ಈ ಆಗಸ್ಟ್ ತಿಂಗಳಿನಲ್ಲಿ ಬರುವ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯೆ, ಆಷಾಢ ಅಮಾವಾಸ್ಯೆ ಎಂದು ಕೂಡ ಕರೆಯಲಾಗುತ್ತದೆ. ಈ ದಿನ ಪೂಜೆ ಮಾಡುವ ವಿಧಾನ ಯಾವುದು ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ. ಆಗಸ್ಟ್ 3 ನೇ ತಾರೀಖು ಶನಿವಾರ ಮಧ್ಯಾಹ್ನ 3:50  ಸಮಯದಲ್ಲಿ ಅಮಾವಾಸ್ಯೆಯ ತಿಥಿ ಪ್ರಾರಂಭ ಆಗುತ್ತದೆ. ಆಗಸ್ಟ್ 4 ನೇ ತಾರೀಖು ಭಾನುವಾರ ಸಂಜೆ 4:45 ನಿಮಿಷಕ್ಕೆ ಅಮಾವಾಸ್ಯೆ ತಿಥಿ ಪೂರ್ಣ ಆಗುತ್ತದೆ. ಭಾನುವಾರ ಭೀಮನ ಅಮಾವಾಸ್ಯೆ ಇರುವ ಕಾರಣ ಅದು ಹೆಚ್ಚು ವಿಶೇಷತೆಯನ್ನು ಹೊಂದಿದೆ. ಈ ಆಚರಣೆಯನ್ನು ಮಾಡುವ ವಿಧಾನ.

ಬೆಳಗ್ಗೆ 6:15 ನಿಮಿಷದಿಂದ ಮಧ್ಯಾಹ್ನ 12:00 ಗಂಟೆಯ ಸಮಯದವರೆಗೂ ಒಳ್ಳೆಯ ಮುಹೂರ್ತ ಇರುತ್ತದೆ. ದೇವರಿಗೆ ಕಂಕಣ ದಾರ ಮಾಡಲು 3 ಎಳೆ ಇಲ್ಲ 5 ಎಳೆ ದಾರವನ್ನು ತೆಗೆದುಕೊಂಡು ಅದಕ್ಕೆ, ಅರಿಶಿಣದ ಕೊಂಬನ್ನು ಕಟ್ಟಬೇಕು. ಈ ವ್ರತವನ್ನು ಮದುವೆ ಆಗಿರುವ ಮತ್ತು ಮದುವೆ ಆಗುವ ಕನ್ಯೆಯರು ಸಹ ಆಚರಣೆ ಮಾಡಬಹುದು. ಮದುವೆ ಆಗಿರುವ ಹೆಣ್ಣು ಮಕ್ಕಳು ಗಂಡ, ಅಣ್ಣ ತಮ್ಮಂದಿರು, ತಂದೆ ಅವರ ಆಯಸ್ಸು ಆರೋಗ್ಯ ವೃದ್ಧಿಯಾಗಿ ಎಲ್ಲ ರೀತಿಯ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿ ಎಂದು ಬೇಡಿಕೊಂಡು ಜ್ಯೋತಿರ್  ಭೀಮೇಶ್ವರ ವ್ರತವನ್ನು ಮಾಡುವರು.

ಮದುವೆ ಆಗಲು ಬಯಸುವ ಹೆಣ್ಣು ಮಕ್ಕಳು ಒಳ್ಳೆಯ ಗಂಡ ಸಿಗಲಿ ಎಂದು ಜ್ಯೋತಿರ್ ಭೀಮೇಶ್ವರ ವ್ರತವನ್ನು ಆಚರಣೆ ಮಾಡಬಹುದು. ಶಿವ ಪಾರ್ವತಿಯ ಸ್ವರೂಪವಾದ ಎರಡು ದೀಪದ ಕಂಬವನ್ನು ಇಟ್ಟು ಪೂಜೆ ಮಾಡಬೇಕು ದೀಪ ಬೆಳ್ಳಿ ಅಥವಾ ತಾಮ್ರದ್ದು ಆಗಿರಬೇಕು. ನಂತರ ಗಂಡನ ಪಾದದ ಪೂಜೆಯನ್ನು ಮಾಡಬಹುದು. ಮದುವೆ ಆಗಿರುವ ಸ್ತ್ರೀಯರು 9 ಎಳೆಯ ಹಳದಿ ದಾರವನ್ನು ತೆಗೆದುಕೊಳ್ಳಬೇಕು ಅಥವಾ ಬಿಳಿಯ ದಾರಕ್ಕೆ ಅರಿಶಿಣವನ್ನು ಹಚ್ಚಿ ಹಳದಿ ಮಾಡಬಹುದು. ಒಂಬತ್ತು ಎಳೆಯ ದಾರಕ್ಕೆ 12 ಗಂಟುಗಳನ್ನು ಹಾಕಬೇಕು. ಮೊದಲಿಗೆ ಮಧ್ಯ ಭಾಗಕ್ಕೆ ಒಂದು ಗಂಟನ್ನು ಹಾಕಿ ನಂತರ ಎರಡು ಭಾಗಕ್ಕೆ ಸಮವಾಗಿ ಐದೇ ಐದು ಗಂಟೆಗಳನ್ನು ಹಾಕಬೇಕು ನಂತರ ಸೇವಂತಿಗೆ ಹೂವನ್ನು ಸೇರಿಸಿದರೆ ಮತ್ತೊಂದು ಗಂಟು ಆಗುತ್ತದೆ. ಈ 12 ಗಂಟುಗಳು 12 ಜ್ಯೋತಿರ್ ಲಿಂಗಗಳ ಪ್ರತೀಕ.

