18 ವರ್ಷಗಳ ನಂತರ ಮೇಷ ರಾಶಿಗೆ ರಾಹು ಪ್ರವೇಶ, ತುಲಾ ರಾಶಿಗೆ ಕೇತು ಪ್ರವೇಶ ಮಾಡುವುದರಿಂದ ಕೆಲವು ರಾಶಿಗಳಿಗೆ ವಿಪರೀತ ರಾಜಯೋಗ ಸಿಗಲಿದೆ. ಹಾಗಾದರೆ ಯಾವ ರಾಶಿಯವರಿಗೆ ಒಳ್ಳೆಯದಾಗುತ್ತದೆ, ಉಳಿದ ರಾಶಿಯವರಿಗೆ ಪರಿಹಾರವೇನು ಎಂಬುದರ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಒಂದುವರೆ ವರ್ಷಕ್ಕೊಮ್ಮೆ ರಾಹು ಕೇತುಗಳ ಸ್ಥಾನ ಬದಲಾಗುತ್ತದೆ. ಈ ಬಾರಿ ಮೇಷ ರಾಶಿಗೆ ರಾಹು ಪ್ರವೇಶ, ತುಲಾ ರಾಶಿಗೆ ಕೇತು ಪ್ರವೇಶ ಮಾಡುತ್ತಾರೆ. ವೃಶ್ಚಿಕ ರಾಶಿಗೆ 6ನೆ ಮನೆಯಲ್ಲಿ ರಾಹು 12ನೆ ಮನೆಗೆ ಕೇತು ಇರುವುದರಿಂದ ವೃಶ್ಚಿಕ ರಾಶಿಯವರಿಗೆ ವಿಪರೀತ ರಾಜಯೋಗ ಸಿಗಲಿದೆ ಶತ್ರು ಸಂಹಾರವಾಗುತ್ತದೆ. ವೃಶ್ಚಿಕ ರಾಶಿಯವರಿಗೆ ಶುಭ ಖರ್ಚು ಹೆಚ್ಚಾಗುತ್ತದೆ. ದೈವಿಕ ಅನುಭವವಾಗಿ ದೇವರು, ಗುರುಗಳ, ಪೂರ್ವಿಕರ ಸಂಪೂರ್ಣ ಆಶೀರ್ವಾದ ಸಿಗಲಿದೆ. ನಮ್ಮ ದೇಶದ ಪ್ರಧಾನಿ ಮೋದಿ ವಿಶ್ವಮಟ್ಟದಲ್ಲಿ ನಾಯಕರಾಗಿದ್ದಾರೆ ಅವರ ರಾಶಿ ವೃಶ್ಚಿಕರಾಶಿಯಾಗಿದ್ದು ರಾಜಯೋಗ ಸಿಗಲಿದೆ.
ಮಿಥುನ ರಾಶಿಗೆ 11ನೆ ಮನೆಯಲ್ಲಿ ರಾಹು, 5ನೆ ಮನೆಯಲ್ಲಿ ಕೇತು ಇರುವುದರಿಂದ ಮಿಥುನ ರಾಶಿಯವರಿಗೆ ರಾಜಯೋಗ ಸಿಗಲಿದೆ. 11 ನೆ ಮನೆ ಲಾಭ ಸ್ಥಾನವಾಗಿದ್ದು ಬರಬೇಕಾದ ಹಣ ಬರುತ್ತದೆ, ಬೇರೆಯವರಿಂದ ಸಹಾಯ ಸಿಗುತ್ತದೆ. ಕನ್ಯಾ ರಾಶಿಗೆ 8ನೇ ಮನೆಯಲ್ಲಿ ರಾಹು, ಎರಡನೆ ಮನೆಯಲ್ಲಿ ಕೇತು ಇರುವುದರಿಂದ ಕನ್ಯಾ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಇವರಿಗೆ ಗುಪ್ತ ನಿಧಿ ಸಿಗುವ ಸಂಭವವಿದೆ, ತಂದೆ, ತಾಯಿ ಅಥವಾ ಯಾರಾದರೂ ತುಂಬಾ ದಿನಗಳಿಂದ ಸಂಗ್ರಹ ಮಾಡಿರುವ ಹಣವನ್ನು ಕೊಡುತ್ತಾರೆ, ಬ್ಯಾಂಕ್, ಪೋಸ್ಟ್ ಆಫೀಸ್ ಗಳಲ್ಲಿ ನೀವು ಕಟ್ಟಿರುವ ಹಣ ಡಬಲ್ ಆಗಿ ಬರಬಹುದು.
ಕುಂಭ ರಾಶಿಗೆ ಮೂರನೆ ಮನೆಯಲ್ಲಿ ರಾಹು, ಒಂಭತ್ತನೆ ಮನೆಯಲ್ಲಿ ಕೇತು ಇರುವುದರಿಂದ ಈ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಈ ರಾಶಿಯವರಿಗೆ ಬಹಳ ದಿನಗಳಿಂದ ಪ್ರಯತ್ನಿಸಿ ಫಲ ಸಿಗುವುದಿಲ್ಲ ಈಗ ಪ್ರಯತ್ನಕ್ಕೆ ಫಲ ಸಿಗಲಿದೆ. ಕುಂಭ ರಾಶಿಯವರಿಗೆ ಲಾಭ ಬರುವ ಸಂಭವವಿದೆ. ಉಳಿದ ರಾಶಿಯವರಿಗೆ ಒಳ್ಳೆಯದಾಗುವುದಿಲ್ಲ ಎಂದಲ್ಲ ಭಾನುವಾರದಂದು ಶಿವನ ದೇವಾಲಯಕ್ಕೆ ಹೋಗಿ ಪೂಜೆ, ಅಭಿಷೇಕ ಮಾಡಬೇಕು,
100 ಗ್ರಾಂ ನ 2 ಪಾಕೆಟ್ ವಿಭೂತಿಯನ್ನು ತೆಗೆದುಕೊಂಡು ಹೋಗಿ ಒಂದು ಪಾಕೆಟ್ ಶಿವನ ಮುಂದೆ ಇಟ್ಟು ಇನ್ನೊಂದು ಪಾಕೆಟ್ ಅನ್ನು ಮನೆಗೆ ತೆಗೆದುಕೊಂಡು ಹೋಗಿ ಕೈಯಲ್ಲಿ ಪಾಕೆಟ್ ಇಟ್ಟುಕೊಂಡು ಸರ್ಪಮುದ್ರೆಯನ್ನು ಹಾಕಿ ವಿನಾಯಕನ ಶ್ಲೋಕವನ್ನು, ಹಣದ ಸಮಸ್ಯೆ ಆಗಬಾರದು ಎಂದು ಲಕ್ಷ್ಮಿ ಶ್ಲೋಕವನ್ನು, ನಾಗದೇವತೆ ಶ್ಲೋಕವನ್ನು ಪಠಿಸಬೇಕು. ನಂತರ ಆ ವಿಭೂತಿಯನ್ನು ಭದ್ರವಾಗಿ ಇಟ್ಟುಕೊಂಡು ಪ್ರತಿದಿನ ಹಣೆಗೆ ಹಚ್ಚಿಕೊಳ್ಳಬೇಕು. ಶಾಲೆಗೆ ಹೋಗುವ ಮಕ್ಕಳು ಇಟ್ಟುಕೊಂಡು ಹೋಗಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ.