Bhagyalakshmi Bond: ಕಾಂಗ್ರೆಸ್ ಸರ್ಕಾರವು ತಮ್ಮದು ಬಡವರ ಪರವಾಗಿರುವ ಸರ್ಕಾರ ಎಂದು ಸಾಬೀತು ಮಾಡಿದೆ. ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಸೌಲಭ್ಯಗಳು, ಯೋಜೆನೆಗಳು ಇದೆಲ್ಲವೂ ಬಡವರಿಗೆ ಸಹಾಯ ಆಗುತ್ತಿದೆ. ಹಲವು ವರ್ಷಗಳ ಹಿಂದೆ ಸರ್ಕಾರ ಜಾರಿಗೆ ತಂದ ಯೋಜನೆಗಳಲ್ಲಿ ಒಂದು ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ. ಇದು ಹೆಣ್ಣುಮಗುವನ್ನು ಹೆತ್ತಿರುವ ತಂದೆ ತಾಯಿಗೆ ಸಹಾಯ ಮಾಡುತ್ತಿರುವ ಯೋಜನೆ ಆಗಿದೆ.
ಈಗಾಗಲೇ ಬಡವರ್ಗಕ್ಕೆ ಸೇರಿದ ಸಾಕಷ್ಟು ಹೆಣ್ಣುಮಕ್ಕಳ ತಂದೆ ತಾಯಿ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯ ಸೌಲಭ್ಯವನ್ನು ಪಡೆದು, ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ಒಂದು ವೇಳೆ ನಿಮಗೆ ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೆ ಹೋದರೆ, ಇಂದು ನಿಮಗೆ ತಿಳಿಸಿಕೊಡುತ್ತೇವೆ ನೋಡಿ. ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಇರುವುದು ವಿಶೇಷವಾಗಿ ಬಡತನದ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಿಗೆ, ಈ ಕುಟುಂಬದಲ್ಲಿ 2006ರ ಮಾರ್ಚ್ 31ರ ನಂಟಿಕ್ರ ಜನಿಸಿದ ಹೆಣ್ಣುಮಕ್ಕಳು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ.
ನಿಮ್ಮ ಮಗು ಹುಟ್ಟಿದ ಒಂದು ವರ್ಷಗಳ ಒಳಗೆ ಬರ್ತ್ ಸರ್ಟಿಫಿಕೇಟ್ ಕೊಟ್ಟು, ಈ ಯೋಜನೆಗೆ ರಿಜಿಸ್ಟರ್ ಮಾಡಿಸಿಕೊಳ್ಳಬಹುದು. ಈ ಯೋಜೆನೆಯನ್ನು ಒಂದು ಕುಟುಂಬದಲ್ಲಿ ಜನಿಸುವ ಇಬ್ಬರು ಹೆಣ್ಣುಮಕ್ಕಳಿಗೆ ಪಡೆಯಬಹುದು. ತಂದೆ ತಾಯಿಗಳು ಈ ಯೋಜನೆಯ ಸೌಲಭ್ಯಕ್ಕೆ ಅರ್ಹರಾಗುತ್ತಾರೆ. ಈ ಯೋಜನೆಯ ಪ್ರಮುಖ ಕಂಡೀಷನ್, ಕುಟುಂಬದಲ್ಲಿ 3ಕ್ಕಿಂತ ಹೆಚ್ಚು ಮಕ್ಕಳು ಇರಬಾರದು ಎನ್ನುವುದಾಗಿದೆ. ರಿಜಿಸ್ಟರ್ ಮಾಡಿಸಿಕೊಂಡ ಮಗುವಿನ ಹೆಸರಿನಲ್ಲಿ ಸರ್ಕಾರವು ₹10,000 ರೂಪಾಯಿ ಫಿಕ್ಸ್ಡ್ ಡೆಪಾಸಿಟ್ ಇಡುತ್ತದೆ.
