Bagar Hukum: ನಮ್ಮ ರಾಜ್ಯದ ಕಂದಾಯ ಇಲಾಖೆಯ ಈಗ ಬಗರ್ ಹುಕುಂ (Bagar Hukum) ಎನ್ನುವ ಹೊಸ ಸಮಿತಿ ರಚನೆ ಮಾಡಲಾಗಿದೆ. ರೈತರು ಸರ್ಕಾರದ ಕೃಷಿ ಭೂಮಿಯನ್ನು ಸಕ್ರಮ ಮಾಡಿಕೊಳ್ಳುವುದಕ್ಕೆ, ಫಾರ್ಮ್ 57 ಅನ್ನು ಫಿಲ್ ಮಾಡಿ..ಅರ್ಜಿ ಸಲ್ಲಿಸಬೇಕು. ರೈತರ ಅರ್ಜಿಗಳನ್ನು ಪರಿಶೀಲಿಸಿ, ಅವರಿಗೆ ಭೂಮಿಯನ್ನು ಸಕ್ರಮ ಮಾಡಿಕೊಡಲು ಹೊಸ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಬಗ್ಗೆ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ನಿನ್ನೆ ಮಾಹಿತಿ ನೀಡಿದ್ದಾರೆ.
ರೈತರಿಗೆ ಭೂಮಿಯನ್ನು ಸಕ್ರಮ ಮಾಡಿಕೊಡುವ ವಿಷಯದಲ್ಲಿ ಬಹಳ ಮೋಸ ನಡೆಯುತ್ತಿರುವ ಕಾರಣ, ಆದಷ್ಟು ಬೇಗ ಬಗರ್ ಹುಕುಂ ಸಮಿತಿಗಳನ್ನು ರಚಿಸಿ, ಇನ್ನು 8 ತಿಂಗಳುಗಳ ಒಳಗೆ ಸಮಸ್ಯೆಗಳನ್ನು ಪರಿಹರಿಸುವುದಾಗಿ ಹೇಳಿದ್ದಾರೆ. 15 ವರ್ಷಗಳಿಂದ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿರುವ ರೈತರಿಗೆ ಮಾತ್ರ ಭೂಮಿಯ ಸಕ್ರಮ ಮಾಡುವ ಅವಕಾಶ ನೀಡಲಾಗುತ್ತಿದೆ. ಹಾಗೆಯೇ ರೈತರಿಗೆ ಸಕ್ರಮ ಮಾಡಿಕೊಡುವ ಕ್ರಿಯೆಗೆ ತಂತ್ರಜ್ಞಾನ ಬಳಕೆ ಮಾಡಬೇಕು ಎನ್ನುವ ಚರ್ಚೆ ಕೂಡ ನಡೆಯುತ್ತಿದೆ.
1980ರಲ್ಲಿ ಸ್ವಂತ ಭೂಮಿ ಇಲ್ಲದ ರೈತರಿಗೆ 2 ಎಕರೆ ಭೂಮಿ ಕೊಡಬೇಕು ಎನ್ನುವ ನಿರ್ಧಾರವನ್ನು ಅಂದಿನ ಸರ್ಕಾರ ಮಾಡಿತ್ತು. ಆದರೆ ಈಗ ಜಮೀನಿ ಸಕ್ರಮ ಗೊಳಿಸುವ ಕೆಲಸ ಶುರು ಮಾಡಿದಾಗಿನಿಂದ ಅಕ್ರಮಗಳು ಬೆಳಕಿಗೆ ಬಂದಿವೆ ಎಂದು ತಿಳಿಸಿದ್ದಾರೆ. ಒಬ್ಬರೇ ವ್ಯಕ್ತಿ 25 ಅರ್ಜಿ ಹಾಕಿದ್ದಾರೆ, ಮೀನು ಸಾಗುವಳಿಯನ್ನು ಮಾಡದೇ ಇರುವ ವ್ಯಕ್ತಿಗಳು ಅರ್ಜಿ ಹಾಕಿದ್ದಾರೆ. ಇಂಥ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಬಗರ್ ಹುಕುಂ ಸಮಿತಿಯ ರಚನೆ ಮಾಡಲಾಗುತ್ತಿದೆ.
ಸರ್ಕಾರಕ್ಕೆ ಬಗರ್ ಹುಕುಂ ಸಮಿತಿ ಬಗ್ಗೆ 50 ಪ್ರಸ್ತಾವಣೆಗಳು ಬಂದಿದ್ದು ಶೀಘ್ರದಲ್ಲೇ ಅದರ ರಚನೆ ಆಗಲಿದೆ. ಈ ಸಮಿತಿಯ ಮೂಲಕ ಎಲ್ಲಾ ರೈತರ ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸಿ, ಅರ್ಹತೆ ಇರುವ ರೈತರಿಗೆ ಮಾತ್ರ ಭೂಮಿಯನ್ನು ಸಕ್ರಮ ಮಾಡಿಕೊಡಲಾಗುತ್ತದೆ. ಈ ಬಗ್ಗೆ ಎಲ್ಲಾ ತಹಸೀಲ್ದಾರ್ ಗಳಿಗೆ ಸೂಚನೆ ನೀಡಲಾಗಿದೆಯಂತೆ. ಸಮಿತಿಯ ಎಲ್ಲಾ ಸದಸ್ಯರ ಹಾಜರಿಯನ್ನು ಬಯೋಮೆಟ್ರಿಕ್ ಮೂಲಕ ಖಚಿತಪಡಿಸಿಕೊಳ್ಳಲಾಗುತ್ತದೆ.