ಮದುವೆ ಆಗದೆ ಇರುವ ಹೆಣ್ಣು ಮಕ್ಕಳು ಐದು ಎಳೆಯ ದಾರವನ್ನು ತೆಗೆದುಕೊಂಡು 5 ಗಂಟೆಗಳನ್ನು ಹಾಕಬೇಕು ಮೊದಲಿಗೆ 4 ಗಂಟುಗಳನ್ನು ಹಾಕಿ ಹೂವಿನ ಜೊತೆ 5 ನೇ ಗಂಟನ್ನು ಹಾಕಬೇಕು. ಪೂಜೆ ಮಾಡುವ ಸ್ಥಳವನ್ನು ಸ್ವಚ್ಛ ಮಾಡಿ ರಂಗೋಲಿ ಹಾಕಿ ಪೀಠವನ್ನು ಇರಿಸಬೇಕು. ಪೀಠದ ಮೇಲೆ ತಾಮ್ರ ಅಥವಾ ಇತ್ತಾಳೆಯ ತಟ್ಟೆಯನ್ನು ಇರಿಸಬೇಕು. ಮುತ್ತುಕದ ಎಲೆ ಇದ್ದರೂ ಅದನ್ನು ಬಳಕೆ ಮಾಡಬಹುದು. ಸ್ಟೀಲ್ ಪ್ಲೇಟ್’ಗಳನ್ನು ಬಳಕೆ ಮಾಡುವಂತಿಲ್ಲ. ಅಡಿಕೆ ಎಲೆಗಳನ್ನು ಕೂಡ ಉಪಯೋಗ ಮಾಡಬಹುದು. ತಟ್ಟೆಯ ಮೇಲೆ ಅಕ್ಕಿಯನ್ನು ಹಾಕಿ ಓಂ ಮತ್ತು ಶ್ರೀಂ ಎನ್ನುವ ಬೀಜಾಕ್ಷರಿ ಮಂತ್ರವನ್ನು ಅರಿಶಿಣದಿಂದ ಬರೆಯಬೇಕು.

ಅದರ ಮೇಲೆ ಎರಡು ವೀಳ್ಯದೆಲೆಯನ್ನು ಇರಿಸಿ ಎರಡಕ್ಕೂ ಅರಿಶಿಣ ಕುಂಕುಮವನ್ನು ಹಚ್ಚಿ ಅದರ ಮೇಲೆ ಎರಡು ಬೆಳ್ಳಿ ಅಥವಾ ತಾಮ್ರದ ದೀಪದ ಕಂಬಗಳನ್ನು ಇರಿಸಬೇಕು. ಈ ಎರಡು ದೀಪಗಳು ಶಿವ ಪಾರ್ವತಿಯ ಸ್ವರೂಪ. ಹಿಂಭಾಗದಲ್ಲಿ ಶಿವ ಪಾರ್ವತಿಯ ಫೋಟೋವನ್ನು ಇರಿಸಬಹುದು ದೀಪಗಳನ್ನು ಒಟ್ಟಿಗೆ ಇಡಬೇಕು. ಎರಡು ದೀಪಗಳ ಮುಂದೆ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಬೇಕು. ಗಣೇಶನಿಗೂ ಗರಿಕೆ, ಬಿಳಿ ಎಕ್ಕದ ಹೂವು ಇಟ್ಟು ಅಲಂಕಾರ ಮಾಡಬೇಕು. ಮಲ್ಲಿಗೆ ಹೂವಿನಿಂದ ಎರಡು ದೀಪಗಳಿಗೆ ಅಲಂಕಾರ ಮಾಡಿದರೆ ಹೆಚ್ಚು ಶ್ರೇಷ್ಠ. ಎರಡು ದೀಪಕ್ಕೂ ಅರಿಶಿಣ ಕೊಂಬಿನಿಂದ ತಯಾರು ಮಾಡಿದ ಕಂಕಣವನ್ನು ಕಟ್ಟಬೇಕು.

