ರಾಜ್ಯ ಸರ್ಕಾರವಿರಲಿ ಕೇಂದ್ರ ಸರ್ಕಾರವಿರಲಿ ಬಡತನ ನಿವಾರಣೆ, ಅಪೌಷ್ಟಿಕತೆ ನಿವಾರಣೆ, ಭ್ರಷ್ಟಾಚಾರದ ನಿವಾರಣೆ ಇಂತಹ ಹಲವಾರು ಉದ್ದೇಶಗಳನ್ನು ಇಟ್ಟುಕೊಂಡು ಅನೇಕ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಜಾರಿಗೊಳಿಸುತ್ತಲೇ ಇರುತ್ತದೆ. ಅಂಥವುಗಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಸಿಹಿಸುದ್ದಿಯನ್ನು ನೀಡಿದೆ ಹಾಗಾದರೆ ರಾಜ್ಯ ಸರ್ಕಾರ ನೀಡಿದ ಸಿಹಿಸುದ್ದಿ ಏನೆಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ರಾಜ್ಯ ಸರ್ಕಾರದಿಂದ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಇಲ್ಲಿದೆ ಸಿಹಿ ಸುದ್ಧಿ. ರಾಜ್ಯ ಸರ್ಕಾರದ ನಾಗರಿಕ ಹಾಗೂ ಆಹಾರ ಪೂರೈಕೆ ಸಚಿವ ಕೆ. ಗೋಪಾಲಯ್ಯ ಪ್ರತಿ ತಿಂಗಳು ಸರ್ಕಾರದಿಂದ ಆಹಾರಧಾನ್ಯ ಪಡೆಯುತ್ತಿರುವ ಜನರಿಗೆ ರೇಷನ್ ಅಂಗಡಿಗಳ ಮೂಲಕ ಸಾರಯುಕ್ತ ಅಕ್ಕಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. ಪೌಷ್ಟಿಕ ಆಹಾರದ ಕೊರತೆಯಿಂದ ಬಹಳಷ್ಟು ಜನರು ಬಳಲುತ್ತಿರುವುದರಿಂದ ಸಾಮಾನ್ಯ ಅಕ್ಕಿಯೊಂದಿಗೆ ಸಾರಯುಕ್ತ ಅಕ್ಕಿಯನ್ನು ಮಿಶ್ರಣ ಮಾಡಿಕೊಡಲಾಗುತ್ತದೆ. ಅಕ್ಕಿನುಚ್ಚು ಪುಡಿಮಾಡಿ ಪೋಲಿಕ್ ಆಸಿಡ್, ಜೀವಸತ್ವ, ಕಬ್ಬಿಣ ಅಂಶಗಳನ್ನು ಸೇರಿಸಿ ಸಂಸ್ಕರಿಸಿ ಸಾಮಾನ್ಯ ಅಕ್ಕಿಯೊಂದಿಗೆ ಮಿಶ್ರಣ ಮಾಡಿ ಬಡಕುಟುಂಬದ ಜನರಿಗೆ ಅಂದರೆ ಬಿಪಿಎಲ್ ಕಾರ್ಡುದಾರರಿಗೆ ಕೊಡಲಾಗುತ್ತದೆ.
ಈ ಸಾರಯುಕ್ತ ಅಕ್ಕಿಯನ್ನು ಬಳಸುವುದರಿಂದ ಹಲವು ರೋಗಗಳನ್ನು ಬರದಂತೆ ತಡೆಯಬಹುದು. ಉದಾಹರಣೆಗೆ ರಕ್ತಹೀನತೆ, ಅಪೌಷ್ಟಿಕತೆ, ಬಿಪಿ, ಮಧುಮೇಹದಂತಹ ಹಲವು ಖಾಯಿಲೆಗಳು ಬರದಂತೆ ತಡೆಯುತ್ತದೆ ಹಾಗೂ ಪರಿಹಾರವಾಗುತ್ತದೆ. ಕೆಲವರು ಪಡಿತರ ಅಕ್ಕಿಯನ್ನು ಹಣದ ಆಸೆಗಾಗಿ ಮಾರುತ್ತಾರೆ, ಇದರಿಂದ ಹಣಕ್ಕಾಗಿ ನಡೆಯುವ ಪಡಿತರ ಅಕ್ಕಿಯ ಕಾಳದಂಧೆಯನ್ನು ತಡೆಯಬಹುದು. ಇನ್ನು ಮುಂದೆ ಪಡಿತರ ಅಕ್ಕಿಯನ್ನು ಜಮಾ ಮಾಡಿ ಮಾರುವಂತಿಲ್ಲ. ಹಣ ಕೊಟ್ಟು ಖರೀದಿ ಮಾಡುವುದಾದರೆ ಎಂತಹ ಅಕ್ಕಿಯನ್ನು ಖರೀದಿ ಮಾಡುತ್ತಾರೋ ಅಂತಹ ಅಕ್ಕಿಯನ್ನೇ ಸರ್ಕಾರ ನೀಡಲು ಮುಂದಾಗಿದೆ.
ಬಡಜನರಿಗೆ ಪೌಷ್ಟಿಕಯುಕ್ತ, ಸತ್ವಯುತ, ಒಳ್ಳೆಯ ಅಕ್ಕಿ ಸಿಗಲಿದೆ. ಒಂದು ವೇಳೆ ಯಾರಾದರೂ ಪಡಿತರ ಅಕ್ಕಿಯನ್ನು ಜಮಾ ಮಾಡಿ ಮಾರುವಾಗ ಸಿಕ್ಕಿಬಿದ್ದರೆ ದಂಡ ಹಾಗೂ ಮೂರು ತಿಂಗಳ ರೇಷನ್ ಕೊಡುವುದಿಲ್ಲವೆಂದು ಸರ್ಕಾರದಿಂದ ಆದೇಶವಾಗಿದೆ. ಮೊದಲು ಪ್ರಾಯೋಗಿಕವಾಗಿ ಸತ್ವಯುತ ಅಕ್ಕಿಯನ್ನು ನಾಲ್ಕು ಜಿಲ್ಲೆಗಳಲ್ಲಿ ಕೊಟ್ಟ ನಂತರ ಎಲ್ಲಾ ಜಿಲ್ಲೆಗಳಲ್ಲಿ ಕೊಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಅಪೌಷ್ಟಿಕತೆಯಿಂದ ಬಳಲಿಕೆ ಹೆಚ್ಚಾಗಿರುವುದರಿಂದ ಅದನ್ನು ನಿವಾರಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಬಡ ಜನರು ಸಹ ಒಳ್ಳೆಯ ಪೌಷ್ಠಿಕ ಆಹಾರವನ್ನು ಸೇವಿಸಲು ಅವಕಾಶ ಮಾಡುವ ಮೂಲಕ ಅಪೌಷ್ಟಿಕತೆಯನ್ನು ನಿವಾರಿಸಲು ಸರ್ಕಾರ ಮಾಡಿದ ಈ ನಿರ್ಧಾರ ಪ್ರಶಂಸನೀಯವಾಗಿದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ, ಅದರಲ್ಲೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ತಿಳಿಸಿ ಅಪೌಷ್ಟಿಕತೆಯನ್ನು ನಿವಾರಿಸುವಲ್ಲಿ ಸರ್ಕಾರದೊಂದಿಗೆ ನಾವು ಕೂಡ ಹೆಜ್ಜೆ ಹಾಕೋಣ.