ಇನ್ನೇನು ಈ ಮೇ ತಿಂಗಳಿಗೆ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆ (Karnataka State Assembly Elections) ಪ್ರಾರಂಭ ಆಗಲಿದ್ದು ಎಲ್ಲಾ ಕಡೆ ಎಲ್ಲಾ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಪ್ರಚಾರವನ್ನು ಮಾಡುತ್ತಿವೆ. ಅವುಗಳಲ್ಲಿಯೂ ಕಾಂಗ್ರೆಸ್ ಪಕ್ಷ (Congress party) ಈ ಬಾರಿ ಏನಾದರೂ ಮಾಡಿ ಅಧಿಕಾರಕ್ಕೆ ಬರಲೇಬೇಕು ಎನ್ನುವ ಕಾರಣಕ್ಕಾಗಿ ವಿಶೇಷವಾದ ರೀತಿಯಲ್ಲಿ ಪ್ರಚಾರವನ್ನು ಮಾಡುತ್ತಿದ್ದು ಭರವಸೆಗಳನ್ನು ಕೂಡ ದೊಡ್ಡ ಮಟ್ಟದಲ್ಲಿ ನೀಡುತ್ತಿವೆ‌.

ಈಗಾಗಲೇ ಚುನಾವಣಾ ಪ್ರಚಾರದಲ್ಲಿ ಭರವಸೆಗಳನ್ನು ಘೋಷಣೆ ಮಾಡುತ್ತಾ ಕಾಂಗ್ರೆಸ್ ಪಕ್ಷ ತಿಂಗಳಿಗೆ ಉಚಿತ 10 ಕೆಜಿ ಅಕ್ಕಿ ಹಾಗೂ ಪ್ರತಿ ತಿಂಗಳಿಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದೆ. ಅದರ ಜೊತೆಗೆ ಕುಟುಂಬದ ಒಬ್ಬ ಮಹಿಳೆಗೆ ಪ್ರತಿ ತಿಂಗಳಿಗೆ 2,000 ಹಣವನ್ನು ಕೂಡ ನೀಡುವುದಾಗಿ ಘೋಷಿಸಲಾಗಿದೆ. ಈ ಭರವಸೆಯಿಂದ ಈಗಾಗಲೇ ಜನರಲ್ಲಿ ವಿಶೇಷವಾದ ಉತ್ಸಾಹ ಕೂಡ ಮೂಡಿದೆ ಎಂದು ಹೇಳಬಹುದು.

ಅದರ ಜೊತೆಗೇನೆ ಕಾಂಗ್ರೆಸ್ ಪಕ್ಷ (Congress party) ನೀಡಲು ಹೊರಟಿರುವ ಮತ್ತೊಂದು ಯೋಜನೆಯನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ಅದೇ ಪಕ್ಷಕ್ಕೆ ವೋಟ್ ಹಾಕಿದ್ರು ಹಾಕಬಹುದು. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದ್ರೂ ಕೂಡ ಸರಿಯಾದ ಕೆಲಸ ಸಿಗುತ್ತಿಲ್ಲ ಹೀಗಾಗಿಯೇ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷ ನೀಡಲು ಹೊರಟಿರುವಂತಹ ಹೊಸ ಆಫರ್ ಕೇಳಿದ್ರೆ ನೀವು ಕೂಡ ಆಶ್ಚರ್ಯಪಡ್ತೀರಾ.

ಹೌದು ಮಿತ್ರರೇ ಕಾಂಗ್ರೆಸ್ ಪಕ್ಷ (Congress party) ಈಗಾಗಲೇ ಪದವಿ ಓದಿರುವಂತಹ ನಿರುದ್ಯೋಗಿಗಳಿಗೆ ಎರಡು ವರ್ಷಗಳವರೆಗೆ ತಿಂಗಳಿಗೆ 3000 ಭತ್ಯೆ ಹಾಗೂ ಡಿಪ್ಲೋಮೋ ಓದಿದವರಿಗೆ 1500 ರೂಪಾಯಿ ಸಹಾಯಧನವನ್ನು ನೀಡುವ ಭರವಸೆಯನ್ನು ವ್ಯಕ್ತಪಡಿಸಿದೆ. ಇದು ಕೇವಲ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮಾತ್ರ ಎಂಬುದನ್ನು ಕೂಡ ಪಕ್ಷ ಪ್ರಣಾಳಿಕೆಯಲ್ಲಿ ಒತ್ತಿ ಒತ್ತಿ ಹೇಳಿದೆ. ಇಂತಹ ಭರವಸೆಗಳು ಹಾಗೂ ಆಫರ್ ಗಳು ಸಾಕಷ್ಟು ಬರಬಹುದು ಆದರೆ ಗೆದ್ದ ನಂತರ ಯಾರು ಯಾವ ಕೆಲಸ ಮಾಡುತ್ತಾರೆ ಎಂಬುದನ್ನು ಪ್ರಜೆಗಳಾದ ನಾವೇ ನಿರ್ಧರಿಸಿ ಮತವನ್ನು ನೀಡಬೇಕಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!