ಈ ದೀಪಗಳಿಗೆ ತುಪ್ಪವನ್ನು ಹಾಕಿ ದೀಪವನ್ನು ಬೆಳಗಬೇಕು. ಪೂಜೆಗೆ ಬಿಲ್ವಪತ್ರೆ, ತುಂಬೆ ಹೂವು, ಮಲ್ಲಿಗೆ ಹೂವು, ತಾವರೆ ಹೂವು ಮತ್ತು ಕೆಂಪು ದಾಸವಾಳವನ್ನು ಉಪಯೋಗ ಮಾಡುವುದು ಹೆಚ್ಚು ಒಳ್ಳೆಯದು. ಬೆಳಗ್ಗೆ ನೈವೇದ್ಯಕ್ಕೆ ಹಾಲು, ಹಣ್ಣು ಮತ್ತು ಗೋಧಿ ಪಾಯಸವನ್ನು ಮಾಡಿ ಇಡಬೇಕು. ಬೆಲ್ಲ ಮತ್ತು ಗೋಧಿ ಶಿವನಿಗೆ ಪ್ರಿಯವಾದ ಆಹಾರ. ಸಂಜೆಯ ವೇಳೆಗೆ ದಾಳಿಂಬೆ ಹಾಕಿ ಮೊಸರನ್ನವನ್ನು ನೈವೇದ್ಯ ಮಾಡಬೇಕು. ಪೂಜೆಯ ಸಿದ್ಧತೆ ಮುಗಿದ ನಂತರ ಶಿವ ಪಾರ್ವತಿಯ ಪ್ರತೀಕ ಎಂದು ಇರುವ ದೀಪಗಳ ಜೊತೆಗೆ ಮತ್ತು ಎರಡು ದೀಪಗಳನ್ನು ಬೆಳಗಬೇಕು.

ಇಲ್ಲವೇ ಕಾಮಾಕ್ಷಿ ದೀಪವನ್ನು ಸಹ ಹಚ್ಚಬಹುದು. ವ್ರತದ ದಾರವನ್ನು ದೇವರ ಮುಂದೆ ಇಟ್ಟು ಅರಿಶಿಣ ಕುಂಕುಮ ಹಚ್ಚಿ ನಮಸ್ಕಾರ ಮಾಡಿ ಗಂಡನಿಗೆ ಹೆಂಡತಿ ಹೆಂಡತಿಗೆ ಗಂಡ ಕಟ್ಟಬೇಕು. ಮದುವೆ ಆಗದೆ ಇರುವ ಹೆಣ್ಣು ಮಕ್ಕಳು ತಾಯಿಯ ಕೈಯಲ್ಲಿ ಈ ದಾರವನ್ನು ಕಟ್ಟಿಸಿಕೊಳ್ಳಬಹುದು. ಪೂಜೆಯ ಸಮಯದಲ್ಲಿ ಸಂಕಲ್ಪವನ್ನು ಮಾಡಬೇಕು. ಕೈಯಲ್ಲಿ ಹೂವು ಅಕ್ಷತೆಯನ್ನು ಇಟ್ಟುಕೊಂಡು. ಗಣಪತಿಯನ್ನು ಪ್ರಾರ್ಥನೆ ಮಾಡಿ ಮನೆದೇವರನ್ನು ಸ್ಮರಣೆ ಮಾಡುತ್ತಾ. ಶಿವ ಪಾರ್ವತಿ ಹಾಗೂ ಲಕ್ಷ್ಮೀ ನಾರಾಯಣರ ಧ್ಯಾನ ಮಾಡುತ್ತಾ.

