ಕೆ ದೇವರ ದರ್ಶನ ಮಾಡುವುದಕ್ಕೆ ಬರುವ ಭಕ್ತರಿಗೆ ವಸತಿ, ಊಟ, ದರ್ಶನ ಎಲ್ಲಾ ಉಚಿತ ಅದು ಈ ದೇವಸ್ಥಾನದ ಒಂದು ವಿಶೇಷತೆ.
ದೇವರಿಗೆ ಯಾವ ರೀತಿಯ ಕಾಣಿಕೆ ಸಮರ್ಪಣೆ ಮಾಡವ ಆಗಿಲ್ಲ ಭಕ್ತಿಯಿಂದ ಬಂದು ಸೇವೆ ಸಲ್ಲಿಸಿ ರೋಗವನ್ನು ಗುಣ ಪಡಿಸಿಕೊಂಡು ಹೋಗಬಹುದು. ವಿದೇಶ ಮತ್ತು ನಮ್ಮ ದೇಶದ ಬೇರೆ ಬೇರೆ ರಾಜ್ಯದ ಜನರು ಕೂಡ ದೇವರ ದರ್ಶಕ್ಕೆಂದು ಹೋಗುವರು ಅದರಲ್ಲಿ, ನಮ್ಮ ಕರ್ನಾಟಕದ ಭಕ್ತಾದಿಗಳು ಕೂಡ ಇದ್ದಾರೆ.
ಈ ದೇವಸ್ಥಾನದಲ್ಲಿ ಇರುವ ದೇವರು ಚತುರ್ದಾಸ್ ಜಿ ಮಹಾರಾಜ್ ಇವರನ್ನು ನಡೆದಾಡುವ ದೇವರು ಎಂದು ಕರೆಯುವರು ಇವರು ಜೀವಂತವಾಗಿ ಸಮಧಿಯಾದ ದೈವಪುರುಷರು. ಇವರು ಸುಮಾರು 500 ವರ್ಷಗಳ ಹಿಂದೆ ಬುಠಟಿ ಎನ್ನುವ ಹಳ್ಳಿಯಲ್ಲಿ ಬಂದು ನೆಲೆಸಿದರು.
ಇವರು ಹೇಗೆ ಬುಠಟಿ ಹಳ್ಳಿಗೆ ಬಂದರು ಅವರ ಕುಟುಂಬದವರು ಯಾರು ಇದರ ಯಾವುದೇ ಮಾಹಿತಿ ಲಭ್ಯವಿಲ್ಲ. ಚತುರ್ದಾಸ್ ಜಿ ಮಹಾರಾಜ್ ಅವರು ರೋಗ ಇರುವವರ ಕೈ ಮುಟ್ಟಿದರೆ ಸಾಕು ರೋಗ ಗುಣವಾಗುತಿತ್ತು.ಇವರು 1570ರಲ್ಲಿ ಲಕ್ಷಾಂತರ ಭಕ್ತರ ಮುಂದೆ ಜೀವಂತ ಸಮಾಧಿ ಆಗುವರು. ಶ್ರೀ ರಾಘವೇಂದ್ರಸ್ವಾಮಿ ಅವರೇ ಹೇಗೆ ಇದಾರೋ ಹಾಗೆ ಈ ಚತುರ್ದಾಸ್ ಜಿ ಮಹಾರಾಜ್ ಅವರು.
ಪಾರ್ಶ್ವವಾಯು, ಕಣ್ಣಿನ ಸಮಸ್ಯೆಗಳು, ಅತಿ ಹೆಚ್ಚು ತಲೆನೋವು ( ಮೈಗ್ರೇನ್ ), ಎಲ್ಲಾ ರೀತಿಯ ಚರ್ಮ ಸಮಸ್ಯೆ ಇರುವವರು ಈ ದೇವಸ್ಥಾನಕ್ಕೆ ಬಂದು 7 ದಿನಗಳ ಕಾಲ ಪರಿಕರಂ ಸೇವೆ ಮಾಡಬೇಕು.
ಪರಿಕರಮ್ ಸೇವೆ ಎಂದರೆ :-ಬೆಳಗ್ಗಿನ ಜಾವ 5.30ಕ್ಕೆ ತಣ್ಣೀರು ಸ್ನಾನ ಮಾಡಿ ದೇವಸ್ಥಾನದ ಹೊರಾಂಗಣದಲ್ಲಿ 108 ಪ್ರದಕ್ಷಿಣೆ ಹಾಕಬೇಕು ಅದನ್ನು ಪೂರ್ಣ ಮಾಡಿದ ನಂತರ ದೇವರ ಮುಂದೆ 11 ಧೀರ್ಘ ದಂಡ ನಮಸ್ಕಾರ ಮಾಡಬೇಕು. ಪುನಃ ಸಂಜೆ 21 ಪ್ರದಕ್ಷಿಣೆ ಹಾಕಿ 11 ಧೀರ್ಘ ದಂಡ ನಮಸ್ಕಾರ ಮಾಡಬೇಕು ಇದರಿಂದ ಒಂದು ದಿನದಲ್ಲಿ ಒಂದು ಪರಿಕರಂ ಸೇವೆ ಪೂರ್ಣ ಮಾಡಿದ ಹಾಗೆ.
7 ದಿನಗಳ ಕಾಲ ಪರಿಕರಮ್ ಸೇವೆ ಮಾಡುವ ಭಕ್ತರಿಗೆ ಊಟ, ವಸತಿ ಎಲ್ಲಾ ಉಚಿತವಾಗಿ ಇರುತ್ತದೆ. ರೋಗ ಇರುವ ವ್ಯಕ್ತಿ ಈ ಸೇವೆ ಮಾಡಲು ಸಾಧ್ಯವಾಗದೇ ಹೋದರೆ ಬೇರೆಯವರು ಈ ಸೇವೆ ಮಾಡಬಹುದು. ಈ ಸೇವೆ ಮಾಡಿ ಮುಂಬರುವ 7 ದಿನಗಳಲ್ಲಿ ಆ ರೋಗ ಗುಣವಾಗುತ್ತದೆ.
ರೋಗ ಗುಣವಾದ ಒಂದು ವರ್ಷದ ಒಳಗೆ ಮತ್ತೆ ಚತುರ್ದಾಸ್ ಜಿ ಮಹಾರಾಜ್ ಅವರ ದರ್ಶನ ಪಡೆದು ಎರಡು ದಿನ ಅಲ್ಲೇ ಇದ್ದು ಧ್ಯಾನ ಮಾಡಿ ಬರಬೇಕು. ಈ ದೇವಸ್ಥಾನದ ಪೂರ್ಣ ವಿಳಾಸ ಯಾವುದು?.
ದೇವಸ್ಥಾನದ ವಿಳಾಸ :-ರಾಜಸ್ಥಾನ ರಾಜ್ಯದ ಜೋಧಪುರ್ ನಗರದಿಂದ 146 ಕಿಲೋಮೀಟರ್ ಹೋದರೆ ಬುಠಟಿ ಹಳ್ಳಿ ಸಿಗುತ್ತದೆ ಅಲ್ಲೇ ಈ ಚತುರ್ದಾಸ್ ಜಿ ಮಹಾರಾಜ ಬುಠಟಿ ದಾಂ ದೇವಸ್ಥಾನ ಇರುವುದು.
ದೂರವಾಣಿ ಸಂಖ್ಯೆ :- 01412209860
ದೇವಸ್ಥಾನದ ವೆಬ್ಸೈಟ್ :-https://butatidham.org