ಹಳ್ಳಿಗಳಲ್ಲಿ ಕೃಷಿ ಹಾಗೂ ನೀರಿನ ವಿಚಾರಕ್ಕೆ ಸಮಸ್ಯೆ ಆಗುವುದು ಖಂಡಿತ. ಆ ರೀತಿ ಇರುವಾಗ ಮಧ್ಯಪ್ರದೇಶದ, ಆಗ್ರೋದ ಗ್ರಾಮ. ಈ ಗ್ರಾಮದಲ್ಲಿ ವಾಸ ಮಾಡುತ್ತಿರುವುದು 1400 ಜನ ಮಾತ್ರ. ಈ ಊರಿನ ಸುತ್ತಲೂ ಬಾವಿಗಳಿವೆ, ಕೆರೆಗಳು ಇದೆ. ಮಳೆಗಾಲ ಇದ್ದಾಗ ಇವರಿಗೆ ಯಾವುದೇ ಸಮಸ್ಯೆ ಇಲ್ಲ. ಕುಡಿಯೋಕೆ, ಮನೆ ಕೆಲಸ ಮಾಡೋಕೆ, ಕೃಷಿ ಕೆಲಸಕ್ಕೆ ಎಲ್ಲದಕ್ಕೂ ನೀರು ಸಿಗುತ್ತದೆ. ಆದರೆ ಬೇಸಿಗೆ ಕಾಲ ಇರುವಾಗ ಕಷ್ಟ ಅನುಭವಿಸುತ್ತಾರೆ.
ಬೇಸಿಗೆ ವೇಳೆ ಬಾವಿಗಳು ಬತ್ತಿ ಹೋಗುತ್ತದೆ, ಕೆರೆಯಲ್ಲೂ ನೀರು ಸಿಗುವುದಿಲ್ಲ. ಇವರಿಗೆ ಕುಡಿಯಲು, ಕೃಷಿಗೂ ನೀರಿಲ್ಲದೆ ನರಕ ಅನುಭವಿಸುವ ಪರಿಸ್ಥಿತಿ ಇರುತ್ತದೆ. ಆದರೆ ಇವರ ಗ್ರಾಮದ ಹತ್ತಿರ ಬೆಟ್ಟಗಳಿದ್ದು, ಅದರಿಂದ ಇಡೀ ವರ್ಷ ನೀರು ಹರಿದು ಬರುತ್ತದೆ. ಆ ನೀರನ್ನು ಕೆರೆಗೆ ಬರುವ ಹಾಗೆ ಕನೆಕ್ಟ್ ಮಾಡಿದರೆ ಇವರ ಗ್ರಾಮಕ್ಕೆ ನೀರಿನ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಆದರೆ ಅದು ಸುಲಭದ ಕೆಲಸವಲ್ಲ..
ಒಂದು ಬೆಟ್ಟ ಅಡ್ಡವಾಗಿದ್ದು, ಆ ಬೆಟ್ಟವನ್ನು ಕಡಿದು ಕೆಲಸ ಮಾಡಬೇಕಿತ್ತು. ಆದರೆ ಅದಕ್ಕೆ ಅರಣ್ಯ ಇಲಾಖೆ ಅನುಮತಿ ಕೊಟ್ಟಿರುವುದಿಲ್ಲ. ಹೀಗಿದ್ದಾಗ ಊರಿನ ಜನರಿಗೆ ನೀರಿನ ಸಮಸ್ಯೆ ಆಗುತ್ತಿದ್ದನ್ನು ನೋಡಿ, ಪ್ರತಿ ದಿನ ಬೇರೆ ಊರಿನಿಂದ ನೀರು ಹೊತ್ತು ಸಾಕಾಗಿದ್ದ 19 ವರ್ಷದ ಹುಡುಗಿ ಬಬಿತಾ, ಪ್ರತಿದಿನ ಅರಣ್ಯ ಇಲಾಖೆಗೆ ಓಡಾಡಿ, ಅಧಿಕಾರಿಗಳ ಜೊತೆಗೆ ಮಾತನಾಡಿ, ತಮ್ಮ ಗ್ರಾಮದ ಸಮಸ್ಯೆಯನ್ನು ತಿಳಿಸಿ ಹೇಳಿ, ಬೆಟ್ಟವನ್ನು ಕಡಿಯುವುದಕ್ಕೆ ಪರ್ಮಿಶನ್ ತಂದಳು.
ಆಕೆ ಪರ್ಮಿಶನ್ ತಂದಮೇಲೆ ಕೂಡ ಊರಿನ ಗಂಡಸರು ಬೆಟ್ಟ ಕಡಿಯಲು ತಲೆಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವಿದ್ದರು. ಛಲಬಿಡದ ಬಬಿತಾ ತನ್ನ 12 ಫ್ರೆಂಡ್ಸ್ ಗಳ ಜೊತೆ ಸೇರಿ, ಬೆಟ್ಟ ಕಡಿಯುವುದಕ್ಕೆ ಶುರು ಮಾಡಿದಳು, ಆಕೆಯ ಜೊತೆಗೆ ಗ್ರಾಮದ 200 ಮಹಿಳೆಯರು ಕೈಜೋಡಿಸಿದರು. ಇಷ್ಟು ಮಹಿಳೆಯರು 18 ತಿಂಗಳುಗಳ ಕಾಲ ಕಷ್ಟಪಟ್ಟು, ಅರ್ಧ ಕಿಲೋಮೀಟರ್ ಇದ್ದ ಬೆಟ್ಟವನ್ನು ಕಡಿದರು. ಇಷ್ಟೆಲ್ಲಾ ಪರಿಶ್ರಮ ಪಟ್ಟ ನಂತರ ಕೊನೆಗೂ ಈ ಗ್ರಾಮಕ್ಕೆ ನೀರಿನ ಸೌಲಭ್ಯ ಸಿಕ್ಕಿದೆ. 19 ವರ್ಷದ ಒಬ್ಬ ಹುಡುಗಿ ಧೈರ್ಯದಿಂದ ತೆಗೆದುಕೊಂಡ ಈ ನಿರ್ಧಾರದಿಂದ ಇಡೀ ಗ್ರಾಮಕ್ಕೆ ಬೆಳಕು ಸಿಕ್ಕಿದೆ ಎಂದು ಹೇಳಬಹುದು.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.