ಕೈಯಲ್ಲಾದಷ್ಟು ಶಕ್ತಿಯಿಂದ ವ್ರತವನ್ನು ಮಾಡುತ್ತಿದ್ದೇನೆ ಎಂದು ಹೇಳಿ ಕೈಯಲ್ಲಿ ಇರುವ ಅಕ್ಷತೆಯನ್ನು ಒಂದು ತಟ್ಟೆಯ ಮೇಲೆ ಬಿಡಬೇಕು. ಶಿವನ ಅಷ್ಟೋತ್ತರವನ್ನು ಹಾಗೂ ದುರ್ಗಾ ದೇವಿಯ ಸ್ತೋತ್ರವನ್ನು ಹೇಳಬೇಕು. ಸಾಧ್ಯವಾದರೆ ದುರ್ಗಾ ಅಷ್ಟೋತ್ತರ ಹೇಳುತ್ತಾ ಕುಂಕುಮ ಅರ್ಚನೆ ಮಾಡಬೇಕು. ಅರ್ಚನೆಗೆ ಬಿಲ್ವಪತ್ರೆ ಹಾಗೂ ಬಿಡಿ ಹೂವುಗಳನ್ನು ಬಳಕೆ ಮಾಡಬೇಕು. ಸಂಜೆ 5:30 ರ ನಂತರ ಹೊಸ್ತಿಲ ಮೇಲೆ ದೀಪವನ್ನು ಹಚ್ಚಿ ಹಾಗೂ ತುಳಸಿ ಗಿಡದ ಮುಂದೆ ಕೂಡ ದೀಪವನ್ನು ಹಚ್ಚಬೇಕು. ಲಲಿತಾ ಸಹಸ್ರನಾಮ ಅಥವಾ ದುರ್ಗಾ ಸಪ್ತಶತಿಯ ಪಾರಾಯಣ ಮಾಡಬೇಕು.

ಸ್ತೋತ್ರ ಹೇಳಲು ಬಾರದೇ ಇದ್ದ ಜನರು ಸ್ತೋತ್ರವನ್ನು ಕೇಳಬಹುದು ಅಕ್ಷತೆಯನ್ನು ಕೈಯಲ್ಲಿ ಹಿಡಿದು ದೇವರಿಗೆ ಪೂಜೆಯ ಕೊನೆಯಲ್ಲಿ ಸ್ವಲ್ಪ ಸಮರ್ಪಣೆ ಮಾಡಿ ನಂತರ ತಲೆಯ ಮೇಲೆ ಪೂಜೆ ಮಾಡಿದವರು ಮತ್ತು ಮನೆಯವರು ಹಾಕಿಕೊಳ್ಳಬಹುದು. ರಾತ್ರಿ 9:00 ಸಮಯದ ನಂತರ ದೀಪಗಳನ್ನು ಕದಲಿಸಿ ಸೋಮವಾರ ಇದೆಲ್ಲವನ್ನು ವಿಸರ್ಜನೆ ಮಾಡಬಹುದು. ಅರ್ಚನೆಗೆ ಬಳಕೆ ಮಾಡಿರುವ ಬಿಲ್ವಪತ್ರೆಯನ್ನು ಎತ್ತಿಟ್ಟುಕೊಂಡರೆ ಒಳ್ಳೆಯದು.

ಪೂಜೆಗೆ ಬಳಕೆ ಮಾಡಿರುವ ಬಿಲ್ವಪತ್ರೆಯಲ್ಲಿ ಹಣವನ್ನು ಆಕರ್ಷಣೆ ಮಾಡುವ ಶಕ್ತಿ ಹೆಚ್ಚಾಗಿ ಇರುತ್ತದೆ. ಅದರಿಂದ, ಅದನ್ನು ಹಣದ ಪೆಟ್ಟಿಗೆ ಮತ್ತು ಶುಭ ಕಾರ್ಯಕ್ಕೆ ಹೋಗುವ ಸಮಯದಲ್ಲಿ ತೆಗೆದುಕೊಂಡು ಹೋಗಬಹುದು. ಬಿಲ್ವಪತ್ರೆ ಎಲೆಯಲ್ಲಿ ಹೆಚ್ಚು ಶಕ್ತಿ ಇರುತ್ತದೆ ಅದಕ್ಕೆ ಅದನ್ನು ದುಸ್ವಪ್ನ ಬೀಳುವಂತೆ ಇದ್ದರೇ ದಿಂಬಿನ ಕೆಳಗೆ ಇಡಬಹುದು ಇದರಿಂದ, ಯಾವ ಕೆಟ್ಟ ಕನಸು ಬೀಳುವುದಿಲ್ಲ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!