ಜ್ಯೋತಿಷ್ಯ ಶಾಸ್ತ್ರದಲ್ಲಿ ದ್ವಾದಶ ರಾಶಿಗಳೊಂದಿಗೆ ಶನಿ ದೇವನು ಪ್ರಮುಖನಾಗಿದ್ದಾನೆ. ಕಾಗೆಯನ್ನು ವಾಹನವನ್ನಾಗಿ ಮಾಡಿಕೊಂಡ ಶನಿದೇವನ ವಕ್ರ ದೃಷ್ಟಿ ಯಾರ ಮೇಲಾದರೂ ಬಿದ್ದರೆ ಅವರಿಗೆ ಕಷ್ಟ ತಪ್ಪಿದ್ದಲ್ಲ ಹಾಗೆಯೆ ಅವನ ಒಳ್ಳೆಯ ದೃಷ್ಟಿಯಿಂದ ಅಪಾರ ಪ್ರಮಾಣದಲ್ಲಿ ಒಳ್ಳೆಯದಾಗುತ್ತದೆ. ಹಾಗಾದರೆ ಶನಿ ದೇವನ ಮಹತ್ವ ಹಾಗೂ ಯಾವ ರಾಶಿಯ ಮೇಲೆ ಯಾವ ಪರಿಣಾಮ ಬೀರಲಿದ್ದಾನೆ ಎಂದು ಈ ಲೇಖನದ ಮೂಲಕ ತಿಳಿಯೋಣ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವನು ಯಾರಿಗಾದರೂ ದಯೆ ತೋರಿದರೆ ಅದೃಷ್ಟ ಬೆಳಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಅಂದರೆ ಆ ವ್ಯಕ್ತಿಯ ಜೀವನದಲ್ಲಿ ಸಂತೋಷ ತುಂಬಿರುತ್ತದೆ. ಅದೆ ರೀತಿ ಶನಿದೇವನ ವಕ್ರ ಕಣ್ಣುಗಳು ಯಾರ ಮೇಲಾದರೂ ಬಿದ್ದಾಗ ಆ ವ್ಯಕ್ತಿಯ ಜೀವನದಲ್ಲಿ ಬೀರುಗಾಳಿಯೆ ಏಳುತ್ತದೆ ಆ ವ್ಯಕ್ತಿ ಜೀವನದಲ್ಲಿ ಪೆಟ್ಟು ತಿನ್ನುತ್ತಿರುತ್ತಾನೆ. ಅವರ ಆರ್ಥಿಕ ಪರಿಸ್ಥಿತಿ ಬಹಳ ಹದಗೆಡಲಿದ್ದು, ಬಡತನದ ಸ್ಥಿತಿಯನ್ನು ತಲುಪುತ್ತಾರೆ. ಶನಿದೇವನು ಪ್ರತಿಯೊಬ್ಬರ ಜೀವನದ ಮೇಲೆ ವಿಶೇಷ ಪರಿಣಾಮ ಬೀರುತ್ತಾನೆ. ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಶನಿಯು ತನ್ನ ರಾಶಿಯನ್ನು ಬದಲಾಯಿಸುತ್ತಾನೆ.

ಶನಿಯು ಪ್ರಸ್ತುತ ಮಕರ ರಾಶಿಯಲ್ಲಿದ್ದಾನೆ. 2022ರಲ್ಲಿ ಶನಿದೇವನು ತನ್ನದೆ ಆದ ರಾಶಿಚಕ್ರದ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶನಿದೇವನು ತನ್ನ ಸ್ವಂತ ರಾಶಿಗೆ ಬರುವುದರಿಂದ ಶನಿ ಸಾಡೆ ಸಾತಿ ಮತ್ತು ಶನಿದೆಸೆ ಇವು ಯಾವ ರಾಶಿಯ ಜನರ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಬೇಕು. ಶನಿದೇವನು 2022ರಲ್ಲಿ ಏಪ್ರಿಲ್ 29ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಎರಡೂವರೆ ವರ್ಷಕ್ಕೊಮ್ಮೆ ರಾಶಿಯನ್ನು ಬದಲಾಯಿಸುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ 3 ವರ್ಷಗಳ ನಂತರ ಶನಿಯು ತನ್ನದೆ ಆದ ರಾಶಿಚಕ್ರ ಚಿಹ್ನೆ ಕುಂಭಕ್ಕೆ ಮರಳುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2022ರಲ್ಲಿ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ ಕೂಡಲೆ ಧನು ರಾಶಿಯವರಿಗೆ ಸಾಡೆ ಸಾತಿ ದೂರವಾಗುತ್ತದೆ ಆದರೆ ಸಾಡೆ ಸಾತಿಯ ಮೊದಲ ಹಂತವು ರಾಶಿಚಕ್ರದ ಕೊನೆಯ ಚಿಹ್ನೆಯಾದ ಮೀನ ರಾಶಿಯಲ್ಲಿ ಪ್ರಾರಂಭವಾಗುತ್ತದೆ.

ಇನ್ನೊಂದೆಡೆ ಕುಂಭ ರಾಶಿಯಂದು 2ನೇ ಹಂತದ ಸಾಡೇ ಸಾತಿ ಆರಂಭವಾಗಲಿದೆ. ಇದಲ್ಲದೆ ಮಕರ ರಾಶಿಯಲ್ಲಿ ಸಾಡೆ ಸಾತಿಯ ಕೊನೆಯ ಘಟ್ಟ ಆರಂಭವಾಗಲಿದೆ. 2022ರಲ್ಲಿ ಶನಿಯ ಸಂಕ್ರಮಣದ ನಂತರ ಶನಿದೆಸೆ 2 ರಾಶಿಚಕ್ರ ಚಿಹ್ನೆಗಳಲ್ಲಿ ಪ್ರಾರಂಭವಾಗುತ್ತದೆ. 2022 ರಲ್ಲಿ ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಚಿಹ್ನೆಗಳು ಶನಿದೆಸೆ ಅಡಿಯಲ್ಲಿ ಬರುತ್ತವೆ.

ಇಂತಹ ಪರಿಸ್ಥಿತಿಯಲ್ಲಿ ಕರ್ಕ ಮತ್ತು ವೃಶ್ಚಿಕ ರಾಶಿಯವರು ಬಹಳ ಜಾಗರೂಕರಾಗಿರಬೇಕು ಶನಿ ಈ ರಾಶಿಯವರ ಮೇಲೆ ವಕ್ರ ದೃಷ್ಟಿ ಇದೆ ಎಂದರ್ಥ. ಮತ್ತೊಂದೆಡೆ ಮಿಥುನ ಮತ್ತು ತುಲಾ ರಾಶಿಯ ಜನರು ಶನಿದೆಸೆಯಿಂದ ಮುಕ್ತರಾಗುವ ಸಮಯ ಬಂದಾಗಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನಿಮ್ಮ ರಾಶಿ ಯಾವುದು ನಿಮ್ಮ ರಾಶಿಯ ಮೇಲೆ ಶನಿ ಯಾವ ದೃಷ್ಟಿಯನ್ನು ಇಟ್ಟಿದ್ದಾನೆ ಎಂಬುದನ್ನು ನೋಡಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!