ಈಗಿನ ಕಾಲದಲ್ಲಿ ಹಣದ ವಹಿವಾಟುಗಳಿಗೆ ಬ್ಯಾಂಕ್ ಅಕೌಂಟ್ ಹೊಂದಿರುವುದು ಬಹಳ ಮುಖ್ಯ. ಮಕ್ಕಳಿಂದ ಹಿಡಿದು ದೊಡ್ಡವರವರೆಗು ಎಲ್ಲರೂ ಕೂಡ ಬ್ಯಾಂಕ್ ಅಕೌಂಟ್ ಹೊಂದಿರಬೇಕು. ಮಕ್ಕಳಿಗೆ ಶಾಲೆಯಲ್ಲಿ ಸ್ಕಾಲರ್ಶಿಪ್, ದೊಡ್ಡವರಿಗೆ ಆಫೀಸ್ ಇಂದ ಸಂಬಳ ಪಡೆಯಲು, ಹಣ ವರ್ಗಾವಣೆ ಮತ್ತು ಇನ್ನಿತರ ಹಲವು ಕಾರಣಗಳಿಗೆ ಬ್ಯಾಂಕ್ ಅಕೌಂಟ್ ಮುಖ್ಯವಾಗಿ ಬೇಕಾಗುತ್ತದೆ..
ಇನ್ನು ಕೆಲವರು ಸೇವಿಂಗ್ಸ್ ಗಾಗಿ ಬ್ಯಾಂಕ್ ಅಕೌಂಟ್ ಓಪನ್ ಮಾಡುತ್ತಾರೆ, ಆದರೆ ಒಂದು ಬ್ಯಾಂಕ್ ಅಕೌಂಟ್ ಓಪನ್ ಮಾಡಿದ ಮೇಲೆ ಅದರಲ್ಲಿ ಮಿನಿಮಮ್ ಬ್ಯಾಲೆನ್ಸ್ ಇರುವ ಹಾಗೆ ಮೇನ್ ಟೇನ್ ಮಾಡಬೇಕು. ಇಲ್ಲದೆ ಹೋದರೆ ನಿಮ್ಮ ಬ್ಯಾಂಕ್ ಅಕೌಂಟ್ In Active ಆಗಿಬಿಡುವ ನಿಯಮ ಕೆಲವು ಬ್ಯಾಂಕ್ ಗಳಲ್ಲಿ ಇರುತ್ತದೆ. ಸಾಮಾನ್ಯವಾಗಿ ಹಲವು ಬ್ಯಾಂಕ್ ಗಳಲ್ಲಿ ಮಿನಿಮಮ್ ₹1000 ರೂಪಾಯಿಗಳನ್ನು ಬ್ಯಾಂಕ್ ಅಕೌಂಟ್ ನಲ್ಲಿ ಇಡಬೇಕು ಎಂದು ಹೇಳುತ್ತಾರೆ.
ಒಂದು ವೇಳೆ ನೀವು ಅದನ್ನು ಮೇನ್ ಟೇನ್ ಮಾಡದೆ ಹೋದರೆ ನಿಮ್ಮ ಅಕೌಂಟ್ ಡೀ ಆಕ್ಟಿವೇಟ್ ಆಗುತ್ತದೆ. ಬ್ಯಾಂಕ್ ಅಕೌಂಟ್ ನಲ್ಲಿ ಎಷ್ಟು ಮಿನಿಮಮ್ ಬ್ಯಾಲೆನ್ಸ್ ಇರಬೇಕು ಎನ್ನುವುದು ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಬೇರೆ ಬೇರೆ ಮೊತ್ತವನ್ನು ನಿಗದಿ ಮಾಡಿರುತ್ತಾರೆ. ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮ ದೇಶದ ಎಲ್ಲಾ ನಾಗರೀಕರಿಗೆ ಜನ್ ಧನ್ ಖಾತೆ ಓಪನ್ ಮಾಡಿಸಿದ್ದಾರೆ, ಆ ಅಕೌಂಟ್ ಹೊಂದಿರುವವರು ಮಾತ್ರ ಮಿನಿಮಮ್ ಬ್ಯಾಲೆನ್ಸ್ ಮೇನ್ ಟೇನ್ ಮಾಡುವ ಅಗತ್ಯವಿಲ್ಲ. ಬೇರೆ ಬ್ಯಾಂಕ್ ಗಳಲ್ಲಿ ಮಿನಿಮಮ್ 1000 ಮಿನಿಮಮ್ ಬ್ಯಾಲೆನ್ಸ್ ಇಡಬೇಕು ಎನ್ನುವ ನಿಯಮ ಇರುತ್ತದೆ.
ನಿಮ್ಮ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ನಲ್ಲಿ ಎಷ್ಟು ಹಣ ಇಟ್ಟಿದ್ದರೆ ಒಳ್ಳೆಯದು ಎನ್ನುವ ಬಗ್ಗೆ ಇಂದು ನಿಮಗೆ ಮಾಹಿತಿ ತಿಳಿಸಿಕೊಡುತ್ತೇವೆ. ನೀವು ಸೇವಿಂಗ್ಸ್ ಅಕೌಂಟ್ ನಲ್ಲಿ ಉಳಿಸುವ ಹಣಕ್ಕೆ ಸಿಗುವ ಬಡ್ಡಿ ತುಂಬಾ ಕಡಿಮೆ, ಆದರೆ ಹೂಡಿಕೆ ರೂಪದಲ್ಲಿ ಹಣ ಇಟ್ಟಾಗ, ನಿಮಗೆ ಬಡ್ಡಿ ಮೊತ್ತ ಉತ್ತಮವಾಗಿ ಸಿಗುತ್ತದೆ. FD ಅಥವಾ RD ನಲ್ಲಿ ಉಳಿಸುವ ಹಣಕ್ಕೆ ಉತ್ತಮವಾದ ಬಡ್ಡಿದರ ಜೊತೆಗೆ ಹಣಕ್ಕೆ ಭದ್ರತೆ ಕೂಡ ಇರುತ್ತದೆ.
ಈ ಕಾರಣಕ್ಕೆ ನೀವು ದೊಡ್ಡ ಮೊತ್ತದ ಹಣವನ್ನು ಸೇವಿಂಗ್ಸ್ ಅಕೌಂಟ್ ನಲ್ಲಿ ಇಟ್ಟುಕೊಳ್ಳುವುದಕ್ಕಿಂತ ಮಿನಿಮಮ್ ಸಮಯಕ್ಕೆ FD ಮಾಡುವುದು ಒಳ್ಳೆಯದು. ಇದರಿಂದ ನಿಮಗೆ ಲಾಭ ಹೆಚ್ಚು. ಜೊತೆಗೆ ಎಮರ್ಜೆನ್ಸಿ ಇದ್ದಾಗ ಹಣವನ್ನು ವಾಪಸ್ ಪಡೆಯುವ ಆಯ್ಕೆ ಇರುವುದರಿಂದ ನಿಮ್ಮ ಹಣ ಸುರಕ್ಷಿತವಾಗಿ ಇರುತ್ತದೆ. ಒಂದು ವೇಳೆ ಸಾಲ ಇದ್ದರೆ, ಆಗ ನೀವು ಸೇವಿಂಗ್ಸ್ ಅಕೌಂಟ್ ನಲ್ಲಿ ಹಣ ಇಟ್ಟುಕೊಳ್ಳುವುದಕ್ಕಿಂತ ಸಾಲ ತೀರಿಸುವುದು ನಿಮಗೆ ಒಳ್ಳೆಯದು.