ಈ ಹಣಕ್ಕೆ ಬಡ್ಡಿ ಸೇರಿ, ಹೆಣ್ಣುಮಗುವಿಗೆ 18 ವರ್ಷ ತುಂಬಿದ ಬಳಿಕ ಈ ಯೋಜನೆಯ ಹಣವನ್ನು ಪೂರ್ತಿಯಾಗಿ ಬಡ್ಡಿ ಜೊತೆಗೆ ಪಡೆಯಬಹುದು. ಈ ಯೋಜನೆಯಲ್ಲಿ ಕುಟುಂಬದ ಮೊದಲ ಮಗುವಿಗೆ ಸುಮಾರು ₹40,918 ರೂಪಾಯಿಗಳನ್ನು ನೀಡಲಾಗುತ್ತದೆ. ಹಾಗೆಯೇ 2008ರ ಆಗಸ್ಟ್ ತಿಂಗಳ ನಂತರ ಜನಿಸಿದ ಮಕ್ಕಳಿಗೆ ₹19,300 ರೂಪಾಯಿ ಠೇವಣಿ ಇಡಲಾಗುತ್ತದೆ. ಮೊದಲ ಮಗುವಿಗೆ 19,300 ಎರಡನೇ ಮಗುವಿಗೆ 18,350 ರೂಪಾಯಿಗಳನ್ನು ಜಾಸ್ತಿ ಮಾಡಿದೆ ಸರ್ಕಾರ.
ಈ ರೀತಿಯಾಗಿ ₹1,00,052 ಮತ್ತು ₹1,00,097 ರೂಪಾಯಿಗಳು ಠೇವಣಿ ರೂಪದಲ್ಲಿ ಸಿಗಲಿದೆ. ಇದಿಷ್ಟೆ ಅಲ್ಲದೆ ಈ ಯೋಜನೆಯಲ್ಲಿ ವಿಮೆಯ ಸೌಲಭ್ಯ ಕೂಡ ಇದೆ, ಒಂದು ವೇಳೆ ಹೆಣ್ಣುಮಗು ಅಪಘಾತಕ್ಕೆ ಒಳಗಾದರೆ ಚಿಕಿತ್ಸೆಗಾಗಿ ₹25,000 ರೂಪಾಯಿಯವರೆಗು ವಿಮೆಯ ಮೊತ್ತವನ್ನು ಪಡೆದುಕೊಳ್ಳಬಹುದು. ನ್ಯಾಚುರಲ್ ಡೆತ್ ಆಗಿ ಸಾವು ಹೊಂದಿದರೆ ₹42,500 ವಿಮೆಯ ಮೊತ್ತ, ಅಪಘಾತವಾಗಿ ಸಾವು ಹೊಂದಿದರೆ ₹1,00,000 ವರೆಗು ವಿಮೆಯ ಹಣವನ್ನು ಪಡೆಯಬಹುದು.
ಕೆಲವು ವಿಷಯಗಳನ್ನು ನೀವು ಇಲ್ಲಿ ಪಾಲಿಸಬೇಕಾಗುತ್ತದೆ. ನಿಮ್ಮ ಮಗುವಿಗೆ ಬರ್ತ್ ಸರ್ಟಿಫಿಕೇಟ್ ಮಾಡಿಸಿರಬೇಕು. ಆರೋಗ್ಯ ಇಲಾಖೆಯಲ್ಲಿ ವ್ಯಾಕ್ಸಿನ್ ಗಳನ್ನು ಹಾಕಿಸಿರಬೇಕು, ಅಂಗನವಾಡಿಗೆ ರಿಜಿಸ್ಟರ್ ಮಾಡಿಸಿರಬೇಕು. ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಶಾಲೆಗೆ ಮಗುವನ್ನು ದಾಖಲಿಸಿರಬೇಕು. ಮಗು ಬಾಲಕಾರ್ಮಿಕರಾಗಿರಬಾರದು, 18 ವರ್ಷದವರೆಗು ನಿಮ್ಮ ಹೆಣ್ಣುಮಗುವಿಗೆ ಮದುವೆ ಮಾಡಬಾರದು.